Home » Actress Kiara Advani : ಕಿಯಾರಾ ಮದುವೆ ಲೆಹಂಗಾ ತಯಾರಿಗೆ ತೆಗೆದುಕೊಂಡ ಸಮಯ ಎಷ್ಟು ಗೊತ್ತೇ?

Actress Kiara Advani : ಕಿಯಾರಾ ಮದುವೆ ಲೆಹಂಗಾ ತಯಾರಿಗೆ ತೆಗೆದುಕೊಂಡ ಸಮಯ ಎಷ್ಟು ಗೊತ್ತೇ?

0 comments
Kiara Advani

Kiara Advani: ಶೇರ್ಷಾ’ ಚಿತ್ರದ ಮೂಲಕ ಮೋಡಿ ಮಾಡಿದ್ದ ಜೋಡಿ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.ಬಿಟೌನ್ನಲ್ಲಿ ಇತ್ತೀಚೆಗೆ ಈ ಜೋಡಿ ಹಸೆಮಣೆ (Wedding Knot) ಏರಿದ್ದು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಪ್ರೀತಿಯ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಇದೀಗ, ಬಾಲಿವುಡ್ನ ಮುದ್ದಾದ ಜೋಡಿ ಸಿದ್ಧಾರ್ಥ್ (Siddarth Malhotra) ಮತ್ತು ಕಿಯಾರಾ (Kiara Advani) ಮದುವೆಯ ಶುಭ ಸುದ್ದಿಗೆ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿ ರಾಜಸ್ಥಾನದ ಜೈಸಲ್ಮೇರ್​ ನ ಐಷಾರಾಮಿ ಸೂರ್ಯಗಢ ಪ್ಯಾಲೇಸ್ ಹೋಟೆಲ್ ನಲ್ಲಿ (ಫೆಬ್ರವರಿ 7) ಲವ್ ಬರ್ಡ್ಸ್ ಗಳ ಮದುವೆ ಅದ್ಧೂರಿಯಾಗಿ ನಡೆದಿದೆ.

ಈ ಜೋಡಿಗೆ ಶುಭ ಹಾರೈಸಲು ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಶಾಹಿದ್ ಕಪೂರ್, ಜೂಹಿ ಚಾವ್ಲಾ ಮತ್ತು ಮೀರಾ ರಜಪೂತ್ ಕಪೂರ್, ಆಲಿಯಾ ಭಟ್, ಸಮಂತಾ ಮತ್ತು ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹ ರೆಡ್ಡಿ ಶುಭ ಸಮಾರಂಭಕ್ಕೆ ಭಾಗಿಯಾಗಿ ನವಜೋಡಿಗೆ ಶುಭಕೋರಿದ್ದರು. ಪತಿ-ಪತ್ನಿಯರಾದ ಬಾಲಿವುಡ್ ಲವ್ ಬರ್ಡ್ಸ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಮದುವೆಯ ನಂತರ ಮಾಧ್ಯಮಗಳ ಮುಂದೆ ಗ್ರ್ಯಾಂಡ್ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದರು.

ಈ ನಡುವೆ ಶೇರ್ ಷಾ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರು ಮಂಗಳವಾರದಂದು ಜೈಸಲ್ಮೇರ್ನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ತಮ್ಮವಿಭಿನ್ನ ಶೈಲಿಯ ಉಡುಪಿನ ಖದರ್ ಮೂಲಕ ನೋಡುಗರ ಕಣ್ಣಿಗೆ ಹಬ್ಬ ಉಂಟು ಮಾಡಿದ ಜೋಡಿ ” ಆ ರಾತ್ರಿಯ ನಿಜವಾಗಿಯೂ ವಿಶೇಷವಾದದ್ದು” ಎಂದು ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಚಿತ್ರಗಳಿಗೆ ಶೀರ್ಷಿಕೆ ಬರೆದುಕೊಂಡಿದ್ದಾರೆ.

ಝಗಮಗಿಸುವ ಲೈಟಿನ ನಡುವೆ ಚಿನ್ನ ಬೆಳ್ಳಿ ಮಿಶ್ರಿತವಾದ ಗೋಲ್ಡನ್ ಲೆಹೆಂಗಾ ಧರಿಸಿ ಕಿಯಾರಾ ಅಡ್ವಾಣಿ ಮಿಂಚಿದರೆ ಸಿದ್ಧಾರ್ಥ್ ಸ್ಟ್ರೈಕಿಂಗ್ ವೆಲ್ವೆಟ್ ಶೆರ್ವಾನಿ ಮೂಲಕ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿದ್ದರು. ಈ ವೇಳೆ ಜೋಡಿ ಧರಿಸಿದ ವಸ್ತ್ರ ವಿನ್ಯಾಸವನ್ನು ಮನೀಶ್ ಮಲ್ಹೋತ್ರಾ ಫ್ಯಾಶನ್ ಡಿಸೈನರ್ ವಿನ್ಯಾಸಗೊಳಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಈ ವಸ್ತ್ರ ವಿನ್ಯಾಸಕ್ಕಾಗಿ ಅವರು ವ್ಯಯಿಸಿದ ಸಮಯ ಕೇಳಿದರೆ ಶಾಕ್ ಆಗೋದು ಪಕ್ಕಾ!! ಹೌದು!! ಈ ಉಡುಪಿನ ವಸ್ತ್ರ ವಿನ್ಯಾಸಕ್ಕಾಗಿ ವಿನ್ಯಾಸಕರು 4000 ಗಂಟೆಗಳನ್ನು ತೆಗೆದುಕೊಂಡಿದ್ದು ಸದ್ಯ ಈ ವೇಳೆ ಸಂಭ್ರಮಿಸಿದ ಕ್ಷಣದ ಫೋಟೋಗಳನ್ನು ಜೋಡಿ ಅಭಿಮಾನಿಗಳಿಗಾಗಿ ಶೇರ್ ಮಾಡಿಕೊಂಡಿದ್ದಾರೆ. ಇವ್ವರಿಬ್ಬರ ಆತ್ಮೀಯ ಅತಿಥಿಯಾದ ಕರಣ್ ಜೋಹರ್ ರವರು ಈ ಜೋಡಿಯ ಪೋಸ್ಟ್ ಗಳಿಗೆ “ಅದ್ಭುತ!!!!!” ವೆಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಜೋಡಿಗೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಅಭಿಮಾನಿಗಳಿದ್ದಾರೆ.

You may also like

Leave a Comment