Kiccha Sudeep : ಕಿಚ್ಚ ಸುದೀಪ್ ಅವರು ಇಲ್ಲದೆ ಬಿಗ್ ಬಾಸ್ ಮನೆಯನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಎಲ್ಲ ಅಭಿಮಾನಿಗಳು ಬಿಗ್ ಬಾಸ್ ನೋಡುವುದೇ ಕಿಚ್ಚ ಸುದೀಪ್ ಗೋಸ್ಕರ ಎನ್ನುವ ಫ್ರೆಂಡ್ ಕ್ರಿಯೇಟ್ ಆಗಿದೆ. ಕಿಚ್ಚನ ಖಡಕ್ ಮಾತು, ನೇರ ನಡೆ-ನುಡಿ, ಬಿಗ್ ಬಾಸ್ ವೇದಿಕೆಯಲ್ಲಿ ನಿಂತಾಗ ಅವರ ವಿಶೇಷವಾದ ಆಟಿಟ್ಯೂಡ್. ಇವೆಲ್ಲವೂ ಅನೇಕರಿಗೆ ಬಲು ಇಷ್ಟ. ಅಂತೆಯೇ ಬಿಗ್ ಬಾಸ್ ಸೀಸನ್ 12 ಕೂಡ ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಇದೀಗ ಅಭಿಮಾನಿಗಳಿಗೆ ಒಂದು ನಿರಾಸೆಯ ಸುದ್ದಿ ಬಂದಿದ್ದು ಮುಂದಿನ ವಾರ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡಲ್ಲ ಎಂದು ಹೇಳಲಾಗುತ್ತಿದೆ.
ಹೌದು, ಕಿಚ್ಚ ಸುದೀಪ್ ನಾನು ಮುಂದಿನ ವಾರ ಬಿಗ್ ಬಾಸ್ ನಡೆಸಿಕೊಡುದಿಲ್ಲ ಎಂದಿದ್ದಾರೆ. ಕಾರಣವೇನೆಂದರೆ ಸುದೀಪ್ ಅಭಿನಯದ ಮಾರ್ಕ್ ಚಿತ್ರವು ಮುಂದಿನ ವಾರ ರಿಲೀಸ್ ಆಗುವ ಕಾರಣ ಮುಂದಿನ ವಾರ ಶೋ ನಡೆಸಿಕೊಡಲು ಆಗುದಿಲ್ಲ ಅಂದಿದ್ದಾರೆ. ಈ ಬಗ್ಗೆ ಸುದೀಪ್ ಅವರು ಘೋಷಣೆ ಮಾಡಿದ್ದಾರೆ. ಭಾನುವಾರದ (ಡಿಸೆಂಬರ್ 21) ಎಪಿಸೋಡ್ ಕೊನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ಮಾರ್ಕ್’ ಸಿನಿಮಾ ಇದೇ ಡಿಸೆಂಬರ್ 25ರಂದು ವಿಶ್ವಾದ್ಯಂತ ತೆರೆಕಾಣುತ್ತಿದೆ. ಸಿನಿಮಾ ಬಿಡುಗಡೆಯ ಸಂಭ್ರಮ ಹಾಗೂ ಪ್ರಚಾರ ಕಾರ್ಯಗಳಲ್ಲಿ ಸುದೀಪ್ ಬ್ಯುಸಿಯಾಗಿರಲಿರುವುದರಿಂದ, ಡಿಸೆಂಬರ್ 27 ಮತ್ತು 28ರ ಬಿಗ್‌ಬಾಸ್ ಸಂಚಿಕೆಗಳನ್ನು ಅವರು ನಡೆಸಿಕೊಡುವುದಿಲ್ಲ ಎಂದು ಹೇಳಲಾಗಿದೆ.
