Home » Bigg Boss Divya Suresh : ಮತ್ತೆ ಪ್ರೀತಿಯ ಬಲೆಯಲ್ಲಿ ಬಿದ್ದ ದಿವ್ಯಾ ಸುರೇಶ್! ಯಾರೀತ?

Bigg Boss Divya Suresh : ಮತ್ತೆ ಪ್ರೀತಿಯ ಬಲೆಯಲ್ಲಿ ಬಿದ್ದ ದಿವ್ಯಾ ಸುರೇಶ್! ಯಾರೀತ?

1 comment
Divya Suresh

Divya Suresh : ದಿವ್ಯಾ ಸುರೇಶ್(Divya Suresh)ಕಳೆದ ವರ್ಷ ರೌಡಿ ಬೇಬಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಬಿಗ್ ಬಾಸ್ (Bigg Boss Kannada)ಸ್ಪರ್ಧಿಯಾಗಿದ್ದರು. ದೊಡ್ಮನೆಯಿಂದ ಹೊರ ಬಂದ ಬಳಿಕ ಸೀರಿಯಲ್ಗಳತ್ತ ಮುಖ ಮಾಡಿರುವ ದಿವ್ಯಾ ಅವರು ಸದ್ಯ ತ್ರಿಪುರ ಸುಂದರಿ (Tripura Sundari) ಸೀರಿಯಲ್‌ನಲ್ಲಿ ಆಮ್ರಪಾಲಿ ಪಾತ್ರದಲ್ಲಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಇದೀಗ, ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ತನ್ನ ಬಾಯ್ ಫ್ರೆಂಡ್ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ (Social Media)ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಶೋನಲ್ಲಿ ದಿವ್ಯಾ ಉರುಡುಗ, ಅರವಿಂದ್ ಕೆಪಿ, ಮಂಜು ಪಾವಗಡ ಜೊತೆ ದಿವ್ಯಾ ಸುರೇಶ್ ಕೂಡ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು.ರಿಯಾಲಿಟಿ ಶೋ ಬಿಗ್ ಬಾಸ್‌ನಿಂದ ಗಮನ ಸೆಳೆದ ಸ್ಪರ್ಧಿ ದಿವ್ಯಾ ಸುರೇಶ್‌ಗೆ ಈ ಹಿಂದೆ ರಾಕೇಶ್ ಅಡಿಗ (Rakesh Adiga) ಜೊತೆ ಎಂಗೇಜ್ ಆಗಿದ್ದರು ಸೊಂಟದಲ್ಲಿ ಎಂಬ ಗುಸು ಗುಸು ಸುದ್ದಿ ಕೇಳಿ ಬರುತ್ತಿತ್ತು. ಆ ಬಳಿಕ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು ಅನ್ನೋ ಮಾತುಗಳು ಕೂಡ ಹರುದಾಡಿದ್ದವು. ಸದ್ಯ, ಇಬ್ಬರು ತಮ್ಮ ತಮ್ಮ ಕೆರಿಯರ್ ಕಡೆಗೆ ಗಮನ ನೀಡುತ್ತಿದ್ದಾರೆ. ಸದ್ಯ ದಿವ್ಯಾ ಅವರ ಬಾಯ್‌ಫ್ರೆಂಡ್ ಬರ್ತ್‌ಡೇಗೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದು, ಈ ಸುದ್ಧಿ ಎಲ್ಲೆಡೆ ಹರಿದಾಡಿ ಸಂಚಲನ ಮೂಡಿಸಿದೆ.

ಇತ್ತೀಚಿಗೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ಹ್ಯಾಪಿ ಬರ್ತ್‌ಡೇ ಲವ್’ ಎಂದು ಗೆಳೆಯನಿಗೆ ದಿವ್ಯಾ ಶುಭಹಾರೈಸಿದ್ದಾರೆ. ಸದ್ಯ ಎಂಗೇಜ್ ಆಗಿರುವ ಬಗ್ಗೆ ಸಣ್ಣ ಸುಳಿವು ನೀಡಿರುವ ನಟಿ ದಿವ್ಯಾ, ಸದ್ಯದಲ್ಲೇ ಮದುವೆಯ ಕುರಿತ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಆದರೆ, ಹುಡುಗನ ಬಗ್ಗೆ ಯಾವುದೇ ರೀತಿಯ ಗುಟ್ಟನ್ನು ನಟಿ ಬಿಟ್ಟು ಕೊಟ್ಟಿಲ್ಲ ಎನ್ನಲಾಗಿದೆ. ಹೀಗಾಗಿ, ದಿವ್ಯಾ ಅಭಿಮಾನಿಗಳು ಹುಡುಗ ಯಾರು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

 

ಇದನ್ನು ಓದಿ : Relationship : ಹೆಂಡತಿಯೋರ್ವಳ ಫೈನಾನ್ಸ್ ಉದ್ಯೋಗಿ ಜೊತೆ ಲವ್ವಿ ಡವ್ವಿ; ಇಬ್ಬರು ಮಕ್ಕಳ ಗೋಳಾಟ, ಕರಗದ ತಾಯಿ ಹೃದಯ! 

You may also like

Leave a Comment