Home » Navya Nair: ‘ಗಜ’ ನಟಿಯ ಲವ್ವಿ ಡವ್ವಿಯ ಕುರಿತು ಶಾಕಿಂಗ್ ನ್ಯೂಸ್! ಲಕ್ಷಗಟ್ಟಲೆ ಬೆಲೆಬಾಳುವ ಗೆಜ್ಜೆ ಗಿಫ್ಟ್ ನೀಡಿದನಾ ಕಂದಾಯ ಇಲಾಖೆಯ ಅಧಿಕಾರಿ?!!!

Navya Nair: ‘ಗಜ’ ನಟಿಯ ಲವ್ವಿ ಡವ್ವಿಯ ಕುರಿತು ಶಾಕಿಂಗ್ ನ್ಯೂಸ್! ಲಕ್ಷಗಟ್ಟಲೆ ಬೆಲೆಬಾಳುವ ಗೆಜ್ಜೆ ಗಿಫ್ಟ್ ನೀಡಿದನಾ ಕಂದಾಯ ಇಲಾಖೆಯ ಅಧಿಕಾರಿ?!!!

by Mallika
1 comment
Navya Nair

Navya Nair: ಕನ್ನಡದ ಗಜ, ದೃಶ್ಯ, ದೃಶ್ಯ 2, ನಮ್ಮ ಯಜಮಾನರು ಸಿನಿಮಾದಲ್ಲಿ ನಟಿಸಿ ಕರ್ನಾಟಕದಲ್ಲೂ ಮನೆ ಮಾತಾಗಿರುವ ಮಲಯಾಳಿ ನಟಿ ನವ್ಯಾ ನಾಯರ್‌ ಇದೀಗ ಕಂದಾಯ ಇಲಾಖೆಯ ಅಧಿಕಾರಿ (IRS Officer) ಜೊತೆ ಕೇಳಿ ಬರುತ್ತಿದೆ. ಅಧಿಕಾರಿ ಸಚಿನ್‌ ಸಾವಂತ್‌ ಎಂಬುವವರ ಜೊತೆ ನವ್ಯಾ ಹೆಸರು ಹೆಚ್ಚು ಸದ್ದು ಮಾಡಿದೆ. ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಪ್ರಕರಣದಲ್ಲಿ ಸಚಿನ್‌ ಸಾವಂತ್‌ ಇತ್ತೀಚೆಗೆ ಬಂಧಿಯಾಗಿದ್ದರು. ಇದೀಗ ಈ ಪ್ರಕರಣದ ತನಿಖೆಗೆ ನಟಿ ನವ್ಯಾಗೆ ಇಡಿ ನೋಟಿಸ್‌ ನೀಡಿದೆ. ಹಾಗೂ ತನಿಖೆಗೆ ಹಾಜರಾಗುವಂತೆ ಹೇಳಿದೆ.

ನವ್ಯಾ ನಾಯರ್‌ ಅವರು ದುಬಾರಿ ಬೆಲೆಯ ಚಿನ್ನದ ಒಡವೆಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆಂದು ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು. ಹಾಗಾಗಿ ಇಡಿ ನೋಟಿಸ್‌ ನೀಡಿದೆ.

