Home » Bigg Boss: ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟು ಹನುಮಂತನ ಎಲ್ಲಾ ನಿಜ ಬಣ್ಣ ಬಯಲು ಮಾಡಿದ ಯೋಗರಾಜ್ ಭಟ್ರು – ಹನುಮಂತ ಮುಗ್ಧತೆನಾ? ಇಲ್ಲಾ ನಟನೆನೆನಾ? ಇಲ್ಲಿದೆ ಉತ್ತರ

Bigg Boss: ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟು ಹನುಮಂತನ ಎಲ್ಲಾ ನಿಜ ಬಣ್ಣ ಬಯಲು ಮಾಡಿದ ಯೋಗರಾಜ್ ಭಟ್ರು – ಹನುಮಂತ ಮುಗ್ಧತೆನಾ? ಇಲ್ಲಾ ನಟನೆನೆನಾ? ಇಲ್ಲಿದೆ ಉತ್ತರ

1 comment

Bigg Boss: ಅಮ್ಮನನ್ನು ಕಳೆದುಕೊಂಡ ದುಃಖದಲ್ಲಿರುವ ಸುದೀಪ್ ಈ ವಾರ ಬಿಗ್ ಬಾಸ್(Bigg Boss)ಮನೆಯ​ ಪಂಚಾಯಿತಿ ನಡೆಸಲು ಬರೋದಿಲ್ಲ. ಹೀಗಾಗಿ ಬಿಗ್ ಬಾಸ್ ಮನೆಯ ಪಂಚಾಯಿತಿ ನಡೆಸಲು ಯೋಗರಾಜ್ ಭಟ್ರು(Yograj Bhat) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಎಲ್ಲರನ್ನು ಸಖತ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ನಡುವೆ ಅವರು ಹಳ್ಳಿ ಹುಡುಗ, ಮುಗ್ಧ ಹನುಮಂತನಿಗೆ ಕ್ಲಾಸ್ ತೆಗೆದುಕೊಂಡು ಅವನ ನಿಜ ಬಣ್ಣ ಬಯಲು ಮಾಡಿದ್ದಾರೆ ಎನ್ನಲಾಗಿದೆ.

ಹೌದು, ಹನುಮಂತು(Hanumantu) ಅವರಿಗೆ ಟಾಯ್ಲೆಟ್​ನಲ್ಲಿ ಫ್ಲಶ್ ಮಾಡೋದು ಹೇಗೆ ಅನ್ನೋದು ಗೊತ್ತಿಲ್ಲ. ಇದನ್ನು ಅವರೇ ಹೇಳಿಕೊಂಡಿದ್ದರು. ಇಷ್ಟೆಲ್ಲ ರಿಯಾಲಿಟಿ ಶೋ ಮಾಡಿದವರಿಗೆ ಅಷ್ಟೂ ಗೊತ್ತಾಗುವುದಿಲ್ಲವೇ ಎನ್ನುವ ಪ್ರಶ್ನೆ ಮೂಡೋದು ಸಹಜ. ವೀಕೆಂಡ್​ನಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಆಗಿದೆ. ದೊಡ್ಮನೆಗೆ ಅತಿಥಿಯಾಗಿ ಬಂದ ಯೋಗರಾಜ್ ಭಟ್​ ಎದುರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹನುಮಂತು ನಿಜಕ್ಕೂ ಇನ್ನೋಸೆಟ್ ಇದ್ದಾನಾ ಅಥವಾ ಸ್ಮಾರ್ಟ್ ಆಗಿದ್ದಾನಾ ಎಂದು ಯೋಗರಾಜ್ ಭಟ್ರು ಮನೆಯವರಿಗೆ ಪ್ರಶ್ನೆ ಕೇಳಿದ್ರು. ಇದಕ್ಕೆ ಉತ್ತರಿಸಿದ ಸ್ಪರ್ಧಿಗಳು ನೇರವಾಗಿಯೇ ಉತ್ತರ ನೀಡಿದ್ದಾರೆ. ಶಿಶಿರ್ ಮಾತಾಡಿ, ಹನುಮಂತು ಬುದ್ದಿವಂತ, ದಡ್ಡ ಅಂತು ಅಲ್ಲವೇ ಅಲ್ಲ ಎಂದಿದ್ದಾರೆ. ಅಲ್ಲದೆ ಸ್ಮಾರ್ಟ್ ಆಗಿ ಆಟ ಆಡ್ತಿದ್ದಾನೆ ಎನ್ನುವಂತೆ ತ್ರಿವಿಕ್ರಮ್ ಕೂಡ ಮಾತಾಡಿದ್ದಾರೆ. ಅಷ್ಟಿಲ್ಲದೇ ಅಷ್ಟೋಂದು ಶೋಗಳಲ್ಲಿ ಭಾಗವಹಿಸಿ. ಕೆಲ ಕಾರ್ಯಕ್ರಮಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ಹನುಮಂತು ಅವಕಾಶನಾ ದುರ್ಬಳಕೆ ಮಾಡಿಕೊಳ್ತಿದ್ದಾನೆ ಎಂದು ನಿಮಗೆ ಅನಿಸ್ತಿದ್ಯಾ ಎಂಬ ಪ್ರಶ್ನೆಗೆ ಮನೆಯವರು ನಾನಾ ಉತ್ತರ ನೀಡಿದ್ದಾರೆ.

ಮುಂದುವರೆದು ಯೋಗರಾಜ್ ಭಟ್ ಅವರು, ಹನುಮಂತ ಒಬ್ಬ ಕುತಂತ್ರಿ, ಖತರ್ನಾಕ್ ಇದ್ದಾನೆ ಎಂಬುದಾದರೆ ಅದನ್ನು ನೇರವಾಗಿ ಹೇಳಬಹುದು ಎಂದು ಹೇಳಿದ್ದಾರೆ. ಭಟ್ರ ಪ್ರಶ್ನೆ, ಮನೆ ಮಂದಿಯ ಮಾತು ಕೇಳಿದ ಹನುಮಂತು ತಬ್ಬಿಬ್ಬಾದಂತೆ ಕಾಣ್ತಿದೆ.

You may also like

Leave a Comment