Home » Anasuya Bharadwaj: ಬಿಕ್ಕಿ ಬಿಕ್ಕಿ ಅತ್ತ ʼಪುಷ್ಪʼ ಸಿನಿಮಾ ಖ್ಯಾತಿಯ ನಟಿ! ಫ್ಯಾನ್ಸ್‌ ಕಕ್ಕಾಬಿಕ್ಕಿ, ಅಷ್ಟಕ್ಕೂ ಗಳಗಳನೇ ಅಳಲು ಕಾರಣವೇನು ಗೊತ್ತೇ?

Anasuya Bharadwaj: ಬಿಕ್ಕಿ ಬಿಕ್ಕಿ ಅತ್ತ ʼಪುಷ್ಪʼ ಸಿನಿಮಾ ಖ್ಯಾತಿಯ ನಟಿ! ಫ್ಯಾನ್ಸ್‌ ಕಕ್ಕಾಬಿಕ್ಕಿ, ಅಷ್ಟಕ್ಕೂ ಗಳಗಳನೇ ಅಳಲು ಕಾರಣವೇನು ಗೊತ್ತೇ?

0 comments
Anusuya Bharadwaj

Anasuya Bharadwaj: ನಟ ನಟಿಯರು ಬಹುತೇಕರು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಕ್ಟಿವ್ ಆಗಿದ್ದು, ಅಭಿಮಾನಿಗಳ ಜೊತೆ ತಮ್ಮ ಕೆಲವು ಅನುಭವ ಹಂಚಿಕೊಳ್ಳುತ್ತಾರೆ. ಇದೀಗ ‘ರಂಗಸ್ಥಳಂ’ ಹಾಗೂ ‘ಪುಷ್ಪ: ದಿ ರೈಸ್’ ಚಿತ್ರಗಳ ಮೂಲಕ ಖ್ಯಾತಿ ಪಡೆದ, ತೆಲುಗಿನ ಖ್ಯಾತ ನಟಿ ಹಾಗೂ ನಿರೂಪಕಿ ಅನಸೂಯಾ ಭಾರದ್ವಾಜ್ (Anasuya Bharadwaj) , ಇಂದು ಏಕಾಏಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಲ್ಲದೇ ಅಳುವ ಸೀನ್ ಅನ್ನು ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಹೌದು, ಅನಸೂಯಾ ಭಾರದ್ವಾಜ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತಾವು ಕಣ್ಣೀರು ಸುರಿಸುತ್ತಿರುವ ವಿಡಿಯೋದ ಜೊತೆಗೆ ದೊಡ್ಡದಾಗಿ ಪೋಸ್ಟ್ ಬರೆದು ಹಂಚಿಕೊಂಡಿದ್ದಾರೆ.

‘’ನಮಸ್ಕಾರ!! ನೀವೆಲ್ಲರೂ ಉತ್ತಮವಾಗಿ ಇದ್ದೀರಿ ಎಂದು ಭಾವಿಸುತ್ತೇನೆ. ನನ್ನ ಈ ಪೋಸ್ಟ್‌ ನೋಡಿ ನೀವೆಲ್ಲರೂ ತುಂಬಾ ಗೊಂದಲದಲ್ಲಿದ್ದೀರಿ ಎಂದು ನನಗೆ ತಿಳಿದಿದೆ. ಪ್ರಪಂಚದಾದ್ಯಂತ ಉತ್ತಮ ವಿಷಯ ಹಂಚಿಕೊಳ್ಳಲು, ಸಂತೋಷವನ್ನ ಹರಡಲು ಸೋಷಿಯಲ್ ಮೀಡಿಯಾ ಉತ್ತಮ ವೇದಿಕೆಯಾಗಿದೆ.

ಈ ಪೋಸ್ಟ್‌ ಅನ್ನು ನಾನು ಹಂಚಿಕೊಂಡ ಕಾರಣ ಇಷ್ಟೇ, ಎಲ್ಲಾ ಫೋಟೋಶೂಟ್‌ಗಳು, ನಗು, ನೃತ್ಯ.. ಇತ್ಯಾದಿ, ಇತ್ಯಾದಿ ನನ್ನ ಜೀವನದ ಭಾಗವಾಗಿದೆ. ಹೀಗಾಗಿ ಅವೆಲ್ಲವನ್ನೂ ನಾನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಅದರಂತೆಯೇ ನನ್ನ ಜೀವನದ ದುಃಖದ ಸಂಗತಿಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕೆಲವೊಂದು ಸಂದರ್ಭಗಳಲ್ಲಿ ನಾನೂ ಅಶಕ್ತಲಾಗಿದ್ದೆ. ಕಣ್ಣೀರು ಸುರಿಸಿದ್ದೇನೆ. ಬಿಕ್ಕಿ ಬಿಕ್ಕಿ ಅತ್ತಿದ್ದೇನೆ. ಮನುಷ್ಯ ಅಂದ್ಮೇಲೆ ಇವೆಲ್ಲಾ ಸಹಜ ಅಲ್ಲವೇ? ಎಂದಿದ್ದಾರೆ.

