Home » Mohini Christina: ನಟಿ ಮೋಹಿನಿಗೆ ಏನಾಯ್ತು?? ಚಿತ್ರರಂಗದಲ್ಲಿ ಯಶಸ್ಸು ಕಂಡ ನಟಿ ವೈರಾಗ್ಯ ಜೀವನಕ್ಕೆ ಅಡಿಯಿಟ್ಟಿದ್ದೇಕೆ??

Mohini Christina: ನಟಿ ಮೋಹಿನಿಗೆ ಏನಾಯ್ತು?? ಚಿತ್ರರಂಗದಲ್ಲಿ ಯಶಸ್ಸು ಕಂಡ ನಟಿ ವೈರಾಗ್ಯ ಜೀವನಕ್ಕೆ ಅಡಿಯಿಟ್ಟಿದ್ದೇಕೆ??

1 comment
Mohini Christina

Mohini Christina: ಚೆನ್ನೈನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಮಹಾಲಕ್ಷ್ಮಿ ಶ್ರೀನಿವಾಸನ್‌ (Mohini Srinivasan)ಅವರು ಮೋಹಿನಿ ಕ್ರಿಸ್ಟೀನಾ(Mohini Christina) ಆಗಿ ಬದಲಾಗಿದ್ದಾರೆ. ಹಿಂದೂ ಧರ್ಮಕ್ಕೆ ಸೇರಿದ ಮಹಾಲಕ್ಷ್ಮಿ ಅಲಿಯಾಸ್‌ ಮೋಹಿನಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಸದ್ಯ, ಅಮೆರಿಕದ ಪ್ರಜೆಯಾಗಿದ್ದಾರೆ. ಸಿನಿಮಾರಂಗದಲ್ಲಿ ತಮ್ಮ ಸೌಂದರ್ಯ, ನಟನೆ ಮೂಲಕ ಖ್ಯಾತಿ ಪಡೆದ ನಟಿ ಮೋಹಿನಿ ಇಂದು ಸಂಪೂರ್ಣ ವೈರಾಗ್ಯದೆಡೆಗೆ ವಾಲಿದ್ದಾರೆ ಎನ್ನಲಾಗುತ್ತಿದೆ.

ಕಲ್ಯಾಣ ಮಂಟಪ, ಶ್ರೀರಾಮಚಂದ್ರ, ಗಡಿಬಿಡಿ ಅಳಿಯ ಸಿನಿಮಾ ನೋಡಿದವರಿಗೆ ನಟಿ ಮೋಹಿನಿಯವರ ಮುದ್ದು ಮುಖದ ನೆನಪಾಗದೆ ಇರದು. ಸದ್ಯ, ಚಿತ್ರರಂಗದಿಂದ ದೂರ ಉಳಿದಿರುವ ನಟಿ ಮೋಹಿನಿ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಂಡರೂ ಮೋಹಿನಿ(Actress Mohini) ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ ಎಂದರು ತಪ್ಪಾಗದು.

ನಟಿ ಮೋಹಿನಿಯವರಿಗೆ ಮೊದಲ ಮಗ ಜನಿಸಿದ ನಂತರ ತೀವ್ರ ಅನಾರೋಗ್ಯ ಬೆನ್ನು ಬಿಡದೇ ಕಾಡಿತ್ತು. ವೈಯಕ್ತಿಕ ಜೀವನದ ಸಮಸ್ಯೆಗಳನ್ನು ಎದುರಿಸಿದ ಬಳಿಕ ಪತಿಗೆ ವಿಚ್ಛೇದನ(Divorce)ನೀಡಿ ಪತಿ ಮತ್ತೊಂದು ಮದುವೆಯಾಗಲು(Marraige)ಕೂಡ ನಿರ್ಧಾರ ಮಾಡಿದ್ದರಂತೆ. ಈ ನಡುವೆ ನಟಿ ಮೋಹಿನಿ ಕ್ರಿಶ್ಚಿಯನ್‌ ಆಗಿ ಬದಲಾಗಿದ್ದು, ತಮ್ಮ ಹೆಸರನ್ನು ಅವರ ಹೆಸರಿನ ಕ್ರಿಸ್ಟಿನಾ ಮೋಹಿನಿ ಶ್ರೀನಿವಾಸನ್‌ ಎಂದು ಬದಲಾಯಿಸಿಕೊಂಡಿದ್ದಾರೆ. ತಮ್ಮ ಪತಿಯಿಂದ ಕೂಡ ನಟಿ ಮೋಹಿನಿ ದೂರವಾಗಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: Nithin gadkhari: ಯಾರೂ ಕಾಂಗ್ರೆಸ್ ತೊರೆಯಬೇಡಿ, ಕಾಂಗ್ರೆಸ್ ಅನ್ನು ಬಲಿಷ್ಠ ಮಾಡಬೇಕು – ಬಿಜೆಪಿ ನಾಯಕ ನಿತಿನ್ ಗಡ್ಕರಿಯ ಅಚ್ಚರಿ ಸ್ಟೇಟ್ಮೆಂಟ್!!

ಮೋಹಿನಿ ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಬಳಿಕ ಧ್ಯಾನದ ಮೊರೆ ಹೊಕ್ಕು ಇದೀಗ, ಅಮೆರಿಕದಲ್ಲಿ ಕ್ರೈಸ್ತ ಧರ್ಮದ ಪ್ರಚಾರಕಿಯಾಗಿ ಕೆಲಸ ಮಾಡುತ್ತಿದ್ದಾರಂತೆ. ನಟಿ ಮೋಹಿನಿ ಅವರು ನೀಡಿರುವ ಪ್ರವಚನಗಳು ಆನ್‌ಲೈನ್‌ನಲ್ಲಿ ಸಿಗಳಿದ್ ಕ್ಯಾಥೋಲಿಕ್‌ ಸ್ಪೀಕರ್ಸ್‌ ಎನ್ನುವ ವೆಬ್‌ಸೈಟ್‌ ಇವರ ಪ್ರವಚನವನ್ನು ಪ್ರಕಟಿಸಿದೆ. ಒಟ್ಟಿನಲ್ಲಿ ಬಣ್ಣದ ಲೋಕದಲ್ಲಿ ಮಿಂಚಿದ ನಟಿ ಇದೀಗ, ಕ್ರೈಸ್ತ ಧರ್ಮದ ಪ್ರಚಾರಕಿಯಾಗಿ ವೈರಾಗ್ಯದತ್ತ ಮುಖ ಮಾಡಿರುವುದು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

You may also like

Leave a Comment