Home » Larissa Borgues: ಸ್ಪಂದನಾ ಬೆನ್ನಲ್ಲೇ ಮತ್ತೊಂದು ಯುವ ನಟಿ ಮಾಡೆಲ್’ಗೆ ಹೃದಯ ಸ್ತಂಭನ, ಭಯದಲ್ಲಿ ಸೆಲೆಬ್ರಿಟಿ ಸ್ಟಾರ್’ಗಳು !

Larissa Borgues: ಸ್ಪಂದನಾ ಬೆನ್ನಲ್ಲೇ ಮತ್ತೊಂದು ಯುವ ನಟಿ ಮಾಡೆಲ್’ಗೆ ಹೃದಯ ಸ್ತಂಭನ, ಭಯದಲ್ಲಿ ಸೆಲೆಬ್ರಿಟಿ ಸ್ಟಾರ್’ಗಳು !

by ಹೊಸಕನ್ನಡ
0 comments
Larissa Borgues

Larissa Borgues: ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರೂ ಹೃದಯಾಘಾತ (Heart Attack), ಹೃದಯಸ್ತಂಭನದಿಂದ (Cardiac Arrest) ninda ಸಾಯುವವರ ಸಂಖ್ಯೆ ಹೆಚ್ಚಾಗಿ ಕಂಡುಬಂದಿದ್ದು ಯುವ ಜನತೆಯನ್ನು ಭಯಕ್ಕೆ ದೂಡಿದೆ. ಅದರಲ್ಲೂ ದೇಹ ಸೌಂದರ್ಯವನ್ನು ಬಯಸಿ ಫಿಟ್ನೆಸ್ ಕಾಯ್ದುಕೊಳ್ಳುವ ಸೆಲೆಬ್ರಿಟಿಗಳನ್ನು ಇಂತಹ ಪ್ರಕರಣಗಳು ನಿದ್ದೆಗೆಡಿಸಿ ಹಾಕಿವೆ. ಇಂತಹದೇ ಇನ್ನೊಂದು ಸಾವು ಈಗ ಸಂಭವಿಸಿದೆ. ಖ್ಯಾತ ಮಾಡೆಲ್, ಫ್ಯಾಷನ್ ಲೋಕದ ತಾರೆ 33 ವರ್ಷದ ಹರೆಯದ ಹುಡುಗಿ ಕಾರ್ಡಿಯಾಕ್ ಅರೆಸ್ಟ್ ಆಗಿದ್ದರಿಂದ ಸಾವನ್ನಪ್ಪಿದ್ದಾಳೆ. ಆಕೆಗೆ ಎರಡೆರಡು ಬಾರಿ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು ಎಂದು ಹೇಳಲಾಗುತ್ತಿದೆ.

ಬ್ರೆಜಿಲ್ ದೇಶದ ಯುವ ಮಾಡೆಲ್ ಲಾರಿಸ್ಸಾ ಬೋರ್ಗೆಸ್(Larissa Borgues) ಸಾವಿನ ಕುರಿತು ಅವರ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಕುಟುಂಬವು ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದೆ. ಮಗಳು ಇಷ್ಟು ಬೇಗ ನಮ್ಮನ್ನು ತೊರೆದಿದ್ದು ಅತೀವ ದುಃಖ ತಂದಿದೆ ಎಂದು ಅವರು ಸಂಕಟ ಹಂಚಿಕೊಂಡಿದ್ದಾರೆ.

ಫಿಟ್ನೆಸ್ ಅನ್ನು ಸಾಧಿಸಿಕೊಂಡು ಮತ್ತು ಫ್ಯಾಷನ್ ನಲ್ಲಿ ತಮ್ಮದೇ ಆದ ಹೆಸರು ಮಾಡಿದ್ದ ಹುಡುಗಿ ಲಾರಿಸ್ಸಾ. ಆಕೆ ಹಲವು ಉತ್ಪನ್ನಗಳಿಗೆ ಅವರು ರೂಪದರ್ಶಿಯಾಗಿದ್ದು ಜನಪ್ರಿಯತೆ ಪಡೆದುಕೊಂಡಿದ್ದಾಳೆ. ಮೊನ್ನೆ ಆಕೆ ಒಂದು ಫ್ಯಾಶನ್ ಕಾರ್ಯಕ್ರಮಕ್ಕೆಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆಕೆಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಆಕೆ ಕೂಡಲೇ ಕೋಮಾಗೆ ಜಾರಿದ್ದಾಳೆ. ಅಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಶುರು ಮಾಡಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ತನ್ನ 33 ನೆ ವಯಸ್ಸಿನಲ್ಲಿ ನಿಧನರಾಗಿದ್ದಾಳೆ.

ಇದನ್ನೂ ಓದಿ: ಬೆಳ್ತಂಗಡಿ: ಪ್ರತಿಭಾವಂತ ಕಬಡ್ಡಿ ಆಟಗಾರ ಆತ್ಮಹತ್ಯೆಗೆ ಶರಣು

You may also like

Leave a Comment