Home » Aishwarya rai: ಗಂಡಾಗಿದ್ದ ನಾನು ಹೆಣ್ಣಾಗಿ ಬದಲಾದಾಗ ಐಶ್ವರ್ಯ ರೈ ಏನು ಮಾಡ್ತಿದ್ರು ಗೊತ್ತಾ?! ಅಚ್ಚರಿ ವಿಚಾರ ತೆರದಿಟ್ಟ ವಿಶ್ವ ಸುಂದರಿಯ ಫ್ಯಾಷನ್ ಡಿಸೈನರ್ ಸೈಶಾ !!

Aishwarya rai: ಗಂಡಾಗಿದ್ದ ನಾನು ಹೆಣ್ಣಾಗಿ ಬದಲಾದಾಗ ಐಶ್ವರ್ಯ ರೈ ಏನು ಮಾಡ್ತಿದ್ರು ಗೊತ್ತಾ?! ಅಚ್ಚರಿ ವಿಚಾರ ತೆರದಿಟ್ಟ ವಿಶ್ವ ಸುಂದರಿಯ ಫ್ಯಾಷನ್ ಡಿಸೈನರ್ ಸೈಶಾ !!

1 comment
Aishwarya rai

Aishwarya rai: ನಟಿ ಐಶ್ವರ್ಯ ರೈ ಅವರು ತಮ್ಮ ವೈಯಕ್ತಿಕ ವಿಚಾರಗಳಿಂದ ಕೆಲ ಸಮಯಗದಿಂದ ಸುದ್ದಿಯಲ್ಲಿದ್ದಾರೆ. ಗಂಡ-ಹೆಂಡತಿ ದೂರಾಗಿದ್ದಾರೆ, ಡಿವೋರ್ಸ್ ಆಗಿದೆ ಎಂದೆಲ್ಲಾ ಸುದ್ದಿ ಹರಿದಾಡುತ್ತಿದೆ. ಅದೇನೆ ಇರಲಿ ಇದೀಗ ನಟಿ ಐಶ್ವರ್ಯ ಕುರಿತು ಅವರ ಫ್ಯಾಷನ್ ಡಿಸೈನರ್ ಸೈಶಾ ಮನಬಿಚ್ಚಿ ಮಾತನಾಡಿದ್ದು, ಕೆಲವು ವಿಚಾರಗಳನ್ನು ಬಹಿರಂಗೊಳಿಸಿದ್ದಾರೆ.

ಹೌದು, 40ರ ವಯಸ್ಸಿಗೆ ಸರ್ಜರಿ ಮಾಡಿಸಿಕೊಂಡು ಟ್ರಾನ್ಸ್‌ವುಮನ್ ಆಗಿ ಬದಲಾದ ಐಶ್ವರ್ಯ ಕುರಿತು ಅವರ ಫ್ಯಾಷನ್ ಡಿಸೈನರ್ ಸೈಸಾ ಶಿಂಧೆ ಅಲಿಯಾಸ್‌ ಬಾಲಿವುಡ್‌ನ ಖ್ಯಾತ ಫ್ಯಾಷನ್ ಡಿಸೈನರ್ ತಮ್ಮ ಬದುಕಿನ ಹೊಸ ಪ್ರಯಾಣದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ವಿಶ್ವ ಸುಂದರಿ ಐಶ್ವರ್ಯಾ ಅವರು ತಮ್ಮನ್ನು ಹೇಗೆ ನಡೆಸಿಕೊಂಡರು ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.

ಇದನ್ನೂ ಓದಿ: Haveri gang rape: ಹಾವೇರಿಯಲ್ಲಿ ಮುಸ್ಲಿಂ ಯುವತಿ ಮೇಲೆ ಹಲ್ಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ನಡೆದದ್ದು ನೈತಿಕ ಪೋಲೀಸ್ ಗಿರಿಯಲ್ಲ, ಮಹಿಳೆ ಮೇಲೆ ಮುಸ್ಲಿಂ ಯುವಕರಿಂದಲೇ ಸಾಮೂಹಿಕ ಅತ್ಯಾಚಾರ!!

ಸೈಸಾ ಬಾಲಿವುಡ್ ಲೋಕದ ಖ್ಯಾತ ಫ್ಯಾಷನ್ ಡಿಸೈನರ್. ಅಂತೆಯೇ ಅವರು ಐಶ್ವರ್ಯ ರೈ ಅವರ ನೆಚ್ಚಿನ ಫ್ಯಾಷನ್ ಡಿಸೈನರ್ ಕೂಡ. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರಿಗೆ ಸೈಸಾ ಹುಡುಗ ಆಗಿದ್ದಾಗಿಂದಲೂ ಡಿಸೈನರ್ ಆಗಿ ವರ್ಕ್ ಮಾಡುತ್ತಿದ್ದಾರೃ. ಆದರೆ ಅವರು ತನ್ನ ಈ ದೈಹಿಕ ಬದಲಾವಣೆಯ ನಂತರವೂ ಅಂದರೆ ತಾನು ಹುಡುಗಿ ಆದಾಗಿಂದಲೂ ಕೂಡ ಬಹಳ ಗೌರವದಿಂದ ನಡೆಸಿಕೊಂಡರು ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ ಸೈಸಾ.

ಈ ಕುರಿತು ಮಾತನಾಡಿದ ಅವರು ಐಶ್ವರ್ಯಾ ರೈ ಜೊತೆಗಿನ ವ್ಯವಹಾರವೊಂದರಲ್ಲಿ ಅವರು ಮೊದಲಿಗೆ ತಾನು ಈಗ ಸ್ವಪ್ನಿಲ್ ಅಲ್ಲಾ ಸೈಸಾ ಎಂಬುದನ್ನು ಹೇಳಿಕೊಳ್ಳಲು ಮುಂದಾಗಿದ್ದೇನೆ ಎಂದು ತನ್ನ ಮ್ಯಾನೇಜರ್‌ಗೆ ತಿಳಿಸಿದ್ದರಂತೆ. ಇನ್ನು ಈ ವಿಚಾರ ಮ್ಯಾನೇಜರ್‌ಗೆ ತಿಳಿಸಿದ ನಂತರ ನಾನು ಐಶ್ವರ್ಯಾ ರೈ ಅವರ ಫಿಟ್ಟಿಂಗ್‌ಗೆ ಹೋಗಿದ್ದೆ. ಈ ವೇಳೆ ಐಶ್ವರ್ಯಾ ಎಂದಿನಂತೆ ಐಶ್ವರ್ಯಾ ಆಗಿಯೇ ಇದ್ದರು. ಅವರು ನನ್ನನ್ನು ಸೈಶಾ ಎಂಬ ಹೆಸರಿನಿಂದಲೇ ಕರೆದರು. ಅಲ್ಲಿಗೆ ಬಂದ ತಮ್ಮ ಮಗಳು ಆರಾಧ್ಯಗೂ ನನ್ನನ್ನು ಗೌರವದಿಂದ ಪರಿಚಯಿಸಿದರು. ಇಷ್ಟೇ ಅಲ್ಲದೆ ಮುಂದೆಯೂ ನನ್ನನ್ನು ಎಂದೆಂದಿಗೂ ಗೌರವಾಧಾರಗಳಿಂದಲೇ ನಡೆಸಿಕೊಂಡರು ಎಂದು ಹೇಳಿದ್ದಾರೆ.

You may also like

Leave a Comment