Home » Rashmika mandanna – Rakshith shetty: ಕೊನೆಗೂ ರಿವೀಲ್ ಆಯ್ತು ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಬ್ರೇಕಪ್ ನ ಮೂಲ ಕಾರಣ! ಮನದ ನೋವನ್ನು ತೆರೆದಿಟ್ಟ ರಶ್ಮಿಕಾ ತಾಯಿ ಹೇಳಿದ್ದೇನು?

Rashmika mandanna – Rakshith shetty: ಕೊನೆಗೂ ರಿವೀಲ್ ಆಯ್ತು ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಬ್ರೇಕಪ್ ನ ಮೂಲ ಕಾರಣ! ಮನದ ನೋವನ್ನು ತೆರೆದಿಟ್ಟ ರಶ್ಮಿಕಾ ತಾಯಿ ಹೇಳಿದ್ದೇನು?

by ಹೊಸಕನ್ನಡ
0 comments
Rashmika mandanna-Rakshith shetty

Rashmika mandanna-Rakshith shetty: ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ(Kannada Film Industry), ಒಂದು ಕಾಲದಲ್ಲಿ ಸಖತ್ ಸದ್ಧು ಮಾಡಿ, ಆರಂಭದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕಪಲ್ಸ್ ಅಂದ್ರೆ ಅದು ರಕ್ಷಿತ್ ಶೆಟ್ಟಿ(Rakshith shetty)ಹಾಗೂ ರಶ್ಮಿಕಾ ಮಂದಣ್ಣ(Rashmika mandanna) ಅವರ ಕಿರಿಕ್ ಜೋಡಿ. ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಈ ಕ್ಯೂಟ್ ಜೋಡಿ ಕೆಲವೇ ಸಮಯದಲ್ಲಿ ತಮ್ಮ ಸಂಬಂಧವನ್ನು ಕಳೆದುಕೊಂಡು ಭಾರೀ ಚರ್ಚೆಗೆ ಗುರಿಯಾಗಿತ್ತು. ಆದರೆ ಇಷ್ಟೆಲ್ಲಾ ಆದರೂ ಇವರ ನಿಶ್ಚಿತಾರ್ಥ (Engagement) ಕ್ಯಾನ್ಸಲ್ ಆಗಲು ಏನು ಕಾರಣವೆಂಬುದು ಇನ್ನೂ ಕೂಡ ತಿಳಿದಿಲ್ಲ. ಆದರೀಗ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ತಾಯಿ (Rashmika Mandanna Mother) ರಶ್ಮಿಕಾ -ರಕ್ಷಿತ್ (Rashmika mandanna-Rakshith shetty) ನಿಶ್ಚಿತಾರ್ಥ ಮುರಿದುಬಿದ್ದ ಬಗ್ಗೆ ಮಾತಾಡಿದ್ದು, ಬ್ರೇಕಪ್​ಗೆ ಕಾರಣ ತಿಳಿಸಿದ್ದಾರೆ.

ಕನ್ನಡದ ಕಿರಿಕ್ ಪಾರ್ಟಿ(Kirk party) ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ, ಮೊದಲ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಅಭಿನಯಿಸಿ ಸೂಪರ್ ಹಿಟ್​ ಪಡೆದರು. ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಮನೆಯವರ ಒಪ್ಪಿಗೆ ಮೇರೆಗೆ 2017ರಲ್ಲಿ ರಶ್ಮಿಕಾ- ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಕೂಡ ಮಾಡಿಕೊಂಡ್ರು. ಒಂದು ವರ್ಷಗಳ ಕಾಲ ಡೇಟಿಂಗ್ ಕೂಡ ಮಾಡಿದ್ದರು.

ನಂತರದ ದಿನಗಳಲ್ಲಿ ಕನ್ನಡದಲ್ಲಿ ಕೆಲ ಸಿನಿಮಾ ಮಾಡಿದ ಬಳಿಕ ರಶ್ಮಿಕಾ ಮಂದಣ್ಣ ಟಾಲಿವುಡ್​ಗೆ ಹಾರಿದ್ರು. ಬಳಿಕ ಕಾರಣಾಂತರದಿಂದ ರಕ್ಷಿತ್​ ಹಾಗೂ ರಶ್ಮಿಕಾ ಬ್ರೇಕಪ್ ವಿಚಾರವನ್ನು ಹಂಚಿಕೊಂಡಿದ್ರು. ಸೆಪ್ಟೆಂಬರ್ 2018 ರಲ್ಲಿ ಇಬ್ಬರ ಬ್ರೇಕಪ್ ವಿಚಾರ ಹೊರಬಂದಿತು. ಬ್ರೇಕಪ್ (Breakup)​ ಬಳಿಕ ಇಬ್ಬರು ಮುಖಾಮುಖಿಯಾಗಿಲ್ಲ. ಅಷ್ಟೇ ಅಲ್ಲ ನಿಶ್ಚಿತಾರ್ಥ (Engagement) ಕ್ಯಾನ್ಸಲ್ ಆಗಲು ಕಾರಣ ಕೂಡ ತಿಳಿಸಿಲ್ಲ. ಈಗಲೂ ಅಭಿಮಾನಿಗಳು ಇಬ್ಬರ ಬ್ರೇಕಪ್​ಗೆ ಕಾರಣ ಹುಡುಕುತ್ತಿದ್ದಾರೆ.

ಅಂದಹಾಗೆ 2018 ರಲ್ಲಿ ಡೆಕ್ಕನ್ ಕ್ರಾನಿಕಲ್​ಗೆ ನೀಡಿದ ಸಂದರ್ಶನದಲ್ಲಿ ನಟಿ ರಶ್ಮಿಕಾ ಕೂಡ ರಕ್ಷಿತ್ ಜೊತೆಗಿನ ಬ್ರೇಕಪ್ ಬಗ್ಗೆ ಮಾತಾಡಿದ್ರು. ನಾನು ನನ್ನ ಪೋಷಕರು, ಕುಟುಂಬದ ಹಿರಿಯರು ಮತ್ತು ಸ್ನೇಹಿತರ ಜೊತೆ ಸಮಾಲೋಚಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಇದು ಕಠಿಣ ನಿರ್ಧಾರವಾಗಿತ್ತು. ಆದ್ರೆ ಅನಿವಾರ್ಯವಾಗಿತ್ತು ಎಂದು ರಶ್ಮಿಕಾ ಹೇಳಿದ್ದರು. ಆದರೀಗ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ತಾಯಿ (Rashmika Mandanna Mother) ರಶ್ಮಿಕಾ -ರಕ್ಷಿತ್ ನಿಶ್ಚಿತಾರ್ಥ ಮುರಿದುಬಿದ್ದ ಬಗ್ಗೆ ಮಾತಾಡಿದ್ದು, ಬ್ರೇಕಪ್​ಗೆ ಕಾರಣ ತಿಳಿಸಿದ್ದಾರೆ.

ಹೌದು, ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ರಶ್ಮಿಕಾ ತಾಯಿ ಸುಮನ್ ಮಂದಣ್ಣ ಅವರು ‘ಹೊಂದಾಣಿಕೆ ಸಮಸ್ಯೆಯಿಂದ ಅವರಿಬ್ಬರು ಬೇರ್ಪಟ್ಟಿದ್ದಾರೆ’ ಎಂದು ಹೇಳಿದ್ದಾರೆ. ಅಲ್ಲದೆ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥದ ಬಳಿಕ ಆಘಾತದಿಂದ ನಮ್ಮ ಕುಟುಂಬ ತತ್ತರಿಸಿ ಹೋಗಿತ್ತು ಎಂದು ಸುಮನ್ ಹೇಳಿದ್ದಾರೆ. ಅಂದು ಆದ ಈ ಶಾಕ್​ನಿಂದ ನಾವೆಲ್ಲರೂ ಚೇತರಿಸಿಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಜೀವನ ಇದೆ. ಯಾರೂ ಇನ್ನೊಬ್ಬರನ್ನು ನೋಯಿಸಲು ಇಷ್ಟಪಡುವುದಿಲ್ಲ ಮತ್ತು ಎಲ್ಲರೂ ಸಂತೋಷವಾಗಿರಬೇಕು ಎಂದು ರಶ್ಮಿಕಾ ಮಂದಣ್ಣ ತಾಯಿ ಸುಮನ್ ಹೇಳಿದ್ದಾರೆ.

ಇದನ್ನೂ ಓದಿ: ಸಂಗಾತಿಯನ್ನು ಆಯ್ಕೆ ಮಾಡುವಾಗ ಈ ಗುಣಗಳಿರುವವರು ಯಾವಾಗಲೂ ಪರ್ಫೆಕ್ಟ್!

You may also like

Leave a Comment