Home » Darshan: ಕಾವೇರಿ ನೀರು ಹಂಚಿಕೆ ವಿವಾದ: ಟ್ವೀಟ್‌ ಮಾಡಿದ ನಟ ದರ್ಶನ್‌, ಏನಂದ್ರು ಗೊತ್ತೇ?

Darshan: ಕಾವೇರಿ ನೀರು ಹಂಚಿಕೆ ವಿವಾದ: ಟ್ವೀಟ್‌ ಮಾಡಿದ ನಟ ದರ್ಶನ್‌, ಏನಂದ್ರು ಗೊತ್ತೇ?

1 comment
Actor Darshan

Actor Darshan: ಕರ್ನಾಟಕ- ತಮಿಳುನಾಡು ಕಾವೇರಿ ನೀರು (Kaveri )ಹಂಚಿಕೆ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಬರದ ಸ್ಥಿತಿ ಉಂಟಾಗಿದ್ದರು ಕೂಡ ತಮಿಳುನಾಡು ಹೆಚ್ಚುವರಿ ನೀರಿನ ಬೇಡಿಕೆಯಿಟ್ಟಿದ್ದು, ಈ ವಿಚಾರ ರಾಜಕೀಯ ಅಂಗಳದಲ್ಲಿ ಕೂಡ ಚರ್ಚೆಗೆ ಕಾರಣವಾಗಿದೆ. ಈ ನಡುವೆ,ನಟ ದರ್ಶನ್ (Actor Darshan)ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಸೋಷಿಯಲ್‌ ಮೀಡಿಯಾ(Social Media)ಪುಟದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ಕಾವೇರಿ ನೀರಿಗೆ ಕತ್ತರಿ ಹಾಕಿದ್ದು ಸಾಕು ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಕರ್ನಾಟಕಕ್ಕೆ ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ನಿರಂತವಾಗಿ ಮೋಸ ಆಗುತ್ತಲೇ ಇದೆ. ಈ ಬಾರಿ ಕಡಿಮೆ ನೀರಿದ್ದರೂ ಕೂಡ ತಮಿಳುನಾಡಿಗೆ ನೀರು ಹರಿಸುವ, ನಮ್ಮ ಕಾವೇರಿ ನೀರಿಗೆ ಕತ್ತರಿ ಹಾಕುವ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತ ಬಂದಿದೆ. ಕರ್ನಾಟಕದಲ್ಲಿನ ಸದ್ಯದ ಸ್ಥಿತಿ ವಿಚಾರಿಸಿಕೊಂಡು, ನೀರು ಹಂಚಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕೆಂದು ದರ್ಶನ್‌ ಸೋಷಿಯಲ್‌ ಮೀಡಿಯಾ Xನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ನಾಡು, ನುಡಿ, ನೀರಿನ ವಿಚಾರ, ಗಡಿ ವಿವಾದ ಸೇರಿದಂತೆ ಕರ್ನಾಟಕದ ಬಗ್ಗೆ ದರ್ಶನ್‌ ವಿಶೇಷ ಒಲವನ್ನು ಹೊಂದಿದ್ದು , ಇದೀಗ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ಪೋಸ್ಟ್‌ ಹಂಚಿಕೊಂಡಿದ್ದು, ಬರದ ಸ್ಥಿತಿಯ ನಡುವೆಯೂ ತಮಿಳುನಾಡಿಗೆ ನೀರು ಹರಿಸುವ ಕ್ರಮ ನಿಜಕ್ಕೂ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ? ಅಷ್ಟೇ ಅಲ್ಲದೇ, ಆದಷ್ಟು ಬೇಗ ಕರ್ನಾಟಕಕ್ಕೆ ನ್ಯಾಯ ಸಿಗಲಿ ಎಂದು ಕೂಡ ಹೇಳಿಕೊಂಡಿದ್ದಾರೆ.

ನಟ ದರ್ಶನ್‌ ಹಾಕಿದ ಪೋಸ್ಟ್‌ ಹೇಗಿದೆ ಗೊತ್ತಾ?
“ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದ್ದು, ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ಕರ್ನಾಟಕಕ್ಕೆ ನ್ಯಾಯ ಸಿಗುವಂತಾಗಲಿ” ಎಂದಿದ್ದಾರೆ.

https://x.com/dasadarshan/status/1704405986113696113?s=20

ಇದನ್ನೂ ಓದಿ: Dengue Fever: ಜನರೇ ಮಹತ್ವದ ಮಾಹಿತಿ! ಹೆಚ್ಚಿದ ಡೆಂಗ್ಯೂ ಪ್ರಕರಣ; ಆರೋಗ್ಯ ಇಲಾಖೆಯಿಂದ ಗೈಡ್ ಲೈನ್ಸ್ ಬಿಡುಗಡೆ!!!

You may also like

Leave a Comment