Home » Amitabh Bachchan: ಇನ್ಸ್ಟಾದಲ್ಲಿ ಸೊಸೆ ಐಶ್ವರ್ಯಾರನ್ನು ಅನ್ ಫಾಲೋ ಮಾಡಿ ಅಚ್ಚರಿ ಪೋಸ್ಟ್ ಹಾಕಿದ ಅಮಿತಾಬ್ ಬಚ್ಚನ್

Amitabh Bachchan: ಇನ್ಸ್ಟಾದಲ್ಲಿ ಸೊಸೆ ಐಶ್ವರ್ಯಾರನ್ನು ಅನ್ ಫಾಲೋ ಮಾಡಿ ಅಚ್ಚರಿ ಪೋಸ್ಟ್ ಹಾಕಿದ ಅಮಿತಾಬ್ ಬಚ್ಚನ್

1 comment
Amitabh Bachchan

Amitabh Bachchan: ಬಾಲಿವುಡ್ ಹಿರಿಯ ನಟ, ಬಿ ಟೌನ್ ನಲ್ಲಿ ಬಿಗ್ ಬಿ ಎಂದೇ ಖ್ಯಾತಿಗಳಿಸಿರುವ ಅಮಿತಾಬ್ ಬಚ್ಚನ್(Amitabh Bachchan ) ಕುಟುಂಬದಲ್ಲಿ ಯಾವುದೂ ಸರಿಯಿಲ್ವಾ? ಹೀಗೊಂದು ಪ್ರಶ್ನೆ ಕಳೆದ ಕೆಲ ದಿನಗಳಿಂದಲ ಕೇಳಿ ಬರುತ್ತಲೇ ಇತ್ತು. ಹೀಗಿರುವಾಗಲೇ ಅಮಿತಾಬ್‌ ಬಚ್ಚನ್‌ ಸಹ ಇದೇ ವಿಷಯಕ್ಕೆ ಸುಳಿವೊಂದನ್ನು ಸೋಷಿಯಲ್ ಮೀಡಿಯಾ ದಲ್ಲಿ ನೀಡಿದ್ದಾರೆ.

ಆಗಾಗ ಅಭಿಷೇಕ್‌- ಐಶ್ವರ್ಯಾ ನಡುವೆ ಯಾವುದೂ ಸರಿಯಿಲ್ಲ ಎಂಬ ವದಂತಿಗಳೂ ಹರಿದಾಡುತ್ತಿವೆ. ಇದೀಗ ಅದಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು ಅಮಿತಾಬ್‌ ಬಚ್ಚನ್‌ ಅವರಲ್ಲಿನ ಈ ಬದಲಾವಣೆ. ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಂನಲ್ಲಿನಲ್ಲಿ ಸೊಸೆ ಐಶ್ವರ್ಯಾ ಅವರನ್ನು ಅನ್‌ಫಾಲೋ ಮಾಡಿದ್ದರು.

2007ರಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಬೇರೆಯಾಗಲಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿವೆ. ಈ ನಡುವೆ ಅಮಿತಾಬ್‌ ಜತೆಗೂ ನಿತ್ಯ ಜಗಳ, ಮನಸ್ಥಾಪಗಳಾಗುತ್ತಿದೆ ಎಂದೇ ಹೇಳಲಾಗುತ್ತಿದೆ. ಮನೆಯ ವಾತಾವರಣ ಸರಿಯಿಲ್ಲ ಎನ್ನಲಾಗುತ್ತಿದೆ. ಇದರ ನಡುವೆ ಅಮಿತಾಬ್‌ (Amitabh Bachchan) ಸೊಸೆ ಐಶ್ವರ್ಯಾ ಅವರನ್ನು ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದಾರೆ.

ಇದೀಗ ಅಮಿತಾಬ್‌ X ವೇದಿಕೆಯಲ್ಲಿ “ಎಲ್ಲವೂ ಹೇಳಲಾಗಿದೆ, ಎಲ್ಲವನ್ನೂ ಮಾಡಲಾಗಿದೆ.. ಮಾಡುವುದನ್ನು ಮಾಡಲಾಗಿದೆ” ಎಂಬರ್ಥದಲ್ಲಿ ಹೇಳಿಕೊಂಡಿದ್ದಾರೆ. ಅಮಿತಾಬ್‌ ಮಾತಿನ ಅರ್ಥ ಏನಿರಬಹುದೆಂದೇ ಎಲ್ಲರೂ ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ಅಂದರೆ ಬಿಗ್ ಬಿ ಅವರ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ 36.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇದಲ್ಲದೇ ಅಮಿತಾಬ್ 74 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ 74 ಮಂದಿಯಲ್ಲಿ ಅಭಿಷೇಕ್ ಬಚ್ಚನ್ ಸೇರಿದಂತೆ ಇಂಡಸ್ಟ್ರಿಯ ಎಲ್ಲ ಗಣ್ಯರು ಇದ್ದಾರೆ. ಆದರೆ ಅವರ ಸೊಸೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಹೆಸರು ಈ ಪಟ್ಟಿಯಲ್ಲಿಲ್ಲ ಎನ್ನುವುದು ಎಲ್ಲರಲ್ಲೂ ದೊಡ್ಡ ಪ್ರಶ್ನೆ ಆಗಿದೆ.

ಇದನ್ನೂ ಓದಿ: ಬಾಯಾರಿಕೆಗೆ ಸೋಡಾ ಕುಡಿಯಲು ಅಂಗಡಿಗೆ ಹೋದ ಮಹಿಳೆ – ಮರಳುವಾಗ ಲಕ್ಷಾಧೀಶ್ವರಳಾಗಿ ಹೊರ ಬಂದಳು!! ಏನಪ್ಪಾ ಇದು ಸೋಡಾ ಮಹಿಮೆ?

You may also like

Leave a Comment