Home » ನಾನು ಯಾವತ್ತೂ ಹಿಜಾಬ್, ಬುರ್ಖಾ ಪರ ಇಲ್ಲ ಎಂದ ಬಾಲಿವುಡ್ ನ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್!!

ನಾನು ಯಾವತ್ತೂ ಹಿಜಾಬ್, ಬುರ್ಖಾ ಪರ ಇಲ್ಲ ಎಂದ ಬಾಲಿವುಡ್ ನ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್!!

0 comments

ಸದಾ ಹಿಂದೂ ಹಾಗೂ ಮುಸ್ಲಿಂ ಮೂಲಭೂತವಾದವನ್ನು ಖಂಡಿಸುತ್ತಾ ಬಂದಿರುವ ಬಾಲಿವುಡ್‍ನ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್, ನಾನು ಯಾವತ್ತೂ ಹಿಜಾಬ್, ಬುರ್ಖಾ ಪರ ಇಲ್ಲ. ನಾನು ನನ್ನ ನಿಲುವಿಗೆ ಬದ್ಧ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಹಿಜಾಬ್ ವಿವಾದ ಸಾಕಷ್ಟು ಸುದ್ದಿಯಾಗುತ್ತಿದೆ. ಹಿಂದೂ ಪರ ಪ್ರತಿಭಟನಾಕಾರರು ಹಿಜಾಬ್ ತೊಟ್ಟ ಹುಡುಗಿಯರನ್ನು ಸುತ್ತುಗಟ್ಟಿ ಘೋಷಣೆಗಳನ್ನು ಕೂಗಿದ್ದರ ಬೆನ್ನಲ್ಲೇ ಜಾವೇದ್ ಅಖ್ತರ್ ಹಿಜಾಬ್ ಈ ವಿವಾದದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ನಾನು ಯಾವತ್ತೂ ಹಿಜಾಬ್ ಅಥವಾ ಬುರ್ಖಾ ಪರ ಇಲ್ಲ. ಆದರೆ ನಾನು ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ಬುರ್ಖಾ ತೊಟ್ಟ ಹುಡುಗಿಯರನ್ನು ಗುಂಪೊಂದು ಸುತ್ತುವರಿದಿದ್ದನ್ನು ಖಂಡಿಸುತ್ತೇನೆ. ಇದು ಅವರ ಪುರುಷತ್ವದ ಪರಿಕಲ್ಪನೆಯೇ? ಕನಿಕರ ಪಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಜಾವೇದ್ ಅವರು ಹಿಂದಿನಿಂದಲೂ ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದವನ್ನು ಖಂಡಿಸುತ್ತಾ ಬಂದವರು. ಹಿಂದೂಗಳನ್ನು ಟೀಕಿಸುವಂತೆಯೇ, ಮುಸಲ್ಮಾನರನ್ನೂ ಟೀಕಿಸಿದವರು. ಇದೀಗ ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತಾಗಿ ಟ್ವೀಟ್ ಮಾಡಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

You may also like

Leave a Comment