Darshan-Sudeep Fans: ಸ್ಟಾರ್ ವಾರ್ ಮತ್ತು ಫ್ಯಾನ್ ವಾರ್ ಕನ್ನಡದಲ್ಲಿ ದೊಡ್ಡದಾಗಿ ಶುರುವಾಗಿದೆ. ಹಾಗಂತ ಕನ್ನಡದಲ್ಲಿ ಸ್ಟಾರ್ ಫ್ಯಾನ್ ಹೊಸದಲ್ಲ. ಇದು ತೊಂಬತ್ತರ ದಶಕದಲ್ಲೂ ಇತ್ತು. 90ರ ದಶಕದಲ್ಲಿ ಇತ್ತು ಅನ್ನುವುದಕ್ಕಿಂತ ಅದು ಕರ್ನಾಟಕದಲ್ಲಿ 90 ರ ದಶಕದಲ್ಲಿ ಜನನವಾಯಿತು ಎನ್ನಬಹುದು. ನಾಯಕ ನಟರ ಮೇಲೆ ಫ್ಯಾನುಗಳು ಅದೆಷ್ಟು ತೀವ್ರವಾಗಿ ಪೋಸಸಿವ್ ಆಗಿರುತ್ತಾರೆ ಎಂದರೆ 90 ರ ದಶಕದಲ್ಲಿ ಕರ್ನಾಟಕದ ವರ ನಟ ರಾಜ್‌ಕುಮಾರ್ ಅವರನ್ನು ಒಬ್ಬರೇ ಒಬ್ಬರು ಟೀಕಿಸಿ ಬರೆಯದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಶ್ನೆ ಮಾಡಿದವರನ್ನು ಫ್ಯಾನ್ ಗಳು ಅಟ್ಯಾಕ್ ಮಾಡುವ ಹವ್ಯಾಸ ಬೆಳೆಸಿಕೊಂಡ ಉದಾಹರಣೆ ಕರ್ನಾಟಕದಲ್ಲಿ ಹಿಂದೆಯೂ ಇತ್ತು, ಈಗಲೂ ಇದೆ. ಇತ್ತೀಚೆಗೆ ನಟ ಸುದೀಪ್ ವಿರುದ್ಧವಾಗಿ ಅಹೋರಾತ್ರ ಅವರು ಮಾತಾಡಿದ್ದಾಗ, ಸುದೀಪ್ ಅಭಿಮಾನಿಗಳು(Darshan-Sudeep Fans) ಅಂದು ಅಹೋರಾತ್ರ ಮೇಲೆ ಅಟ್ಯಾಕ್ ಮಾಡಿದ್ದರು. ಇದು ಫ್ಯಾನ್ ಗಳ ಹಾವಳಿ.
ಹೌದು, ಈಗ ಮತ್ತೆ ಫ್ಯಾನ್ ವಾರ್ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಪರಸ್ಪರ ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ಸುದೀಪ್ ಅಭಿಮಾನಿಗಳು ದರ್ಶನ್ ವಿರುದ್ಧ ನೆಗೆಟಿವ್ ಟ್ವಿಟರ್ ಟ್ರೆಂಡ್ ಮಾಡಿದರೆ, ದರ್ಶನ್ ಫ್ಯಾನ್ಸ್ ಸುದೀಪ್ ವಿರುದ್ಧ ನೆಗೆಟಿವ್ ಟ್ರೆಂಡ್ ಮಾಡಿ ಕಿಡಿ ಎಬ್ಬಿಸುತ್ತಿದ್ದಾರೆ.
