Home » Kantara Film Song : ಕಾಂತಾರ ಸಿನಿಮಾ ‘ಸಿಂಗಾರ ಸಿರಿಯೇʼ ಸಾಂಗ್‌ 100 ಮಿಲಿಯನ್‌ ಕ್ಲಬ್‌ ಸೇರಿ ಹೊಸ ದಾಖಲೆ ಸೃಷ್ಟಿ!

Kantara Film Song : ಕಾಂತಾರ ಸಿನಿಮಾ ‘ಸಿಂಗಾರ ಸಿರಿಯೇʼ ಸಾಂಗ್‌ 100 ಮಿಲಿಯನ್‌ ಕ್ಲಬ್‌ ಸೇರಿ ಹೊಸ ದಾಖಲೆ ಸೃಷ್ಟಿ!

1 comment
Kantara Film Song

Kantara Film Song: ರಿಷಬ್ ಶೆಟ್ಟಿ(Rishab Shetty)ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡಿದ್ದು, ಜನರ ಮನದಲ್ಲಿ ಅಚ್ಚೊತ್ತಿದೆ. ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ ಇಷ್ಟು ದಿನವಾದರೂ ಸಿನಿಮಾದ ಅಬ್ಬರ ಜೋರಾಗಿಯೇ ನಡೆಯುತ್ತಿದೆ. ಅಷ್ಟೇ ಅಲ್ಲದೇ, ಕನ್ನಡ ಸಿನಿಮಾರಂಗವನ್ನು (Kannada Cinema) ಇಡೀ ಭಾರತೀಯ ಚಿತ್ರರಂಗವೇ (Indian Film Industry) ತಿರುಗಿ ನೋಡುವಂತೆ ಮಾಡಿದ ಗರಿಮೆ ಸಿನಿಮಾ ಕಾಂತಾರದ್ದು ಎಂದರೆ ತಪ್ಪಾಗದು.

ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು. ಕಾಂತಾರ ಸಿನಿಮಾ ನೋಡಿ ಸ್ಟಾರ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ, ಅಷ್ಟು ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲಿಯೂ ದೊಡ್ಡ ಮಟ್ಟದ ಕಮಾಯಿ ಮಾಡಿ ಹಿಟ್ ಸಿನಿಮಾಗಳ ಸಾಲಿನಲ್ಲಿ ಇತಿಹಾಸ ಸೃಷ್ಟಿಸಿದೆ. ಇಷ್ಟೇ ಅಲ್ಲದೆ ಈ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಗೂ ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಟ್ಟಿದ್ದಂತು ಸುಳ್ಳಲ್ಲ.ಅಷ್ಟೇ ಅಲ್ಲದೆ, ಕರ್ನಾಟಕದಲ್ಲಿ ‘ಕಾಂತಾರ’ ಸಿನಿಮಾದ ಬರೋಬ್ಬರಿ ಒಂದು ಕೋಟಿ ಟಿಕೆಟ್ ಮಾರಾಟ ಮಾಡಿ ಹೊಂಬಾಳೆ ಬ್ಯಾನರ್ ನಲ್ಲೇ ಹೊಸ ದಾಖಲೆ ಮಾಡಿತ್ತು. ಇದುವರೆಗೆ ಹಲವಾರು ದಾಖಲೆಗಳನ್ನು ಉಡೀಸ್ ಮಾಡಿದೆ. ಇದೀಗ ‘ಕಾಂತಾರ’ ದಿಂದ ಹೊಸದೊಂದು ದಾಖಲೆ ನಿರ್ಮಾಣವಾಗಿದೆ.

