Home » Actress vijayalakshmi: ನಟಿ ವಿಜಯಲಕ್ಷ್ಮಿಯಿಂದ ಲೈಂಗಿಕ ದೌರ್ಜನ್ಯದ ಆರೋಪ; ಏಳು ಬಾರಿ ಗರ್ಭಪಾತದ ಆರೋಪ ಹೊರಿಸಿದ ನಟಿ, ನಿರ್ದೇಶಕನಿಗೆ ಪೊಲೀಸರ ಬುಲಾವ್‌

Actress vijayalakshmi: ನಟಿ ವಿಜಯಲಕ್ಷ್ಮಿಯಿಂದ ಲೈಂಗಿಕ ದೌರ್ಜನ್ಯದ ಆರೋಪ; ಏಳು ಬಾರಿ ಗರ್ಭಪಾತದ ಆರೋಪ ಹೊರಿಸಿದ ನಟಿ, ನಿರ್ದೇಶಕನಿಗೆ ಪೊಲೀಸರ ಬುಲಾವ್‌

by Mallika
0 comments
Actress vijayalakshmi

Actress vijayalakshmi: ನಟ-ನಿರ್ದೇಶಕನ ವಿರುದ್ಧ ʼನಾಗಮಂಡಲʼ ಸಿನಿಮಾ ಖ್ಯಾತಿಯ ನಟಿ, ವಿಜಯಲಕ್ಷ್ಮಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಟಿ ವಿಜಯಲಕ್ಷ್ಮಿ ಅವರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು ಇದೀಗ ಸೀಮನ್‌ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆಂದು ವರದಿಯಾಗಿದೆ.

ನಾಮ್‌ ತಮಿಳರ್‌ ಕಚ್ಚಿ ನಾಯಕ, ನಟ-ನಿರ್ದೇಶಕ ಸೀಮನ್‌ ಅವರು ನಟಿ ವಿಜಯಲಕ್ಷ್ಮಿ(Actress vijayalakshmi)ಅವರಿಗೆ ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿದ್ದು, ಮದುವೆಯಾಗುತ್ತೇನೆ ಎಂದು ಭರವಸೆ ನೀಡಿ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದು ಮಾತ್ರವಲ್ಲದೇ, ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ ನಟಿ ವಿಜಯಲಕ್ಷ್ಮಿ ಸೀಮನ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ವಿಚಾರವಾಗಿ ಸೀಮನ್‌ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರೂ, ಅವರು ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಮಂಗಳವಾರ ವಿಚಾರಣೆಗೆ ಹಾಜರಾಗಲು ಹೇಳಲಾಗಿದೆ.

ನಾನು ಸರಕಾರ ಮತ್ತು ಪೊಲೀಸ್‌ ಮೇಲೆ ಭರವಸೆ ಇಟ್ಟಿದ್ದು, ಈ ಬಾರಿಯಾದರೂ ನನಗೆ ನ್ಯಾಯ ದೊರಕುತ್ತದೆ ಎಂಬ ಭರವಸೆಯಲ್ಲಿದ್ದೇನೆ ಎಂದು ನಟಿ ವಿಜಯಲಕ್ಷ್ಮೀ ಹೇಳಿದ್ದಾರೆ.

ಇದನ್ನೂ ಓದಿ: Festival Holidays: ವಿದ್ಯಾರ್ಥಿಗಳಿಗೆ ಈ ವರ್ಷ ಹಬ್ಬಗಳ ರಜೆ ಎಷ್ಟು? ಇಲ್ಲಿದೆ ಡಿಟೇಲ್ಸ್‌!!!

You may also like

Leave a Comment