Bigg Boss Kannada: ಬಿಗ್ ಬಾಸ್ ಕನ್ನಡ (Bigg Boss Kannada) ಸಾರಥಿಯಾಗಿರುವ ಕಿಚ್ಚ ಸುದೀಪ್ ಅವರು ಕನ್ನಡ ಜನತೆಗೆ ಕ್ಷಮೆ ಕೇಳಿದ್ದಾರೆ.
ಅದಕ್ಕೆ ಕಾರಣ ಆದ್ರೂ ಏನಿರಬಹುದು ಎಂದು ಇಲ್ಲಿದೆ ನೋಡಿ.
ನಮಗೆಲ್ಲರಿಗೂ ಗೊತ್ತಿರುವ ಹಾಗೇ ಬಿಗ್ ಬಾಸ್ ಕನ್ನಡ 11 ಸೀಸನ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಬರುವಾಗ ಶೋಭಾ ಶೆಟ್ಟಿ ಅವರು ಫೂಲ್ ಜೋಷ್ ಆಗಿ ಕಾನ್ಫಿಡೆನ್ಸ್ ಮಾತುಗಳನ್ನು ಆಡಿದ್ದರು. ಆದರೆ, ಇದೀಗ ಅವರು ಮನೆಗೆ ಹೋಗಬೇಕು ಎಂದು ತುದಿಗಾಲಿನಲ್ಲಿ ನಿಂತಿದ್ದಾರೆ.
ಹೌದು, ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ವೇಳೆ ಶೋಭಾ ಶೆಟ್ಟಿ ಅವರು ಭಾರೀ ಸೌಂಡ್ ಮಾಡಿದ್ದರು. ಎಲ್ಲರ ಮುಖವಾಡ ಕಳಚುತ್ತೇನೆ ಅಂತಲೂ ಸವಾಲು ಎಸೆದಿದ್ದರು. ಈ ಮೊದಲು ಅವರು ತೆಲುಗು ಬಿಗ್ ಬಾಸ್ ಶೋನಲ್ಲಿ ಅನುಭವಗಳಿಸಿ ಬಂದಿದ್ದವರಾಗಿದ್ದರು. ಆದರೂ ಸಹ ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲಿ ಗಟ್ಟಿಯಾಗಿ ನಿಂತುಕೊಳ್ಳಲು ಶೋಭಾ ಶೆಟ್ಟಿಗೆ ಸಾಧ್ಯ ಆಗಿಲ್ಲ.
ಎಲಿಮಿನೇಷನ್ ಲಿಸ್ಟ್ ವಿಷಯ ