Bigg Boss Kannada: ಕರಾವಳಿಯ ಜನರಿಗೆ ನಿನ್ನೆ ಬಿಗ್‌ಬಾಸ್ ನೋಡುವಾಗ ರಕ್ಷಿತಾ ಎಂಟ್ರಿ ಆಗಿದ್ದು ಕಂಡು ಖುಷಿ ತಂದಿದೆ. ಒಂದು ಗಂಟೆಯ ಮಟ್ಟಿಗೆ ಆಕೆಯನ್ನು ಕರೆಸಿ, ಸ್ಪರ್ಧಿಗಳ ಕೈಯಲ್ಲಿ ಆಕೆಯನ್ನು ಮನೆಯಿಂದ ಹೊರ ಹಾಕಿದಾಗ ಕರಾವಳಿಯ ಮಂದಿ ನೊಂದಿದ್ದರು. ಆಕೆ ಬಿಗ್‌ಬಾಸ್ ಮನೆಯಲ್ಲಿ ಇರಲು ಅರ್ಹಳು ಎಂದು ವಾದ ಮಾಡಿದವರೂ ಇದ್ದಾರೆ. ಈಗ ಅಂತೂ ಇಂತೂ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ವಾಪಸಾಗಿದ್ದಾರೆ. ಇನ್ನು ಇವರು ಅಲ್ಲಿ ಯಾವ ರೀತಿಯ ಆಟ ಆಡ್ತಾರೆ ಅನ್ನೋದನ್ನು ನಾವು ನೋಡಬೇಕಷ್ಟೇ.

ಇಂದು ಬಿಗ್‌ಬಾಸ್ ಮನೆಯಿಂದ ಎಲಿಮಿನೇಷನ್ ನಡೆಯಲಿದ್ದು, ಈ ವಾರ ಮಲ್ಲಮ್ಮ, ಧನುಷ್, ಕರಿಬಸಪ್ಪ-ಅಮಿತ್, ಗಿಲ್ಲಿ-ಕಾವ್ಯ, ಅಭಿಷೇಕ್-ಅಶ್ವಿನಿ ಅವರು ನಾಮಿಮೇಟ್ ಆಗಿದ್ದರು. ಇದರಲ್ಲಿ ಮಲ್ಲಮ್ಮ ಅವರು ನಿನ್ನೆ ಸೇಫ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ. ಇಂದು ಉಳಿದ ಸದಸ್ಯರಲ್ಲಿ ಯಾರು ಎಲಿಮಿನೇಟ್ ಆಗ್ತಾ ಇದ್ದಾರೆ ಎನ್ನುವ ವಿಷಯ ಹೊರಬೀಳಲಿದೆ. ಮೂಲಗಳ ಪ್ರಕಾರ, ಇಂದು ಕರಿಬಸಪ್ಪ-ಅಮಿತ್ ಅವರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:Expressway: ಕರ್ನಾಟಕದಲ್ಲಿ ಸಿದ್ಧಗೊಳ್ಳುತ್ತಿರುವ 3 ಹೊಸ ಎಕ್ಸ್‌ಪ್ರೆಸ್‌ವೇಗಳು ಯಾವುವು?
