Home » Sushmita Sen: ಲಲಿತ್‌ಮೋದಿ ಜೊತೆಗಿನ ಸಂಬಂಧದ ಕುರಿತು ಬಿಗ್‌ನ್ಯೂಸ್‌ ನೀಡಿದ ಸುಷ್ಮಿತಾ ಸೇನ್‌!

Sushmita Sen: ಲಲಿತ್‌ಮೋದಿ ಜೊತೆಗಿನ ಸಂಬಂಧದ ಕುರಿತು ಬಿಗ್‌ನ್ಯೂಸ್‌ ನೀಡಿದ ಸುಷ್ಮಿತಾ ಸೇನ್‌!

by Mallika
2 comments
Sushmita sen

Sushmita Sen: ಸುಷ್ಮಿತಾ ಸೇನ್‌ ಅವರು ಆಗಾಗ ತಮ್ಮ ವೈಯಕ್ತಿಕ ವಿಚಾರ ಕುರಿತು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಇವರ ಕುರಿತು ಲಲಿತ್‌ಮೋದಿ ಜೊತೆಗಿನ ಸಂಬಂಧದ ಕುರಿತು ವಿಚಾರವೊಂದು ಬೆಳಕಿಗೆ ಬಂದಿತ್ತು. ಆಕೆಯ ಅನೇಕ ಬಾಯ್‌ಫ್ರೆಂಡ್‌ಗಳ ಪಟ್ಟಿಯಲ್ಲಿ ಲಲಿತ್‌ಮೋದಿ ಕೂಡಾ ಒಬ್ಬರು ಎಂದು ಜನ ಭಾವಿಸಿದ್ದರು. ಹಾಗೆನೇ ಸುಷ್ಮಿತಾ ಸೇನ್‌ (Sushmita Sen)ಅವರು ಕೂಡಾ ತಮ್ಮ ರಿಲೇಷನ್‌ಶಿಪ್‌ ಕುರಿತು ಓಪನ್‌ ಆಗಿಯೇ ಮಾತನಾಡುತ್ತಾರೆ.

ಉದ್ಯಮಿ ಲಲಿತ್‌ಮೋದಿ ಜೊತೆ ಸುಷ್ಮಿತಾ ವರ್ಷಗಳ ಹಿಂದೆ ರಿಲೇಷನ್‌ಶಿಪ್‌ನಲ್ಲಿದ್ದರು. ಅನಂತರ ಆ ಸಂಬಂಧ ಕೊನೆಯಾಯಿತು. ಅನಂತರ ಸಿಂಗಲ್‌ ಆಗಿದ್ದ ಸುಷ್ಮಿತಾ ಸೇನ್‌ ಮತ್ತು ಪ್ರೇಮ ಪಾಶದಲ್ಲಿ ಬಿದ್ದಿದ್ದಾರೆ.

ಲಲಿತ್‌ಮೋದಿಯನ್ನು ಮದುವೆಯಾಗುವ ಆಲೋಚನೆ ಸುಷ್ಮಿತಾಗೆ ಇರಲಿಲ್ಲ. ಈ ಕುರಿತು ಅವರು ಮಾತೊಂದನ್ನು ಹೇಳಿದ್ದಾರೆ. ” ನಾನು ಇನ್‌ಸ್ಟಾಗ್ರಾಂನಲ್ಲಿ ಆ ಪೋಸ್ಟ್‌ ಹಾಕು ಕಾರಣವೊಂದಿದೆ. ಕೆಲವೊಮ್ಮೆ ಜನ ಮೌನವಾಗಿದ್ದಾಗ ಅದೊಂದು ದೌರ್ಬಲ್ಯವೆಂದು ತಪ್ಪಾಗಿ ಭಾವಿಸುತ್ತಾರೆ. ನಾನು ನಗುತ್ತಿದ್ದೇನೆ ಎಂದು ತಿಳಿಸಲು ಒಂದು ಪೋಸ್ಟ್‌ ಹಾಕಿದೆ. ಅಲ್ಲಿಗೆ ಅದು ಕೊನೆಗೊಂಡಿದೆ” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಕೇಸ್‌ನಲ್ಲಿ ಬಿಗ್‌ಟ್ವಿಸ್ಟ್‌; ಇಲ್ಲಿದೆ ಅಸಲಿ ಕಾರಣ!!!

You may also like

Leave a Comment