Home » Rashmika Mandanna- Sonu Gowda: ‘ರಶ್ಮಿಕಾ ನನ್ನ ದೊಡ್ಡ ಇನ್ಸ್ಪಿರೇಷನ್’ ಎಂದ ಸೋನು ಗೌಡ !! ಯಾಕೆ ಎಂದು ವಿವಾದಿತ ಬೆಡಗಿ ಹೇಳಿದ್ದಿಷ್ಟು

Rashmika Mandanna- Sonu Gowda: ‘ರಶ್ಮಿಕಾ ನನ್ನ ದೊಡ್ಡ ಇನ್ಸ್ಪಿರೇಷನ್’ ಎಂದ ಸೋನು ಗೌಡ !! ಯಾಕೆ ಎಂದು ವಿವಾದಿತ ಬೆಡಗಿ ಹೇಳಿದ್ದಿಷ್ಟು

5 comments
Rashmika Mandanna- Sonu Gowda

Rashmika Mandanna- Sonu Gowda : ಟಿಕ್ ಟಾಕ್ ರೀಲ್ಸ್‌ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ(Sonu Gowda)ಆ ಬಳಿಕ ಬಿಗ್ ಬಾಸ್ ಒಟಿಟಿ ಮೂಲಕ ಖ್ಯಾತಿ ಪಡೆದಿರುವುದು ಗೊತ್ತಿರುವ ವಿಷಯ!! ಇತ್ತೀಚೆಗೆ ಸೋನು ಗೌಡ (Sonu Gowda)ಏನು ಮಾಡಿದರೂ ಟ್ರೋಲ್ ಆಗುವುದು ಕಾಮನ್ ಆಗಿಬಿಟ್ಟಿದೆ. ಈ ನಡುವೆ, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸೋನು ಶ್ರೀನಿವಾಸ್‌ ಗೌಡ ನಟಿ ರಶ್ಮಿಕಾ ಮಂದಣ್ಣರವರ (Rashmika Mandanna) ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಸೋನು ಗೌಡ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಎಂದರೆ ತನಗಿಷ್ಟ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಟಿ ರಶ್ಮಿಕಾ ಅವರಿಂದ ನಾನು ತುಂಬಾ ವಿಚಾರಗಳನ್ನು ಕಲಿತಿದ್ದೇನೆ. ಅವರನ್ನ ಯಾರೆಲ್ಲ ಹೇಟ್ ಮಾಡುತ್ತಾರೆ ಎಂಬುದು ನನಗೆ ಬೇಕಿಲ್ಲ. ಆದರೆ, ನಟಿ ರಶ್ಮಿಕಾ ನನ್ನ ಇನ್ಸ್ಪಿರೇಷನ್ ಅಷ್ಟೇ ಅಲ್ಲದೇ, ನೆಗೆಟಿವಿಯನ್ನೂ ಹೇಗೆ ದೂರ ಇಡಬೇಕು ಎಂಬುದನ್ನು ಅವರಿಂದ ಕಲಿತಿದ್ದೇನೆ ಎಂದು ಸೋನು ಗೌಡ ಹೇಳಿಕೊಂಡಿದ್ದಾರೆ.

ನೀನು ಸಿಕ್ಕಾಪಟ್ಟೆ ಟ್ರೋಲ್ (Troll) ಆಗುತ್ತಿದ್ದಿಯಾ ಎಂದರೆ ಮಾತು ಬೇಡ. ಸಾಧನೆಯಿಂದ ಉತ್ತರ ನೀಡು. ನೀವೊಂದು ಸಿನಿಮಾ ಮಾಡುತ್ತಿದ್ದೀರಾ ಎಂದಾದರೆ, ಅಲ್ಲೇ ಟ್ರೋಲಿಗರಿಗೆ ಉತ್ತರ ಸಿಗುತ್ತದೆ. ನನಗೆ ರಶ್ಮಿಕಾ ಅವರ ರೀತಿಯೇ ಬೆಳೆಯಬೇಕು ಎಂಬ ಹೆಬ್ಬಯಕೆ. ಅಮಿತಾಬ್ ಬಚ್ಚನ್ (Amitabh Bachchan) ಅವರೊಂದಿಗೆ ನ್ಯಾಷನಲ್ ಕ್ರಶ್ ರಶ್ಮಿಕ ನಟಿಸಿದ್ದು, ಅದೆಲ್ಲಾ ಸುಲಭದ ಮಾತಲ್ಲ. ಇನ್ನೂ ಹೇಳಬೇಕು ಅಂದರೆ ರಶ್ಮಿಕಾ ಅವರ ಬಿಂಬ ನಾನು ಎಂದು ಸೋನು ಗೌಡ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ

ಇದನ್ನೂ ಓದಿ: Green crackers: ಹಸಿರು ಪಟಾಕಿ ಪತ್ತೆ ಹಚ್ಚುವುದು ಹೇಗೆ? ಇದರ ಬಳಕೆ ಹೇಗೆ? ಖರೀದಿದಾರರಿಗೆ ನೆರವಿಗೆ ಬಂತು ‘ಕ್ಯೂಆರ್ ಕೋಡ್’!!!

You may also like

Leave a Comment