Kabzaa Box Office Prediction: ಸ್ಯಾಂಡಲ್‌ವುಡ್ ನ 2023 ರಲ್ಲಿ ರಿಲೀಸ್ ಆಗುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’. ಈ ಸಿನಿಮಾ ನಾಳೆ ಅಂದರೆ ಮಾರ್ಚ್ 17 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಮೂವರು ಕನ್ನಡದ ದಿಗ್ಗಜ ನಂತರ ಸಿನಿಮಾ ಕಬ್ಜ ಆಗಿದ್ದು, ಅದರಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ನಟಿಸಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಅದು ಏಕಕಾಲಕ್ಕೆ ರಿಲೀಸ್ ಆಗುತ್ತಿರುವ ಈ ಒಂದೇ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುವುದರಿಂದ ‘ಕಬ್ಜ’ ನಿರೀಕ್ಷೆ ದುಪ್ಪಟ್ಟಿಲ್ಲ, ಮೂರ್ಮಡಿ ಆಗಿದೆ.
ಕನ್ನಡದ ಈ ಮೂವರು ಸೂಪರ್‌ಸ್ಟಾರ್‌ಗಳು ಬಾಕ್ಸಾಫೀಸ್‌ನಲ್ಲಿ ಹೇಗೆ ಮೋಡಿ ಮಾಡುತ್ತಾರೆ ಅನ್ನೋ ಕುತೂಹಲದಲ್ಲಿ ಇಡೀ ದೇಶವೇ ಕಬ್ಜಾ ಚಿತ್ರದತ್ತ ಗಮನವಿಟ್ಟು ನೋಡುತ್ತಿದೆ. ಕಬ್ಜ ಚಿತ್ರ ‘ಕೆಜಿಎಫ್ 2’ ಸಿನಿಮಾದಂತೆ ವಿಶ್ವ ಮಟ್ಟದಲ್ಲಿ ಸದ್ದು ಮಾಡಬಹುದಾ? ಅನ್ನೋ ಕುತೂಹಲ ಒಂದೆಡೆ ಇರುವಂತೆಯೇ ಇನ್ನೊಂದಡೆ ಕಬ್ಜ ಚಿತ್ರವನ್ನು ‘ಕೆಜಿಎಫ್’ ಸಿನಿಮಾವನ್ನೇ ಸ್ಪೂರ್ತಿಯಾಗಿಟ್ಟುಕೊಂಡು ನಿರ್ಮಾಣ ಮಾಡಲಾಗಿದೆ ಎನ್ನುವ ಆಪಾದನೆಗೆ ಕೂಡ ಗುರಿ ಮಾಡಲಾಗಿದೆ. ಆದರೆ ನಟ ಉಪೇಂದ್ರ ಅವರು ಇದನ್ನು ಕಂಡ ತುಂಡವಾಗಿ ಖಂಡಿಸಿದ್ದಾರೆ. ಟ್ರೈಲರ್ ನೋಡಿದಾಗ ನಿಮಗೆ ಹಾಗೆ ಅನ್ನಿಸುವುದು ಸಹಜ, ಆದರೆ ಈ ಚಿತ್ರಕ್ಕೂ ಕೆಜಿಎಫ್ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಕಬ್ಜಾ ಚಿತ್ರವು ಒಟ್ಟು ನಾಲ್ಕು ದಶಕಗಳ ಅಂಡರ್‌ವರ್ಲ್ಡ್ ಕಥೆಯನ್ನು ಅದ್ಧೂರಿಯಾಗಿ ತೆರೆಮೇಲೆ ತರಲು ಹೊರಟಿದೆ. ಹೀಗಾಗಿ ‘ಕಬ್ಜ’ ತಂಡ ಭರ್ಜರಿಯಾಗಿ ಪ್ರಚಾರ ಮಾಡಿದೆ. ಕಬ್ಜಾ ಚಿತ್ರವು ಹಿಟ್ ಆಗಬಹುದೇ ? ಚಿತ್ರವು ಎಷ್ಟು ಕಲೆಕ್ಷನ್ (Kabzaa Box Office Prediction) ಮಾಡಬಹುದು ಎಂದು ಸಿನಿಮಾದ ವ್ಯಾಪಾರಿ ಅನಲಿಸ್ಟ್‌ಗಳು ಲೆಕ್ಕ ಹಾಕಿದ್ದಾರೆ. ಈಗ ಒಂದು. ಅಂದಾಜು ಲೆಕ್ಕ ದೊರೆತಿದೆ.
