Home » Kantara Chapter 1: ಕಾಂತಾರ-2 ಬಗ್ಗೆ ಸಿಕ್ತು ಬಿಗ್ಅಪ್ಡೇಟ್, ಅಬ್ಬಬ್ಬಾ.. ಇದು ಹಿಂದೆಂದೂ ನೋಡದ ವಿಸ್ಮಯ!!

Kantara Chapter 1: ಕಾಂತಾರ-2 ಬಗ್ಗೆ ಸಿಕ್ತು ಬಿಗ್ಅಪ್ಡೇಟ್, ಅಬ್ಬಬ್ಬಾ.. ಇದು ಹಿಂದೆಂದೂ ನೋಡದ ವಿಸ್ಮಯ!!

1 comment
Kantara Chapter 1

Kantara Chapter 1: ‘ಕಾಂತಾರ’ ಸಿನಿಮಾ (Kantar Movie) ರಿಲೀಸ್ ಆಗಿ ವರ್ಷ ಕಳೆದರೂ ಸಿನಿಮಾ ಹವಾ ಮಾತ್ರ ಹಾಗೆ ಇದೆ ಅಂದರೆ ಸುಳ್ಳಾಗದು. ಇದೀಗ ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ‘ಕಾಂತಾರ 2’ ಚಿತ್ರದ ಫಸ್ಟ್ ಪೋಸ್ಟರ್ ಬಗ್ಗೆ ಮಾಹಿತಿ ಸಿಕ್ಕಿದೆ.

ಹೌದು, ನವೆಂಬರ್ 27ರ ಮಧ್ಯಾಹ್ನ 12:25ಕ್ಕೆ ಅನಾವರಣಗೊಳ್ಳಲಿದೆ. ‘ಕಾಂತಾರ 2’ ರಿಷಬ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್​ನಲ್ಲಿ ರಿಲೀಸ್ ಆಗಲಿದೆ. ಈ ವಿಚಾರ ತಿಳಿದು ಅಭಿಮಾನಿಗಳು ಕುತೂಹಲಕಾರಿಯಾಗಿ ಕಾಯುತ್ತಿದ್ದಾರೆ.

‘ಕಾಂತಾರ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ನಟನಾಗಿ, ನಿರ್ದೇಶಕನಾಗಿ ಗೆದ್ದು, ಎರಡು ಶೇಡ್​ನ ಪಾತ್ರವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು. ದೈವ ಬಂದಂತೆ ಆಡುವಾಗ ಅವರ ಹಾವ-ಭಾವ ನೋಡಿ ಆಶ್ಚರ್ಯ ಗೊಂಡಿದ್ದರು. ಈಗ ಈ ಚಿತ್ರಕ್ಕೆ ಎರಡನೇ ಪಾರ್ಟ್ ಬರುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.

‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವುದರ ಜೊತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ. ಕಾಂತಾರ ಚಾಪ್ಟರ್ 1 (Kantara Chapter 1) ಫಸ್ಟ್ ಲುಕ್ ನವೆಂಬರ್ 27, ಮಧ್ಯಾಹ್ನ 12:25ಕ್ಕೆ’ ಮೂಡಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದೆ.

ಮುಖ್ಯವಾಗಿ ಟೈಟಲ್ ಕಾರ್ಡ್​ನಲ್ಲಿ ಕೇವಲ ‘ಕಾಂತಾರ’ ಎಂದಷ್ಟೇ ಇದೆ. ‘ಕಾಂತಾರ ಚಾಪ್ಟರ್ 1’ ಎಂದು ಹ್ಯಾಶ್​ಟ್ಯಾಗ್ ಹಾಕಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ರಿಷಬ್ ಶೆಟ್ಟಿ ಅವರ ಹೊಸ ಅವತಾರ ನೋಡಲು ಫ್ಯಾನ್ಸ್ ಸೋಮವಾರದವರೆಗೆ ಕಾಯಲೇಬೇಕು.

https://twitter.com/hombalefilms/status/1728251866746945787?ref_src=twsrc%5Etfw%7Ctwcamp%5Etweetembed%7Ctwterm%5E1728251866746945787%7Ctwgr%5Eb01998b189546c751ec33958c2d7e56b54d05927%7Ctwcon%5Es1_c10&ref_url=https%3A%2F%2Ftv9kannada.com%2Fentertainment%2Fsandalwood%2Fkantara-chapter-1-movie-first-poster-will-be-released-on-november-27th-here-is-the-details-rmd-724946.html

ಇದನ್ನು ಓದಿ: Bengaluru Kambala: ಇಂದಿನಿಂದ ಬೆಂಗ್ಳೂರಲ್ಲಿ ಮಂಗ್ಳೂರ ಕಂಬಳ- ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ರಾಜ್ಯ ರಾಜಧಾನಿ!!

You may also like

Leave a Comment