Kareena Kapoor: ಬಾಲಿವುಡ್ ಜನಪ್ರಿಯ ನಟಿ ಸಂತೂರ್ ಮಮ್ಮಿ ಅಂದರೆ ಕರೀನಾ ಕಪೂರ್ ಖಾನ್ ತನ್ನ ಕ್ಯೂಟ್ ಹಾಗೂ ಸ್ಟೈಲಿಶ್ ಗ್ಲಾಮರಸ್ ಲುಕ್ ಮೂಲಕ ಗಮನಸೆಳೆಯುತ್ತಿರುತ್ತಾರೆ. ಬಾಲಿವುಡ್ ಬ್ಯೂಟಿ ಕರೀನಾ ಕಪೂರ್(Kareena Kapoor) ಅವರು ಸಿನಿಪ್ರೇಕ್ಷಕರ ಮೆಚ್ಚಿನ ಬೇಬೋ. ಇಬ್ಬರು ಮಕ್ಕಳ ತಾಯಿಯಾಗಿರುವ ಕರೀನಾ ಹೆಚ್ಚಿನ ಸಮಯವನ್ನು ವರ್ಕೌಟ್ ಗೆ ಮೀಸಲಿಡುತ್ತಾರೆ.ಸದ್ಯ, ಬಿ-ಟೌನ್ನ ಫ್ಯಾಶನ್ ದಿವಾ ಖ್ಯಾತಿಯ ಕರೀನಾ ಕಪೂರ್ ಒಳಉಡುಪು ಧರಿಸದೆ ಮನೆಯಿಂದ ಹೊರಗೆ ಓಡಾಡುವ ಫೋಟೋ ಒಂದನ್ನು ಶೇರ್ ಮಾಡಿದ್ದು, ಇದನ್ನು ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.
ಕರೀನಾ ಇತ್ತೀಚೆಗೆ ಫ್ಯಾಶನ್ ವಿಷಯಕ್ಕೆ ಬಂದಾಗ ಟ್ರೆಂಡಿಯಾಗಿ ಕಾಣಿಸಿಕೊಳ್ಳುತ್ತಾರೆ. ಫ್ಯಾಷನ್ ಐಕಾನ್( Fashion Icon) ರೀತಿ ಗುರುತಿಸಿಕೊಂಡಿರುವ ಕರೀನಾ ಕಪೂರ್ ಎಷ್ಟೋ ಪಡ್ಡೆ ಹುಡುಗರ ನಿದ್ದಗೆಡಿಸಿದ ನಟಿ. ಅಷ್ಟೆ ಅಲ್ಲದೇ, ಬೇಬೋ ಅವರ ಫ್ಯಾಷನ್ ಟ್ರೆಂಡ್ ಅನ್ನು ಕಣ್ಣರಳಿಸಿ ನೋಡಲು ಅದೆಷ್ಟೋ ಯುವತಿಯರು ಎದುರು ನೋಡುತ್ತಿರುತ್ತಾರೆ. ಹೀಗಿರುವಾಗ, ನಟಿ ಮುಂಬೈ ಮನೆಯಿಂದ ಹೊರಟಾಗ ಗುಲಾಬಿ ಬಣ್ಣದ ಟ್ಯಾಂಕ್ ಟಾಪ್ ಮತ್ತು ಡೆನಿಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ತನ್ನ ಕ್ಯಾಶುಯಲ್ ಲುಕ್ನಲ್ಲಿ ಒಳಉಡುಪು ಧರಿಸದೆ ಕಾಣಿಸಿಕೊಂಡ ನಟಿಗೆ ನೆಟಿಜನ್ಗಳು ಕರೀನಾ ಅವರ ಬಾಡಿ ಶೇಮಿಂಗ್ ಮಾಡಿದ್ದಾರೆ.
ಕರೀನಾ ಕಪೂರ್ ಜಿಮ್, ಸಸೆಲೂನ್ಗಳಿಗೆ ರೆಗ್ಯೂಲರ್ ಆಗಿ ಭೇಟಿ ನೀಡುತ್ತಾರೆ. ಆದರೆ ಇತ್ತೀಚೆಗೆ ಕ್ಯಾಶುವಲ್ ಆಗಿ ಕರೀನಾ ಅವರು ಮನೆಯಿಂದ ಹೊರಡುವಾಗ ಕಾಫಿ ಮಗ್ ಹಿಡಿದುಕೊಂಡಿದ್ದರು. ನಟಿ ಹೊರಗೆ ಕಾಣಿಸಿಕೊಂಡಿದ್ದಾಗ ಅವರ ಲುಕ್ನಿಂದ ಹೆಚ್ಚು ಟ್ರೋಲ್ ಆಗಿದ್ದಾರೆ. ಹೊರಗೆ ಕಾಣಿಸಿಕೊಂಡಾಗ ಪಿಂಕ್ ಸ್ಲೀವ್ಲೆಸ್ ಟೀಶರ್ಟ್ ಹಾಕಿದ್ದು, ಟಾಂಕ್ ಟಾಪ್ ಧರಿಸಿದ್ದ ನಟಿ ಬ್ಲೂ ಕಲರ್ ಜೀನ್ಸ್ ಧರಿಸಿದ್ದಾರೆ. ಈ ವೇಳೆ ನಟಿ ಕರೀನಾ ಕಪೂರ್ ಒಳಉಡುಪು ಇಲ್ಲದೆ ಹೊರಗೆ ಎಂಟ್ರಿ ಕೊಟ್ಟಿದ್ದು ಇದನ್ನು ನೋಡಿ ನೆಟ್ಟಿಗರು ನಟಿ ಶೇಪ್ ವೇರ್ ಧರಿಸಿಲ್ಲ ಎಂದು ಟ್ರೋಲ್ ಮಾಡಿ ಕಾಳೆಲಿದಿದ್ದಾರೆ. ಒಟ್ಟಿನಲ್ಲಿ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಎಲ್ಲರ ಗಮನ ಸೆಳೆದ ನಟಿ ಸದ್ಯಕ್ಕೆ ಮುಜುಗರಕ್ಕೆ ಈಡಾಗುವ ಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಒಳಉಡುಪು ಧರಿಸದೆ ಓಡಾಡಿರುವ ಬೇಬೊ ಫೋಟೊ, ವೀಡಿಯೋ ವೈರಲ್ ಆಗಿದ್ದು, ನಟಿಯ ವರಸೆ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ನಟಿ ಹೀಗೇಕೆ ಬ್ರಾ ಧರಿಸದೆ ಓಡಾಡ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದು, ಮತ್ತೆ ಕೆಲವರು ಅಯ್ಯೋ ಹೊರಗೆ ಬರೋವಾಗಾ ಬ್ರಾ ಧರಿಸದೇ ಬರುತ್ತಾರಾ ಎಂದು ಬೆರಗಾಗಿದ್ದಾರೆ.
ಸದ್ಯ, ಕರೀನಾ ಮಾರ್ಚ್ನಲ್ಲಿ ‘ದಿ ಕ್ಯೂ’ ಚಿತ್ರದ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ. ಈ ಚಿತ್ರದಲ್ಲಿ ಕೃತಿ ಸನೋನ್ ಮತ್ತು ಟಬು ಕೂಡ ನಟಿಸಿದ್ದಾರೆ. ಕರೀನಾ ವಾಟ್ ವುಮೆನ್ ವಾಂಟ್ (What Women Want) ನಾಲ್ಕನೇ ಸೀಸನ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ನಿರ್ದೇಶಕ ಹನ್ಸಲ್ ಮೆಸ್ತಾ ಅವರ ಮುಂಬರುವ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
