Sreeleela Lip Lock: ಚಿತ್ರರಂಗ ಪ್ರವೇಶಿಸಿದ ಐದು ವರ್ಷಗಳಲ್ಲಿ ಎರಡು ಪ್ರಮುಖ ಚಿತ್ರರಂಗಗಳಲ್ಲಿ ಸ್ಟಾರ್ ನಟಿಯಾಗಿರುವ ಶ್ರೀಲೀಲಾ ಅವರ ಅಭಿಮಾನಿ ಬಳಗ ಸಣ್ಣದೇನು ಅಲ್ಲ. ಅದರಲ್ಲೂ ‘ಕಿಸ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀಲೀಲಾ ನಟನೆಯ ತೆಲುಗು ಸಿನಿಮಾ ‘ಭಗವಂತ್ ಕೇಸರಿ’ ಈಗಾಗಲೇ ಬಿಡುಗಡೆ ಆಗಿದೆ. ಸದ್ಯ ಈ ವೇಳೆಯಲ್ಲಿ ನಡೆದ ಸಂದರ್ಶನದಲ್ಲಿ ಶ್ರೀಲೀಲಾ ಅಚ್ಚರಿಯ ಹೇಳಿಕೆಯನ್ನು ಕೊಟ್ಟು ಜನರನ್ನು ಬೆರಗು ಗೊಳಿಸಿದ್ದಾರೆ.
ಹೌದು, ಇದೀಗ ಶ್ರೀಲೀಲಾ ತೆರೆಯ ಮೇಲೆ ಯಾವುದೇ ಕಾರಣಕ್ಕೂ ತಾವು ಲಿಪ್ ಲಾಕ್(Sreeleela Lip Lock) ಮಾಡಿಕೊಳ್ಳುವುದಿಲ್ಲವೆಂದಿದ್ದಾರೆ. ಲಿಪ್ ಲಾಕ್ ಮಾಡುವುದೇ ಆದರೆ, ಅವರು ನನ್ನ ಭಾವಿ ಪತಿ ಆಗಿರಬೇಕು ಎಂದೂ ನಟಿ ಶ್ರೀಲೀಲಾ ಹೇಳಿಕೆ ನೀಡಿದ್ದಾರೆ. ಈ ವಿಷಯ ತೆಲುಗು ಚಿತ್ರೋದ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಈ ಮಾತು ಕೇಳಿ ಒಂಥರಾ ಖುಷಿಯಾಗಿದ್ದಾರೆ.

ಇನ್ನು ಭಗವಂತ್ ಕೇಸರಿ ಸಿನಿಮಾ ಮಾಡಿರುವ ಬೆನ್ನಲ್ಲೇ ಶ್ರೀಲೀಲಾ ಕುರಿತಾಗಿ ಮತ್ತೊಂದು ಸುದ್ದಿಯೂ ಹರಿದಾಡುತ್ತಿದೆ. ಹೌದು, ‘ಭಗವಂತ ಕೇಸರಿ’ ಸಿನಿಮಾದಲ್ಲಿ ಟಾಲಿವುಡ್ ಟಾಪ್ ಸ್ಟಾರ್ ಬಾಲಕೃಷ್ಣನ ಮಗಳಾಗಿ ಶ್ರೀಲೀಲಾ ನಟಿಸಿದ್ದಾರೆ. ಇದೇ ಬಾಲಯ್ಯನ ಮಗ ಮೋಕ್ಷಗಣನ ಜೊತೆ ಶ್ರೀಲೀಲಾ ಹೆಸರು ಓಡಾಡುತ್ತಿದೆ. ಬರೀ ಅಷ್ಟೆ ಅಲ್ಲ. ಆ ಹುಡುಗನ ಜೊತೆ ಕನ್ನಡದ ನಟಿ ಶ್ರೀಲೀಲಾ ಮದುವೆ ಆಗಲಿದ್ದಾರಂತೆ ಎನ್ನಲಾಗ್ತಿದೆ.

ಆದ್ರೆ ಇದನ್ನು ಕೇಳಿ ಶ್ರೀಲೀಲಾ ಫುಲ್ ಅಪ್‌ಸೆಟ್ ಆಗಿದ್ದಾರೆ. ಈ ಸುದ್ದಿ ನಿಜವಲ್ಲ ಎಂದು ಸ್ಪಷ್ಟನೆ ನೀಡಿದರೂ ಯಾರೂ ಕೇಳುತ್ತಿಲ್ಲ. ಸಿನಿಮಾ ಅಂದ ಮೇಲೆ ಈ ರೀತಿ ಗಾಳಿ ಸುದ್ದಿ ಸಾಮಾನ್ಯ ಎಂದಿದ್ದಾರೆ.
ಇದನ್ನೂ ಓದಿ: ಡಿವೋರ್ಸ್ ಬಳಿಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಿರಿಕ್ ಕೀರ್ತಿ- ಕೊನೆಗೂ ಆ ನಿರ್ಧಾರ ಮಾಡೇ ಬಿಟ್ರಾ ?!
