Ranveer Singh: ಲೈಂಗಿಕ ಆರೋಗ್ಯ ಮತ್ತು ಕ್ಷೇಮ ಬ್ರಂಡ್ ಆಗಿರುವ ಬೋಲ್ಡ್ ಕೇರ್ ಉತ್ಪನ್ನದ ಜಾಹೀರಾತಿನಲ್ಲಿ ವಯಸ್ಕ ನಟ ಚಿತ್ರ ನಟ ಜಾನಿ ಸಿನ್ಸ್ ಅವರ ಜೊತೆ ನಟ ರನ್ವೀರ್ ಸಿಂಗ್ ಕಾಣಿಸಿಕೊಂಡಿರುವುದು ವೈರಲ್ ಆಗಿದೆ.
ಪುರುಷರ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಬೋಲ್ಡ್ ಕೇರ್ ಕಂಪನಿ ತಯಾರಿಸುತ್ತದೆ. ಇದಕ್ಕೆ ನಟ ರನ್ವೀರ್ ಸಿಂಗ್ ರಾಯಭಾರಿ. ಈ ಕಂಪನಿಯ ಹೊಸ ಜಾಹೀರಾತಿನಲ್ಲಿ ಇದೀಗ ಖ್ಯಾತ ವಯಸ್ಕ ಚಿತ್ರದ ನಟ ಜಾನಿ ಸಿನ್ಸ್ ಅವರು ದೇಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
https://twitter.com/UmdarTamker/status/1756953446333460944
ಭಾರತದಲ್ಲಿ ಪುರುಷರ ಲೈಂಗಿಕ ಆರೋಗ್ಯದ ಸುತ್ತಲಿನ ಕಳಂಕವನ್ನು ಪರಿಹರಿಸುತ್ತೇವೆ. ಪುರುಷರ ಲೈಂಗಿಕ ಆರೋಗ್ಯದ ಕುರಿತು ಮುಕ್ತ ಸಂಭಾಷಣೆಗಳು ಆಗಬೇಕು. ಇದು ನಮ್ಮ ಗುರಿ. ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡಲು ನಾವು ಇದ್ದೇವೆ ಎಂದು ಬೋಲ್ಡ್‌ಕೇರ್‌ನ ಸಹ ಸಂಸ್ಥಾಪಕ ರಜತ್ ಜಾಧರ್ ಹೇಳಿದ್ದಾರೆ.
ಇದನ್ನೂ ಓದಿ : ಉಡುಪಿ ಪ್ರಸಿದ್ಧ ದೈವ ನರ್ತಕ ಸಾಧು ಪಾಣಾರ ಮಂಚಿಕೆರೆ ನಿಧನ
