Home » Actor Vijay Gift: ಹೈಸ್ಕೂಲ್ ವಿದ್ಯಾರ್ಥಿನಿಗೆ ಡೈಮಂಡ್ ನೆಕ್ಲೇಸ್ ಗಿಫ್ಟ್ ನೀಡಿದ ನಟ ವಿಜಯ್ !

Actor Vijay Gift: ಹೈಸ್ಕೂಲ್ ವಿದ್ಯಾರ್ಥಿನಿಗೆ ಡೈಮಂಡ್ ನೆಕ್ಲೇಸ್ ಗಿಫ್ಟ್ ನೀಡಿದ ನಟ ವಿಜಯ್ !

0 comments
Actor Vijay Gift

Actor Vijay Gift: ತಮಿಳು ನಟ ವಿಜಯ್‌ (Actor Thalapathy Vijay) ಹೈಸ್ಕೂಲ್ ವಿದ್ಯಾರ್ಥಿನಿಗೆ ಡೈಮಂಡ್ ನೆಕ್ಲೇಸ್ (Actor Vijay Gift) ನೀಡಿದ್ದು, 12ನೇ ತರಗತಿಯಲ್ಲಿ ರಾಜ್ಯಕ್ಕೆ 600ಕ್ಕೆ 600 ಅಂಕ ಗಳಿಸಿದ ನಂದಿನಿ ಎಂಬ ವಿದ್ಯಾರ್ಥಿನಿಗೆ ನಟ ವಿಜಯ್ ಡೈಮೆಂಡ್ ನೆಕ್ಲೆಸ್ (Diamond Necklace) ನೀಡಿದ್ದಾರೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವಿಜಯ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶನಿವಾರ (ಜೂನ್ 17) ಚೆನ್ನೈ ನೀಲಗಿರಿಯ ಆರ್‌ಕೆ ಕನ್ವೆನ್ಷನ್ ಸೆಂಟರ್‌ನಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆದಿದ್ದು, ವಿಜಯ್ ಪೀಪಲ್ಸ್ ಮೂವ್ ಮೆಂಟ್ ವತಿಯಿಂದ ಪ್ರತಿ ಕ್ಷೇತ್ರದ ಟಾಪ್ ಮೂವರಿಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಶಸ್ತಿ ಪ್ರೋತ್ಸಾಹಧನ ನೀಡಿದರು. ಉತ್ತಮವಾಗಿ ಅಂಕ ಪಡೆದ ಮಕ್ಕಳಿಗೆ ನಗದು ಪುರಸ್ಕಾರ ನೀಡಿದ ಗೌರವಿಸಿದ್ದಾರೆ. ತಮಿಳುನಾಡಿನ 234 ವಿಧಾನ ಸಭಾ ಕ್ಷೇತ್ರಗಳಲ್ಲಿ 10 ಮತ್ತು 12ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಈ ಗೌರವ ಸಂದಿದೆ.

ಸಮಾರಂಭದಲ್ಲಿ ವಿಜಯ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸೋಶಿಯಲ್‌ ಮೀಡಿಯಾದಲ್ಲಿ ನಮ್ಮನ್ನು ದಾರಿ ತಪ್ಪಿಸುವುದಕ್ಕಾಗಿಯೇ ಕೆಲವರಿದ್ದಾರೆ. ಅವರ ಅಜೆಂಡಾಗಳನ್ನು ನಮ್ಮ ಮೇಲೆ ಹೇರಲು ಪ್ರಯತ್ನ ಮಾಡುತ್ತಿರುತ್ತಾರೆ. ಸರಿ ಯಾವುದು ತಪ್ಪು ಯಾವುದು ಎಂಬುದನ್ನು ನೀವೇ ಅರಿತುಕೊಳ್ಳಬೇಕು ಎಂದು ವಿಜಯ್ ಹೇಳಿದರು.

ಇದನ್ನೂ ಓದಿ: NIMHANS Recruitment 2023: ನಿಮ್ಹಾನ್ಸ್​ನಲ್ಲಿ ಉದ್ಯೋಗವಕಾಶ ; ನೀವು ಡಿಗ್ರಿ ಕಂಪ್ಲೀಟ್ ಮಾಡಿದ್ದರೆ ಕೂಡಲೇ ಅರ್ಜಿ ಸಲ್ಲಿಸಿ !

You may also like

Leave a Comment