Rakhi Sawant: ರಾಖಿ ಸಾವಂತ್( Rakhi Sawant)ಅವರ ಮಾಜಿ ಪತಿ ಆದಿಲ್ ಖಾನ್ ದಿಢೀರ್ ಆಗಿ ಪ್ರತ್ಯಕ್ಷರಾಗಿದ್ದು, ರಾಖಿ ಸಾವಂತ್ ಅವರ ಮಾಜಿ ಪತಿ ಮೈಸೂರು ಮೂಲಕದ ಆದಿಲ್ ಖಾನ್ (Adil Khan)ಮತ್ತೆ ಕಾಣಿಸಿಕೊಂಡಿದ್ದಾರೆ.
ರಾಖಿ ಸಾವಂತ್ ಅವರು ಆರೋಪ ಮಾಡಿದ ಬಳಿಕ ಕಾಣೆಯಾಗಿದ್ದ ಆದಿಲ್ ಈಗ ಮತ್ತೆ ಕ್ಯಾಮೆರಾದ ಕಣ್ಣಲ್ಲಿ ಸೆರೆಯಾಗಿದ್ದಾರೆ.ರಾಖಿ ಸಾವಂತ್ ಮೊದಲ ಪತಿಯಿಂದ ದೂರವಾಗಿ, ಆದಿಲ್ ಖಾನ್ ಅವರನ್ನು ಎರಡನೇ ಮದುವೆಯಾಗಿದ್ದರು. ಆದ್ರೆ, ಇಲ್ಲು ಕೂಡ ಇವರ ನಡುವೆ ಜಗಳ ಉಂಟಾಗಿ ರಾಖಿ ಸಾವಂತ್ ಪೋಲೀಸ್ ಠಾಣೆ ಮೆಟ್ಟಿಲೇರಿದ್ದರು.
ಪ್ರೀತಿಸಿ( love)ಮದುವೆಯಾಗುವ (Marraige)ಭರವಸೆ ನೀಡಿ ಮೋಸ ಮಾಡಿ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎಂದು ಆರೋಪಿಸಿ ರಾಖಿ ಸಾವಂತ್ ಆದಿಲ್ ಅವರ ಬಗ್ಗೆ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಆತ ತನ್ನನ್ನು ಫೇಮ್ಗಾಗಿ ಬಳಸಿಕೊಂಡಿದ್ದಾನೆ ಎಂದು ನಟಿ ರಾಖಿ ಸಾವಂತ್ ಆರೋಪ ಮಾಡಿದ್ದರು.
ರಾಖಿ ಸಾವಂತ್ ಮತ್ತು ಆದಿಲ್ ಇಬ್ಬರು ಗುಟ್ಟಾಗಿ ಮದುವೆ ಆಗಿದ್ದರಂತೆ. ಇವರ ಮದುವೆ ರಹಸ್ಯವಾಗಿ ನಡೆದಿದ್ದ ಹಿನ್ನೆಲೆ ಈ ವಿಚಾರವನ್ನು ಎಲ್ಲರ ಮುಂದೆ ಹೇಳಿಕೊಳ್ಳಲು ಆದಿಲ್ ಹಿಂದೇಟು ಹಾಕುತ್ತಿದ್ದಾಗ ಜೊತೆಗೆ ಆದಿಲ್ ವಿವಾಹದಿಂದ ಹಿಂಜರಿದ ಸಂದರ್ಭದಲ್ಲಿ ರಾಖಿ ಸಾವಂತ್ ತಾನು ಹಾಗೂ ಆದಿಲ್ ಮದುವೆಯಾಗಿರುವ ಫೋಟೋ, ಡಾಕ್ಯುಮೆಂಟ್ಸ್ ಆನ್ಲೈನ್ನಲ್ಲಿ ಶೇರ್ ಮಾಡಿ ಎಲ್ಲರನ್ನು ಅಚ್ಚರಿಗೆ ನೂಕಿದ್ದರು. ಇದೀಗ, ಆದಿಲ್ ಖಾನ್ ಪ್ರತ್ಯಕ್ಷ ರಾಗಿ ತಮ್ಮ ಮೇಲಿರುವ ಆರೋಪಕ್ಕೆ ಸ್ಪಷ್ಟನೆ ನೀಡಲು ಅಣಿಯಾಗಿದ್ದಾರೆ.
ಆದಿಲ್ ಮಾಧ್ಯಮದ ಮುಂದ ಬಂದು ಸತ್ಯ ಹೇಳುವ ಬಗ್ಗೆ ಮಾಹಿತಿ ನೀಡಿದ್ದು,ನನ್ನ ಕಡೆ ಸತ್ಯವಿದೆ. ಅದನ್ನು ನಾನು ಬಹಿರಂಗ ಪಡಿಸಿದರೆ ಎಲ್ಲರಿಗೂ ಯಾರು ತಪ್ಪಿತಸ್ಥರು ಎಂಬುದು ತಿಳಿಯುತ್ತದೆ. ರಾಖಿ ನನ್ನನ್ನು ಬೇಕೆಂದೇ ಅವಳಿಷ್ಟ ಬಂದಂತೆ ಫ್ರೇಮ್ ಮಾಡಿದ್ದಾಗಿ ಆದಿಲ್ ರಾಖಿ ಮೇಲೆ ಆರೋಪ ಮಾಡಿದ್ದಾರೆ. ಇಂದು ಇಲ್ಲವೇ ನಾಳೆ ಪ್ರೆಸ್ ಕಾನ್ಫರೆನ್ಸ್ ಮಾಡಿ, ನಾನು ಕೋಟಿ ಕೊಡಬೇಕೋ ಇಲ್ಲವೇ ನನಗೆ ಕೋಟಿ ಬರಬೇಕೋ ಎಂಬುದು ಎಲ್ಲರ ಮುಂದೆ ಬಯಲಾಗುತ್ತದೆ ಎಂದು ಆದಿಲ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ಸುರತ್ಕಲ್ ಜೆಸಿಬಿ ಬಳಸಿ ಎಟಿಎಂ ದರೋಡೆ ಯತ್ನ ಪ್ರಕರಣ: ನಾಲ್ವರ ಬಂಧನ!