ಸಚಿನ್‌ ಸಾವಂತ್‌ ಮತ್ತು ನವ್ಯಾ ನಾಯರ್‌ (Navya Nair) ಇವರಿಬ್ಬರ ನಡುವೆ ಸಂಪರ್ಕವಿದ್ದು, ನವ್ಯಾ ಸಚಿನ್‌ ಅವರಿಂದ ದುಬಾರಿ ಗಿಫ್ಟ್‌ ಪಡೆದಿದ್ದಾರೆ ಎಂಬ ಆರೋಪವಿದೆ. ಆದರೆ ನವ್ಯಾ ಜೊತೆ ನಿಕಟ ಸಂಪರ್ಕವನ್ನು ಸಚಿನ್‌ ಅಲ್ಲಗೆಳೆದಿದ್ದಾರೆ. ಈ ಸುದ್ದಿ ಮುನ್ನಲೆಗೆ ಬರುತ್ತಿದ್ದಂತೆ ಈಗ ಡ್ರೈವರ್‌ ಶಾಕಿಂಗ್‌ ಮಾಹಿತಿಯನ್ನು ನೀಡಿದ್ದಾರೆ. ಡ್ರೈವರ್‌ ಹೇಳಿರುವ ಪ್ರಕಾರ, ನವ್ಯಾ ನಾಯರ್‌ ಅವರು ಸಚಿನ್‌ ಅವರ ಗರ್ಲ್‌ಫ್ರೆಂಡ್‌ ಎಂಬ ಹೇಳಿಕೆ ನೀಡಿದ್ದಾರೆ ಎಂದು ಸುದ್ದಿಯಾಗಿದೆ.

ಸಚಿನ್‌ ಹಾಗೂ ನವ್ಯಾ ಇಬ್ಬರೂ ವಿವಾಹಿತರು. ಸಚಿನ್‌ ಹೇಳಿರುವ ಪ್ರಕಾರ, ನಾವಿಬ್ಬರೂ ಪರಿಚಿತರು, ನಾವಿಬ್ಬರು ಭೇಟಿಯಾಗಿಲ್ಲ, ಹಾಗೆನೇ ಅವರಿಗೆ ದುಬಾರಿ ಗಿಫ್ಟ್‌ ನಾ ನೀಡಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದು, ಇದೀಗ ಡ್ರೈವರ್‌ ಹೇಳಿಕೆ ಸುದ್ದಿ ನಿಜಕ್ಕೂ ನವ್ಯಾ ನಾಯರ್‌ ಅಭಿಮಾನಿಗಳಿಗೆ ಶಾಕಿಂಗ್‌ ನೀಡಿದೆ ಎಂದೇ ಹೇಳಬಹುದು.

ನವ್ಯಾ ನಾಯರ್‌ ಹಾಗೂ ಸಚಿನ್‌ ಇವರಿಬ್ಬರ ಮಧ್ಯೆ ಸಂಬಂಧ ಇತ್ತು ಎನ್ನುವ ಅರ್ಥದಲ್ಲಿ ಡ್ರೈವರ್‌ ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ನವ್ಯಾ ಅವರು ಇದ್ದ ಬಿಲ್ಡಿಂಗ್‌ನಲ್ಲಿಯೇ ನವ್ಯಾನಾಯರ್‌ ಮನೆಯಿತ್ತು. ನವ್ಯಾ ಕೊಚ್ಚಿಗೆ ಶಿಫ್ಟ್‌ ಆದ ಮೇಲೆ ಸಚಿನ್‌ ಅವರು ಹದಿನೈದರಿಂದ ಇಪ್ಪತ್ತು ಸಲ ಭೇಟಿ ಮಾಡಿದ್ದರು. ಸುಮಾರು ಎರಡು ಲಕ್ಷ ರೂಪಾಯಿಯ ಕಾಲ್ಗೆಜ್ಜೆಯನ್ನು ನವ್ಯಾ ಅವರಿಗೆ ಸಚಿನ್‌ ಉಡುಗೊರೆಯಾಗಿ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: ದ.ಕ. : ಸಚಿವ ಜಮೀರ್ ಅಹಮದ್ ಅವರಿಂದ ದಿಢೀರ್ ಹಾಸ್ಟೆಲ್ ಭೇಟಿ , ಅವ್ಯವಸ್ಥೆ ಕಂಡು ಕೆಂಡಾಮಂಡಲವಾದ ಸಚಿವರು ,ತಾಲೂಕು ವಿಸ್ತರಣಾಧಿಕಾರಿ ಸಸ್ಪೆಂಡ್

You may also like

Leave a Comment