ಈ ಫ್ಯಾನ್ ವಾರ್ ದಿಢೀರನೆ ಯಾಕೆ ಶುರುವಾಯಿತು ಎಂದು ನೋಡಿದರೆ, ಅದಕ್ಕೆ ಕಾರಣ ಅವರೊಬ್ಬರು ನಿರ್ಮಾಪಕರು ಸುದೀಪ್ ವಿರುದ್ಧ ಹಣದ ಆರೋಪ ಮಾಡಿದ್ದು. ಕನ್ನಡದ ಚಿತ್ರ ನಿರ್ಮಾಪಕ ಎಂ. ಎನ್. ಕುಮಾರ್ ಸುದೀಪ್ ಹಣ ತೆಗೆದುಕೊಂಡು ಸಿನಿಮಾ ಮಾಡದೇ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂಬ ಗಂಭೀರವಾದ ಆರೋಪವನ್ನು ಮಾಡಿದ್ದರು. ಆ ಆರೋಪದ ಲಾಭವನ್ನು ಪಡೆದುಕೊಳ್ಳಲು ದರ್ಶನ್ ಅಭಿಮಾನಿಗಳು ಕಾದು ಕುಳಿತಂತೆ ಇತ್ತು. ಹಾಗಾಗಿ ಆರೋಪದ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸುದೀಪ್ ವಿರುದ್ಧ ಫೀಲ್ಡ್ ಗೆ ಇಳಿದೇ ಬಿಟ್ಟರು. ಸಾಮಾಜಿಕ ಜಾಲತಾಣಕ್ಕೆ ಇಳಿದ ಫ್ಯಾನ್ಸ್ ಕಮೆಂಟುಗಳು ಮಹಾಪೂರವನ್ನೇ ಹರಿಸಲು ಶುರು ಮಾಡಿದರು. ಇದರಿಂದ ಸುದೀಪ್ ಅಭಿಮಾನಿಗಳು ಕೂಡಾ ಕುಪಿತಗೊಂಡರು.
ಆಗ ಶುರುವಾಯಿತು ನೋಡಿ ದರ್ಶನ್ ಸುದೀಪ್ ಸ್ಟಾರ್ ಫ್ಯಾನ್ ವಾರ್ ! ದರ್ಶನ್ ವಿರುದ್ಧ ನೆಗೆಟಿವ್ ಟ್ರೆಂಡ್ ವಾರ್ ಶುರು ಆಗೇ ಹೋಯ್ತು. #BanFlopStarDarshanandSaveKFI – ಫ್ಲಾಪ್ ಸ್ಟಾರ್ ದರ್ಶನ್ ರನ್ನು ಬ್ಯಾನ್ ಮಾಡಿ, ಕನ್ನಡ ಚಿತ್ರರಂಗವನ್ನು ರಕ್ಷಿಸಿ ಎಂಬ ಟ್ಯಾಗ್ ಲೈನ್ ಬಳಸಿ ಟ್ವೀಟ್ ವಾರ್ ಶುರು ಆಯ್ತು. ಪುಟಾಣಿ ನೀಲಿ ಹಕ್ಕಿ ದ್ವೇಷದ ಅಸಮಾಧಾನದ, ಅಸಹಿಷ್ಣುತೆಯ ಮೆಸೇಜುಗಳನ್ನು ಹೊತ್ತುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾರಾಡಲು ಶುರು ಮಾಡಿತು. ಹಾಗೆ ಮೂರು ಲಕ್ಷಕ್ಕೂ ಅಧಿಕ ಟ್ವೀಟ್‌ಗಳನ್ನು ಮಾಡಲಾಯಿತು.
ಆಗ ದರ್ಶನ್ ಅಭಿಮಾನಿಗಳು ಸುಮ್ಮನೆ ಕೂರುತ್ತಾರೆಯಾ ? – ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರವಾಗಿ ಆತನ ಅಭಿಮಾನಿ ಹುಡುಗರು ಚಾಲೆಂಜ್ ತೆಗೆದುಕೊಂಡರು. ಸುದೀಪ್ ಅಭಿಮಾನಿಗಳ ಟ್ರೀಟ್ ಪ್ರತ್ಯುತ್ತರಕ್ಕೆ ಪ್ರತ್ಯುತ್ತರವಾಗಿ ದರ್ಶನ್ ಅಭಿಮಾನಿಗಳೂ ಸಹ ಸುದೀಪ್ ವಿರುದ್ಧ ನೆಗೆಟಿವ್ ಟ್ರೆಂಡ್ ಶುರು ಮಾಡಿದ್ದಾರೆ. ಅದಕ್ಕೆ ದರ್ಶನ್ ಅಭಿಮಾನಿಗಳು ಸುದೀಪ್ ವಿರುದ್ಧವಾಗಿ ಇಟ್ಟಿರುವ ಟ್ಯಾಗ್ ಲೈನ್ ಕ್ಯಾಚಿಯಾಗಿದೆ, ಒಂದಷ್ಟು ತಮಾಷೆಯಾಗಿದೆ ಎಂದೇ ಹೇಳಬಹುದು.