‘ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲಂಸ್ನ (Hombale Films) ವಿಜಯ್ ಕುಮಾರ್ ಕಿರಗಂದೂರು(Vijay Kiragandur )ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ರಿಷಭ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿ ಜನಮನ ಸೆಳೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

ಜಗತ್ತಿನಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಂಡ ಕಾಂತಾರ ಸಿನಿಮಾ ಇದುವರೆಗೂ 400 ಪ್ಲಸ್ ಕೋಟಿ ಗಳಿಕೆ ಮಾಡಿ ಬಾಕ್ಸ್ ಆಫೀಸಲ್ಲಿ ಕಮಾಯಿ ಮಾಡಿದ್ದು . ಇನ್ನು, ಕನ್ನಡದಲ್ಲಿ ‘ಕೆಜಿಎಫ್ 2’ ಗಳಿಕೆಯನ್ನು ಹಿಂದಿಕ್ಕಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ. ಇದೀಗ, ಕಾಂತಾರ ಸಿನಿಮಾ ಮತ್ತೊಂದು ದಾಖಲೆ ಸೃಷ್ಟಿ ಮಾಡಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ‘ಸಿಂಗಾರ ಸಿರಿಯೇ …’ ಹಾಡು ಬಿಡುಗಡೆಯಾಗುವ ಮೊದಲೇ ಭಾರೀ ಹಿಟ್ ಆಗಿತ್ತು. ಇದೀಗ, ‘ಸಿಂಗಾರ ಸಿರಿಯೇ …'(Kantara Film Song) ಹಾಡು ಯೂಟ್ಯೂಬ್(YouTube) ಹೊಂಬಾಳೆ ಫಿಲಂಸ್ ಚಾನಲ್ನಲ್ಲಿ ಬಿಡುಗಡೆಯಾಗಿ ಇದುವರೆಗೂ 100 ಪ್ಲಸ್ ಮಿಲಿಯನ್ ವೀಕ್ಷಣೆಯಾಗಿ ಇಲ್ಲಿಯವರೆಗೆ 10 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿ ದಾಖಲೆ ಬರೆದಿದೆ.

ಸೆಪ್ಟೆಂಬರ್ 30ರಂದು ಜಗತ್ತಿನಾದ್ಯಂತ ಬಿಡುಗಡೆಯಾದ ಕಾಂತಾರ ಸಿನಿಮಾದ ಆರ್ಭಟ ಹೇಗಿತ್ತು ಎಂದು ಬಣ್ಣಿಸುವ ಅಗತ್ಯವಿಲ್ಲ. ಸಿನಿಮಾದ ಅಭೂತಪೂರ್ವ ಯಶಸ್ಸಿನ ಪರಿಣಾಮ ಕಾಂತಾರ ಸಿನಿಮಾ ಬಿಡುಗಡೆಯಾದ ಎರಡು ವಾರಗಳಲ್ಲೇ ತೆಲುಗು, ತಮಿಳು ಮತ್ತು ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗಿ ಅಲ್ಲಿಯೂ ಹಿಟ್ ಆಗಿದೆ. ಈ ಮೊದಲೇ ಕನ್ನಡದ ಕೆಲ ಹಾಡುಗಳು ಹೆಚ್ಚು ವೀಕ್ಷಣೆ ಪಡೆದು ದಾಖಲೆ ಸೃಷ್ಟಿ ಮಾಡಿದ್ದು, ಸದ್ಯ ಇದೆ ಸಾಲಿಗೆ ಈಗ ‘ಸಿಂಗಾರ ಸಿರಿಯೇ’ ಕೂಡ 100ಮಿಲಿಯನ್ ಪ್ಲಸ್ ಕ್ಲಬ್ ಗೆ ಸೇರಿಕೊಂಡಿದೆ.

 

ಇದನ್ನೂ ಓದಿ : Kichcha Sudeep: ಬೆದರಿಕೆ ಪತ್ರದ ಕುರಿತು ಕಿಚ್ಚ ಸುದೀಪ್‌ ಮೊದಲ ರಿಯಾಕ್ಷನ್‌! ಕಿಚ್ಚನಿಂದ ಶಾಕಿಂಗ್‌ ಹೇಳಿಕೆ

You may also like

Leave a Comment