Home » Nora Fatehi: ಫ್ಯಾಮಿಲಿ ಶೋನಲ್ಲಿ ಅಶ್ಲೀಲವಾಗಿ ನೃತ್ಯಮಾಡಿದ ಖ್ಯಾತ ನಟಿ !!

Nora Fatehi: ಫ್ಯಾಮಿಲಿ ಶೋನಲ್ಲಿ ಅಶ್ಲೀಲವಾಗಿ ನೃತ್ಯಮಾಡಿದ ಖ್ಯಾತ ನಟಿ !!

1 comment
Nora Fatehi

Nora Fatehi: ತನ್ನ ಡ್ಯಾನ್ಸ್ ಮೂವ್ಸ್ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ನೋರಾ ಫತೇಹಿ. ಈಕೆಯ ಸ್ಟೈಲ್, ಫಿಟ್ನೆಸ್ ಮತ್ತು ಕರ್ವ್ ಫಿಗರ್ ಗೆ ಸೋಲದವರೇ ಇಲ್ಲ. ಇವಳ ಡ್ಯಾನ್ಸ್ ನೋಡಲಂತೂ ಜನ ಕಾದು ಕುಳಿತಿರುತ್ತಾರೆ. ಆದರೆ ಅದೊಂದು ಕಾರ್ಯಕ್ರಮದಲ್ಲಿ ನೋರಾ ಮಾಡಿದ ಡ್ಯಾನ್ಸ್ ಮಾತ್ರ ಯಾರಿಗೂ ಹಿಡಿಸದಾಗಿದೆ.

https://youtu.be/FYrS2tVWHrs?si=NFjjdCSanVPl7CwW

ಇದನ್ನೂ ಓದಿ: Ayodhya: 6 ದಿನ ಪಾದಯಾತ್ರೆ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ ‘350 ಮುಸ್ಲಿಮರು’ !!

ಹೌದು, ತನ್ನ ಅದ್ಭುತ ಡ್ಯಾನ್ಸ್ ಮೂವ್‌ಗಳಿಂದ ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ನೋರಾ ಫತೇಹಿ (Nora fatehi) ಎಲ್ಲರಿಗೂ ಚಿರಪರಿಚಿತೆ. ಇವಳ ಡ್ಯಾನ್ಸ್ ಅಂದ್ರೆ ಹಲವರಿಗೆ ಹುಚ್ಚು. ಆದರೆ ಎಲ್ಲವೂ ಮಿತಿಯಲ್ಲಿದ್ದರೆ ನೋಡೋರಿಗೂ ಚಂದ ಅಲ್ವಾ? ಎಲ್ಲಿ ಏನು ಮಾಡಬೇಕು ಅದನ್ನೇ ಮಾಡಿದ್ರೆ ಅಂದ ಅಲ್ವಾ? ಆದರೆ ನೋರಾ ಇದೀಗ ಮಹಾ ಯಡವಟ್ಟು ಮಾಡಿಕೊಂಡಿದ್ದಾಳೆ. ಡ್ಯಾನ್ಸ್ ರಿಯಾಲಿಟಿ ಶೋ, ‘ಡ್ಯಾನ್ಸ್ ಪ್ಲಸ್ ಪ್ರೊ’ನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟಿ ನೋರಾ ಫತೇಹಿ, ಅಶ್ಲೀಲ ಡ್ಯಾನ್ಸ್ ಮೂವ್ಸ್‌ನಿಂದಾಗಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾಳೆ. ಕುಟುಂಬದವರು ಕೂತು ನೋಡುವಂಥ ಶೋನಲ್ಲಿ ಹೇಗಿರಬೇಕು ಎಂಬ ಸೆನ್ಸ್ ಇಲ್ಲ ಎಂದು ನೆಟ್ಟಿಗರು ನಟಿಯ ವಿರುದ್ಧ ಕೆಂಡಾಮಟಡಲಾಗಿದ್ದಾರೆ.

ಇತ್ತೀಚೆಗೆ ಜನಪ್ರಿಯ ನೃತ್ಯ ಕಾರ್ಯಕ್ರಮವಾದ ಡ್ಯಾನ್ಸ್ ಪ್ಲಸ್ ಪ್ರೊ ನ ವಿಶೇಷ ಅತಿಥಿಯಾಗಿ ಭಾಗವಹಿಸಿದ ನೋರಾ, ಅಲ್ಲಿ ಕುಣಿದ ನೃತ್ಯ ಮಾತ್ರ ಅವರಿಗೆ ಸಾಕಷ್ಟು ಮುಜುಗರ ತಂದಿದೆ. ವೇದಿಕೆ ಭೇಲೆ ಹೋಗಿ ಎಂದಿನಂತೆ ಸಖತ್ ಹಾಟ್ ಆಗಿ ಕಾಣುತ್ತಿದ್ದ ನೋರಾ, ಸೊಂಟ ಬಳುಕಿಸಲು ರೆಡಿಯಾದ ನೋರೃ ತನ್ನ ಪ್ರದರ್ಶನದ ಸಮಯದಲ್ಲಿ ತನ್ನ ಸೊಂಟದ ಮೇಲೆ ನೀರನ್ನು ಸುರಿದುಕೊಳ್ಳುತ್ತಾ ವೇದಿಕೆಯ ಕಡೆ ತಿರುಗಿದಳು. ನೋರಾಳ ಈ ಸ್ಟೆಪ್‌ಗೆ ಅಲ್ಲಿದ್ದವರೆಲ್ಲ ಏದುಸಿರು ಬಿಡುತ್ತಾ, ಹುಬ್ಬೇರಿಸಿದ್ದು ಕಂಡು ಬಂತು. ಆದರೆ, ಅಭಿಮಾನಿಗಳು ಮತ್ತು ವೀಕ್ಷಕರಿಗೆ ಮಾತ್ರ ಈ ವಿಡಿಯೋ ಸಿಟ್ಪುಬರಿಸಿದ್ದು, ಎಲ್ಲರೂ ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

You may also like

Leave a Comment