Home » ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ, ಬಾಹುಬಲಿಯಾಗಿ ಜಾವೆಲಿನ್ ನಲ್ಲಿ ಈಟಿ ಬೀಸಿದ ನೀರಜ್ ಚೋಪ್ರಾ | ಅಥ್ಲೆಟಿಕ್ ವಿಭಾಗದಲ್ಲಿ ಭಾರತದ ಶತಮಾನದ ಕೊರಗಿಗೆ ಇಂದು ಬಿತ್ತು ಫುಲ್ ಸ್ಟಾಪ್ !

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ, ಬಾಹುಬಲಿಯಾಗಿ ಜಾವೆಲಿನ್ ನಲ್ಲಿ ಈಟಿ ಬೀಸಿದ ನೀರಜ್ ಚೋಪ್ರಾ | ಅಥ್ಲೆಟಿಕ್ ವಿಭಾಗದಲ್ಲಿ ಭಾರತದ ಶತಮಾನದ ಕೊರಗಿಗೆ ಇಂದು ಬಿತ್ತು ಫುಲ್ ಸ್ಟಾಪ್ !

0 comments

ಟೋಕಿಯೋ : ಶತಕೋಟಿ ಭಾರತೀಯರ ಶತಮಾನದ ಕನಸು ಇಂದು ನನಸಾಗಿದೆ‌. ಒಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ, ಬಲಿಷ್ಠ ಬಾಹುಬಲಿ ಪ್ರದರ್ಶನ ನಡೆದುಹೋಗಿದೆ. ಹಲವು ದೇಶಗಳ ಘಟಾನುಘಟಿ ಪಳಗಿದ ಆಟಗಾರರ ನಡುವೆ ಕೂಡಾ, ನಮ್ಮ ಹುಡುಗ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಎತ್ತಿ ಹಿಡಿದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಒಲಿಂಪಿಕ್ಸ್ ನಲ್ಲಿ ಭಾರತದ ಶತಮಾನದ ನಿರೀಕ್ಷೆ ಇಂದು ಸಾಕಾರವಾಗಿದೆ. ಇಲ್ಲಿಯವರೆಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಯಾವುದೇ ಪದಕ ಗೆದ್ದಿರಲಿಲ್ಲ. ಈಗ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ‌.

ಅರ್ಹತಾ ಸುತ್ತಿನಲ್ಲಿ 86.59 ಮೀ. ದೂರಕ್ಕೆ ಜಾವೆಲಿನ್ ಎಸೆದು ಅಗ್ರಸ್ಥಾನ ಪಡೆದಿದ್ದ ನೀರಜ್ ಚೋಪ್ರಾ, ಫೈನಲ್‌ನಲ್ಲೂ ಮಿಂಚಿ ಮೊದಲ ಎಸೆತದಲ್ಲಿ 87.03 ಮೀ ಹಾಗೂ ಎರಡನೇ ಎಸೆತದಲ್ಲಿ ಅವರ ಸರ್ವಶ್ರೇಷ್ಠ 87.58ಮೀ ದೂರ ಎಸೆಯುವ ಮೂಲಕ ವಿಜಯಿಯಾದರು.

ಜಾವೆಲಿನ್‌ ಥ್ರೋ ಪುರುಷರ ವಿಭಾಗದ ಫೈನಲ್‌ಗೆ ಅರ್ಹತೆ ಪಡೆಯಲು ಕನಿಷ್ಠ 83.50 ಮೀಟರ್‌ ಜಾವೆಲಿನ್ ಎಸೆಯಬೇಕು ಅಥವಾ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದ ಅಗ್ರ 12 ಜಾವೆಲಿನ್‌ ಥ್ರೋ ಪಟುಗಳನ್ನು ಆರಿಸಲಾಗುತ್ತದೆ.

ನೀರಜ್‌ ಚೋಪ್ರಾ ಗುಂಪು ‘ಎ’ ಹಂತದ ಅರ್ಹತಾ ಸುತ್ತಿನಲ್ಲಿ 15ನೇ ಸ್ಥಾನದಲ್ಲಿದ್ದರು. ಆದರೆ ತನ್ನ ಮೊದಲ ಪ್ರಯತ್ನದಲ್ಲಿಯೇ ನೀರಜ್‌ 86.59 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಅಗ್ರಸ್ಥಾನ ಪಡೆದಿದ್ದರು. ಫೈನಲ್‌ನಲ್ಲೂ ಅವರು ತಮ್ಮ ಈ ಲಯವನ್ನೇ ಮುಂದುವರಿಸಲಿ ಎಂದು ಶತಕೋಟಿ ಭಾರತೀಯರು ಪ್ರಾರ್ಥಿಸಿದ್ದರು.

ಹರಿಯಾಣದ ಕುಗ್ರಾಮವೊಂದರ 23 ರ ಹರೆಯದ ಈತ ಭಾರತೀಯ ಸೇನೆಯ ಸುಬೇದಾರ್ ಆಗಿದ್ದಾರೆ. ಈತನ ಈ ಸಾಧನೆ ಭಾರತದ ಕ್ರೀಡಾ ಪ್ರೇಮಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

2008ರ ಬೀಜಿಂಗ್ ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಚಿನ್ನ ಗೆದ್ದಿದ್ದರು. ಇದೀಗ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಎರಡನೇ ಆಟಗಾರನಾಗಿ ನೀರಜ್ ಚೋಪ್ರಾ ಹೊರಹೊಮ್ಮಿದ್ದಾರೆ.

ಚಿನ್ನದ ಹುಡುಗ ನೀರಜ್‌ಗೆ ದೇಶದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಜೊತೆಗೆ ಹರಿಯಾಣ ಸರ್ಕಾರ 6 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.

You may also like

Leave a Comment