ಪಬ್ಲಿಕ್ ಫಿಗರ್‌ ಅಂದ್ಮೇಲೆ ದಿಟ್ಟ ಭಾವನೆಗಳು, ಡೋಂಟ್ ಕೇರ್ ಆಟಿಟ್ಯೂಡ್, ಡಿಪ್ಲೊಮಸಿ ಹೊಂದಿರುತ್ತೇವೆ ಎಂದು ಭಾವಿಸುವುದು ಸಹಜ. ಆದರೆ ಆ ಆವೃತ್ತಿಯ ಶಕ್ತಿ ನನ್ನ ಶಕ್ತಿ ಅಲ್ಲ. ನನ್ನ ಶಕ್ತಿ ಇದು. ನನ್ನ ಅಶಕ್ತಿ ಹಂಚಿಕೊಳ್ಳುವುದು ನನ್ನ ಶಕ್ತಿ. ಮನಸ್ಸು ಪೂರ್ತಿಯಾಗಿ ಅತ್ತು ನಂತರ ನಗುವಿನೊಂದಿಗೆ ಜಗತ್ತನ್ನು ಎದುರಿಸುವುದು ನನ್ನ ಶಕ್ತಿ.

ಎಲ್ಲರೊಂದಿಗೆ ಖುಷಿಯಾಗಿರಿ ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಯಾಕಂದ್ರೆ ಅವರು ಕೆಟ್ಟ ದಿನವನ್ನು ಹೊಂದಿರಬಹುದು. ನೀವು ತಿಳಿದಿಲ್ಲದ ಅಥವಾ ವೈಯಕ್ತಿಕವಾಗಿ ಭೇಟಿಯಾಗದ ಜನರಿಗೆ ಕೆಲವು ಕೆಟ್ಟ ವಿಷಯಗಳನ್ನು ಹೇಳುವ ಮೊದಲು ಅವರು ಮಾನಸಿಕವಾಗಿ ನೊಂದಿದ್ದಾರಾ ಎಂಬುದನ್ನು ಊಹಿಸಿ. ನಾನು ಇದನ್ನು ಕಷ್ಟ ಪಟ್ಟು ಕಲಿಯುತ್ತಿದ್ದೇನೆ. ಐದು ದಿನಗಳ ಹಿಂದೆ ನನ್ನ ಸಂಕಷ್ಟದ ಹಂತವನ್ನು ನೆನಪಿಟ್ಟುಕೊಳ್ಳಲು ಇದು ನಾನು ರೆಕಾರ್ಡ್ ಮಾಡಿದ ವಿಡಿಯೋ’’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಅನಸೂಯಾ ಭಾರದ್ವಾಜ್ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಅನಸೂಯಾ ಭಾರದ್ವಾಜ್ ಬಿಕ್ಕಿ ಬಿಕ್ಕಿ ಅಳುವ ವಿಡಿಯೋ ಹಂಚಿಕೊಂಡಿರುವ ಕಾರಣ ‘’ಇದು ಪಬ್ಲಿಸಿಟಿ ಸ್ಟಂಟ್’’, ‘’ಎಲ್ಲರಿಗೂ ಸಮಸ್ಯೆಗಳು ಇರುತ್ತವೆ. ಆದರೆ, ಅಳೋದನ್ನ ವಿಡಿಯೋ ಮಾಡಿ ಪೋಸ್ಟ್ ಮಾಡಿರೋದು ಯಾಕೆ?’’, ‘’ನಿಮ್ಮ ಆಕ್ಟಿಂಗ್ ಚೆನ್ನಾಗಿದೆ’’ ಅಂತೆಲ್ಲಾ ನೆಟ್ಟಿಗರು ಅವರನ್ನು ಟೀಕಿಸಿ ಕಾಮೆಂಟ್ ಮಾಡಿದ್ದಾರೆ. ಸದ್ಯಕ್ಕೆ ಇಂತಹ ಅಳುಬುರುಕಿ ಮುಖವನ್ನು ನೋಡಲು ಅಭಿಮಾನಿಗಳು ಇಷ್ಟಪಡಲಿಲ್ಲ ಅಂದುಕೊಳ್ಳಬಹುದು.

ಇದನ್ನೂ ಓದಿ: Dulquer Salmaan: ಆ ಮಹಿಳೆ ನಟ ದುಲ್ಕರ್‌ನ ಮೈಮೇಲಿನ ಆ ಭಾಗಕ್ಕೆ ಕೈ ಹಾಕಿ ಮಾಡಿದ್ದೇನು?

You may also like