Home » RCB: RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಡಿಕೆಶಿ : ಬೆಂಗಳೂರಿನಲ್ಲೇ ಐಪಿಎಲ್‌ ಫಿಕ್ಸ್‌ ಡಿಸಿಎಂ ಘೋಷಣೆ

RCB: RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಡಿಕೆಶಿ : ಬೆಂಗಳೂರಿನಲ್ಲೇ ಐಪಿಎಲ್‌ ಫಿಕ್ಸ್‌ ಡಿಸಿಎಂ ಘೋಷಣೆ

0 comments

RCB: RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಒಂದನ್ನು ಡಿಕೆಶಿ ನೀಡಿದ್ದಾರೆ. ಹೌದು, ಬೆಂಗಳೂರಿನಲ್ಲೇ ಐಪಿಎಲ್‌ ಫಿಕ್ಸ್‌ ಎಂದು ಸ್ವತಃ ಡಿಸಿಎಂ ಘೋಷಣೆ ಮಾಡಿದ್ದಾರೆ.

ಹೌದು, 19ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಎಲ್ಲಾ ಪಂದ್ಯಗಳು ಬೆಂಗಳೂರಿನಿಂದಲೇ ಎತ್ತಂಗಡಿ ಆಗುವ ಆತಂಕದಲ್ಲಿದ್ದ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. 2026ರ ಐಪಿಎಲ್‌ಗೆ ಆರ್‌ಸಿಬಿ ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಖುದ್ದು ಡಿಸಿಎಂ ಡಿಕೆ ಶಿವಕುಮಾರ್‌ ಘೋಷಣೆ ಮಾಡಿದ್ದಾರೆ.

ನಗರದಲ್ಲಿ ಕೆಎಸ್‌ಸಿಎ ಚುನಾವಣೆಯ ಮತದಾನದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್‌, ನಾನು ಕ್ರಿಕೆಟ್‌ ಲವರ್‌, ಆರ್‌ಸಿಬಿ ನಮ್ಮ ಹೆಮ್ಮೆ. ಯಾವುದೇ ಕಾರಣಕ್ಕೂ ನಮ್ಮಿಂದ ಐಪಿಎಲ್‌ ಕೈ ತಪ್ಪೋದಿಲ್ಲ. ಬೆಂಗಳೂರಿನಲ್ಲೇ ನಡೆಯುತ್ತೆ, ನಾನ್‌ ಎಲ್ಲಾ ಮಾತನಾಡ್ತೀನಿ ಅಂತ ತಿಳಿಸಿದ್ದಾರೆ.

You may also like