Sreeleela: ಕನ್ನಡದ ಮೂಲಕ ಚಿತ್ರರಂಗ ಪ್ರವೇಶಿಸಿದ ‘ಭರಾಟೆ’ ಬ್ಯೂಟಿ, ಕಿಸ್ ಬೆಡಗಿ ಶ್ರೀಲೀಲಾ (Sreeleela) ಅವರಿಗೆ ಟಾಲಿವುಡ್‌ನಲ್ಲಿ ಈಗಂತೂ ಡಿಮ್ಯಾಂಡಪ್ಪೋ ಡಿಮ್ಯಾಂಡ್. ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಶೆಟ್ಟಿ, ಪೂಜಾ ಹೆಗ್ಡೆ (Pooja Hegde) ಸೇರಿದಂತೆ ಕೆಲ ಸೂಪರ್ ಹೀರೋಯಿನ್‌ಗಳಿಗೆ ಸೆಡ್ಡು ಹೊಡೆದು ಶ್ರೀಲೀಲಾ ಮುನ್ನುಗ್ಗುತ್ತಿದ್ದಾರೆ. ಆದರೀಗ ಈ ಕಿಸ್ ಬೆಡಗಿಯ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಂಚಲನ ಮೂಡಿಸುತ್ತಿವೆ.
ಹೌದು, ಫೋಟೋಶೂಟ್ ಮೂಲಕ ಸಂಚಲನ ಮೂಡಿಸುತ್ತಿರೋ ಶ್ರೀಲೀಲಾ ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಲೈಕ್ಗಳ ಸುರಿಮಳೆ ಗೈದಿದ್ದಾರೆ. ಜೊತೆಗೆ ಪ್ಯಾಂಟ್ ಇಲ್ಲದೇ ನೈಟ್ ಡ್ರೆಸ್ ಫೋಟೋಸ್ ಶೇರ್ ಮಾಡಿರೋ ಶ್ರೀಲೀಲಾಗೆ ಸದ್ಯ ನೆಟ್ಟಿಗರು ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ನೈಟ್ ಡ್ರೆಸ್(Nyt dress) ಧರಿಸಿ, ಕ್ಯಾಮೆರಾ ಹಿಡಿದು ಪೋಸ್ ಕೊಡುತ್ತಿರುವ ಶ್ರೀಲೀಲಾ ಬೋಲ್ಡ್ ಫೋಟೋಗಳು(Bold photos) ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನಟಿ ಪ್ಯಾಂಟ್ ಧರಿಸದೇ ಇರೋದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಪ್ಯಾಂಟ್ ಎಲ್ಲಿ ತಾಯಿ ಅಂತಾ ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ. ಶ್ರೀಲೀಲಾ ತಮ್ಮ ಹೊಸ ಫೋಟೋದಲ್ಲಿ ಮುದ್ದಾಗಿ ಕಾಣಿಸಿದ್ರು. ಅವರು ಪ್ಯಾಂಟ್ ಧರಿಸದೇ ಇರೋದು ಅನೇಕರಿಗೆ ಅಸಮಾಧಾನ ತಂದಿದೆ.
ಇನ್ನು ಕೆಲವರು ನೈಟ್ ಡ್ರೆಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ನೆಟ್ಟಿಗರೊಬ್ಬರು ಇದೇನ್ ತಾಯಿ ಪ್ಯಾಂಟ್ ಹಾಕಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕನ್ನಡ ಮರೆತು ಹೋಗಿದ್ಯಾ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಕರ್ನಾಟಕ ಮರೀಬೇಡಿ ರಶ್ಮಿಕಾ ಥರ ಆಗ್ಬೇಡಿ ಅಂತಾ ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ.
ಅಂದಹಾಗೆ ತೆಲುಗಿಗೆ ಎಂಟ್ರಿ ಕೊಟ್ಟ ಹೊಸತರಲ್ಲೇ ಅಲ್ಲು ಅರ್ಜುನ್‌ಗೆ(Allu Arjun) ಶ್ರೀಲೀಲಾ ನಾಯಕಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಕನ್ನಡದ ನಟಿ ಟಾಲಿವುಡ್‌ನಲ್ಲಿ (Tollywood) ಈ ಪರಿ ಹವಾ ಕ್ರಿಯೇಟ್ ಮಾಡಿರೋದು ಅಭಿಮಾನಿಗಳಿಗೆ ತುಂಬಾನೇ ಖುಷಿ ಕೊಟ್ಟಿದೆ. ಆದರೆ ಈಗ ರಶ್ಮಿಕಾ ಹಾದಿಯನ್ನೇ ಶ್ರೀಲೀಲಾ(Sreeleela) ಹಿಡಿದ್ರಾ ಎಂಬ ಅನುಮಾನ ನೆಟ್ಟಿಗರಿಗೆ ಶುರುವಾಗಿದೆ.
ಇನ್ನು ಈ ಶ್ರೀಲೀಲಾ 8ಕ್ಕೂ ಹೆಚ್ಚು ಸಿನಿಮಾಗಳಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಹೇಶ್ ಬಾಬು – ತ್ರಿವಿಕ್ರಮ್ ಚಿತ್ರ (SSMB28), ಪವನ್ ಕಲ್ಯಾಣ್ – ಹರೀಶ್ ಶಂಕರ್ ಅವರ ‘ಉಸ್ತಾದ್ ಭಗತ್ ಸಿಂಗ್’, ಬಾಲಯ್ಯ ಭಗವಂತ್ ಕೇಸರಿ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ರಾಮ್ ಪೋತಿನೇನಿ – ಬೋಯಪತಿ ಚಿತ್ರ, ವಕ್ಕಂತಂ ವಂಶಿ ನಿರ್ದೇಶನದ ನಿತಿನ್ ಅವರ ಹೊಸ ಸಿನಿಮಾ, ನವೀನ್ ಪೋಲಿಶೆಟ್ಟಿ ಅವರೊಂದಿಗೆ ಅನಗನಾಗ ಒಕ ರಾಜು, ವಿಜಯ್ ದೇವರಕೊಂಡ ಅವರ 12 ನೇ ಚಿತ್ರದಲ್ಲೂ ನಟಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ.