‘ಕಬ್ಜ’ ಫಸ್ಟ್ ಡೇ ಕಲೆಕ್ಷನ್ ಲೆಕ್ಕಾಚಾರವೇನು ಎಂಬುದು ಗೊತ್ತಾಗಿದೆ. ಈ ಚಿತ್ರಕ್ಕೆ ಭಾರಿ ನಿರೀಕ್ಷೆ ಇರುವ ಕಾರಣ ನಿರ್ದೇಶಕ ಕಮ್ ನಿರ್ಮಾಪಕ ಆರ್ ಚಂದ್ರು, ಸುಮಾರು 4 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಸಿನಿಮಾ ವಿತರಕರ ಪ್ರಕಾರ ‘ಕಬ್ಜ’ ಬಗ್ಗೆ ಸದ್ಯಕ್ಕೆ ಪಾಸಿಟಿವ್ ಒಪಿನಿಯನ್ ಇದೆ. ಆದರೆ ಅಡ್ವಾನ್ಸ್ ಬುಕಿಂಗ್ ನಿರೀಕ್ಷೆ ಮಾಡದಷ್ಟು ಪ್ರತಿಕ್ರಿಯೆ ಬಾರದೇ ನಿರೀಕ್ಷೆ ಹುಸಿ ಯಾಗಿತ್ತು. ಆದರೂ ಈಗ ಸಿಕ್ಕಿರೋ ರೆಸ್ಪಾನ್ಸ್ ನಿಂದಾಗಿ ಮತ್ತು ‘ಕಬ್ಜ’ ದೊಡ್ಡ ಸಿನಿಮಾ ಆಗಿರೋದ್ರಿಂದ ಮೊದಲ ದಿನ ಭಾರತದಾದ್ಯಂತ ಸುಮಾರು 15 ರಿಂದ 20 ಕೋಟಿ ರೂ. ಕಲೆಕ್ಷನ್ ಆಗಬಹುದು ಎನ್ನುವುದು ಒಂದು ಅಂದಾಜು. ಅದರಲ್ಲಿ ಕರ್ನಾಟಕದಲ್ಲಿ 10 ಕೋಟಿ ರೂ. ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿದೆ.
‘ಕಬ್ಜ’ ಕೇವಲ ಭಾರತದಲ್ಲಷ್ಟೇ ಅಲ್ಲ, ವಿದೇಶದಲ್ಲಿಯೂ ಬಿಡುಗಡೆಯಾಗುತ್ತಿದೆ. ಹೀಗಾಗಿ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾವನ್ನು ವಿದೇಶದಲ್ಲಿಯೂ ನೋಡಬಹುದಾಗಿದೆ. ಹೀಗಾಗಿ ‘ಕಬ್ಜ’ ದ ಇಣಿಷಿಯಲ್ ಕಲೆಕ್ಷನ್ ಜೋರಾಗಿಯೇ ಆಗುವ ನಿರೀಕ್ಷೆ ಇದೆ. ಮೊದಲ ಮೂರು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ 60 ರಿಂದ 70 ಕೋಟಿ ರೂಪಾಯಿ ದಾಟುತ್ತದೆ. ಅಷ್ಟರಲ್ಲಿ ವೀಕೆಂಡ್ ಬರತ್ತೆ. ಎಲ್ಲಾ ಟಾಕೀಸು. ಮಲ್ಟಿಪ್ಲೆಕ್ಸ್ ಗಳು ಫುಲ್ ಆಗತ್ತೆ. ಜನರು ತಾವು ಕೊಂಡುಕೊಂಡ ಪಾಪ್ ಕಾರ್ನ್ ಅನ್ನು ತಿನ್ನುವುದನ್ನು ಕೂಡಾ ಮರೆತು ಸಿನಿಮಾ ನೋಡ್ತಾರೆ, ವಾರಾಂತ್ಯದ ಕಲೆಕ್ಷನ್ ದುಪ್ಪಟ್ಟಾಗುತ್ತದೆ ಎನ್ನುವುದು ನಿರೀಕ್ಷೆ.
‘ಕಬ್ಜ’ಗೆ ಮೊದಲ ದಿನವೇ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕರೆ, ಮುಂದಕ್ಕೆ ಇನ್ನೂ ಉಳಿದ ಎರಡು ದಿನ ಕಲೆಕ್ಷನ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ; ಕಲೆಕ್ಷನ್ ಹಾಗೇ ಮುಂದಿನ ವಾರ ಯುಗಾದಿ ಹಬ್ಬ ಇರುವುದರಿಂದ ಮುಂದಕ್ಕೆ ಕಲೆಕ್ಷನ್ ಇಂಪ್ರೂ ಆಗುತ್ತದೆ ಅನ್ನೋದು ಲೆಕ್ಕಾಚಾರ.
