Alia Bhatt video Viral: ಸಿನಿಮಾ ರಂಗದಲ್ಲಿ ಹಲವಾರು ಸವಾಲು, ಪ್ರಶ್ನೆ ಅನಿವಾರ್ಯವಾಗಿ ಎದುರಿಸಲೇ ಬೇಕು. ಒಂದಷ್ಟು ಜನ ಪಾಸಿಟಿವ್ ಹೇಳಿದರೆ, ಇನ್ನಷ್ಟು ಜನ ನೆಗೆಟಿವ್ ಹರಡುತ್ತಾರೆ. ಇದೀಗ ಹಲವಾರು ಸ್ಟಾರ್ ನಟಿಯರಿಗೆ ಸಿನಿರಂಗದಲ್ಲಿ ಕಳೆದ ಕೆಲ ದಿನಗಳ ಹಿಂದೆ ಸಂಚಲನ ಸೃಷ್ಟಿಸಿರುವ ಡೀಪ್ ಫೇಕ್ ವಿಡಿಯೋ ವಿಚಾರದಲ್ಲಿ ತಲೆ ನೋವು ಆಗಿದೆ.
ಇದೀಗ ಮತ್ತೊಬ್ಬ ಸ್ಟಾರ್ ನಟಿಯ ಹೆಸರು ಕೇಳಿ ಬಂದಿದ್ದು, ಬಾಲಿವುಡ್ ನಟಿಯೊಬ್ಬರ ಡೀಪ್ ಫೇಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Alia Bhatt video Viral). ಈಗಾಗಲೇ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ನಟಿ ಕತ್ರಿನಾ ಕೈಫ್, ನಟಿ ಕಾಜೋಲ್ ಕೂಡ ಡೀಪ್ ಫೇಕ್ ಗೆ ಗುರಿಯಾಗಿದ್ದರು. ಇದೀಗ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಅವರ ಮುಖವನ್ನು ಬಳಸಿ ಡೀಪ್ ಫೇಕ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ
ಬೆಡ್ ಮೇಲೆ ಸಣ್ಣ ಬಟ್ಟೆಯನ್ನು ಧರಿಸಿಕೊಂಡಿರುವ ಹುಡುಗಿಯೊಬ್ಬಳು ಆಶ್ಲೀಲವಾಗಿ ತನ್ನ ದೇಹದ ಪ್ರದರ್ಶನ ಮಾಡುತ್ತಿದ್ದಾಳೆ. ಹಿನ್ನೆಲೆಯಲ್ಲಿ ಹಾಡೊಂದು ಪ್ಲೇ ಆಗಿದೆ. ಆಶ್ಲೀಲ ಸನ್ನೆಯನ್ನು ತೋರಿಸುತ್ತಿರುವ ಯುವತಿಯ ವಿಡಿಯೋಗೆ ನಟಿ ಆಲಿಯಾ ಭಟ್ ಅವರ ಫೋಟೋವನ್ನು ಜೋಡಿಸಿ ಡೀಪ್ ಫೇಕ್ ಮಾಡಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಡೀಪ್ ಫೇಕ್ ತಡೆಗೆ ಶೀಘ್ರ ಹೊಸ ಕಾನೂನು ಜಾರಿ ಮಾಡುವುದೆಂದು ಇತ್ತೀಚೆಗೆ ಕೇಂದ್ರ ಸರ್ಕಾರ ತಿಳಿಸಿದೆ.
