Rashmika Mandanna: ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಸಿನಿಮಾ ವಿಚಾರದಲ್ಲಿ ಸಖತ್ ಸುದ್ದಿಯಲ್ಲಿರುತ್ತಿದ್ದರು. ಅದಕ್ಕಿಂತಲೂ ಹೆಚ್ಚು ಟ್ರೋಲ್ ಗೆ ಒಳಗಾಗುತ್ತಿದ್ದರು. ಆದರೆ, ಇದೀಗ ನಟಿ ಬೇರೆ ವಿಚಾರಕ್ಕೆ ವೈರಲ್ ಆಗಿದ್ದಾರೆ. ಹೌದು, ರಶ್ಮಿಕಾ ಮಂದಣ್ಣ ಅವರ
ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ನಟಿಯ ಲಕ್ಷಾಂತರ ಹಣ ದೋಚಿದ್ದಾರೆ. ಎಷ್ಟು ಗೊತ್ತಾ?
ನಟಿಯ ಬರೋಬ್ಬರಿ 80 ಲಕ್ಷ ರೂಪಾಯಿ ಹಣವನ್ನು ಮ್ಯಾನೇಜರ್ ಕಬಳಿಸಿದ್ದಾನೆ. ಹೀಗಾಗಿ ಮ್ಯಾನೇಜರ್‌ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ರಶ್ಮಿಕಾ ಮಂದಣ್ಣ ಯಾವುದೇ ಮಾಹಿತಿ ನೀಡಿಲ್ಲ. ರಶ್ಮಿಕಾಳ ಪ್ರತಿಕ್ರಿಯೆಗಾಗಿ ಅಭಿಮಾನಿಗಳಿಗೆ ಕಾದು ಕುಳಿತಿದ್ದಾರೆ. ಯಾರು ಮ್ಯಾನೇಜರ್? ಯಾಕೆ ಹಣ ಕಬಳಿಸಿದ್ದು? ಎಂಬಿತ್ಯಾದಿ ಪ್ರಶ್ನೆಗಳು ನೆಟ್ಟಿಗರ ಮನದಲ್ಲಿ ಮೂಡಿದೆ. ಇದಕ್ಕೆಲ್ಲಾ ನಟಿಯ ಪ್ರತಿಕ್ರಿಯೆಯಿಂದ ಉತ್ತರ ಸಿಗಲಿದೆ.
ನಟಿ ರಶ್ಮಿಕಾ ಮಂದಣ್ಣ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನಟಿ ಈಗಾಗಲೇ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಅಮಿತಾಭ್ ಬಚ್ಚನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಣಬೀರ್ ಕಪೂರ್ ಗೆ (ranbir kapoor) ನಾಯಕಿಯಾಗಿ ‘ಅನಿಮಲ್’ (animal) ಚಿತ್ರದಲ್ಲಿ, ಅಲ್ಲದೆ, ಅಲ್ಲು ಅರ್ಜುನ್ (allu arjun) ‘ಪುಷ್ಪ 2’ (pushpa-2) ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ನಿತಿನ್ (Nithin) -ರಶ್ಮಿಕಾ ಕಾಂಬಿನೇಷನ್ನ ಹೊಸ ಸಿನಿಮಾ ಕೂಡ ಮೂಡಿಬರುತ್ತಿದೆ. ವಿಕ್ಕಿ ಕೌಶಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಸೊಸೆಯ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ‘ರೇನ್‌ಬೋ ಸಿನಿಮಾ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ.
ಇದನ್ನೂ ಓದಿ: Ramalinga Reddy: ‘ ಮಹಿಳೆಯರು ಹಿಡ್ಕೊಂಡು ಮುರಿಯುತ್ತಿದ್ದಾರೆ ‘ ಹೇಳಿಕೆಗೆ ಮಂತ್ರಿಗಳು ಹೇಳಿದ್ದೇನು ?!