#LossMakingLordKichcha -ನಷ್ಟ ಸೃಷ್ಟಿಸುವ ರಾಜ ಕಿಚ್ಚ – ಎಂಬ ಟ್ವಿಟ್ಟರ್ ಟ್ಯಾಗ್ ಬಳಸಿ ದರ್ಶನ್ ಅಭಿಮಾನಿಗಳು ಸುದೀಪ್ ವಿರುದ್ಧ ಟ್ರೆಂಡ್ ಮಾಡಿ ಟ್ವೀಟ್ ಕಮೆಂಟ್ ಮಾಡುತ್ತಿದ್ದಾರೆ ಮತ್ತು ಆಕ್ರೋಶ ಹೊರಹಾಕಿದ್ದಾರೆ. ಸುದೀಪ್ ಅಭಿಮಾನಿಗಳು ಮಾಡಿದ 3 ಲಕ್ಷ ಟ್ವೀಟ್ ಗೆ ದರ್ಶನ್ ಅಭಿಮಾನಿಗಳ ಈ ನೆಗೆಟಿವ್ ಟ್ರೆಂಡ್ ಭರ್ಜರಿ ಪ್ರತ್ಯುತ್ತರ ನೀಡಿದೆ. ಸುಮಾರು 7 ಲಕ್ಷಕ್ಕೂ ಅಧಿಕ ಟ್ವೀಟ್‌ಳನ್ನು ಅವರು ಮಾಡಿದ್ದು ಕನ್ನಡ ಚಲನ ಚಿತ್ರರಂಗದಲ್ಲಿನ ಅತಿದೊಡ್ಡ ನೆಗೆಟಿವ್ ಟ್ರೆಂಡ್ ಎಂಬ ದಾಖಲೆಯನ್ನು ಇದು ಬರೆದಿದೆ ಎನ್ನಲಾಗುತ್ತಿದೆ.
ಇದನ್ನೆಲ್ಲಾ ನೋಡಿದಾಗ ಇದು ಅಭಿಮಾನಿಗಳ ದುರಭಿಮಾನವೇ ಅಥವಾ ತಮ್ಮ ಪ್ರೀತಿಯ ನಟನ ಸ್ಟಾರ್ ವ್ಯಾಲ್ಯು ಉಳಿಸಿಕೊಳ್ಳಲು ಆ ಅಭಿಮಾನಿಗಳು ಮಾಡುವ ಪ್ರಯತ್ನವೇ ಗೊತ್ತಾಗುತ್ತಿಲ್ಲ. ಈ ನೆಗೆಟಿವ್ ಟ್ರೆಂಡ್ ನ ಹಿಂದೆ ಆಯಾ ನಾಯಕ ನಟರ ಕೈವಾಡ ಇರಲಿಕ್ಕೂ ಸಾಕು, ಯಾರಿಗೆ ಗೊತ್ತು ? ಒಂದಂತೂ ನಿಜ ಕನ್ನಡವೆಂಬ ಪುಟಾಣಿ ಚಲನಚಿತ್ರ ಇಂಡಸ್ಟ್ರಿಗೆ ಇದು ಕಡು ಕಪ್ಪು ಚುಕ್ಕೆಯೇ !
ಇದನ್ನೂ ಓದಿ: Murder: ಮಚ್ಚಿನ ಜತೆ ಮಲಗುತ್ತಿದ್ದ ಪತಿ ; ಕೊನೆಗೂ ಊಹಿಸದ ದುರಂತ ನಡೆದೇ ಹೋಯ್ತು !
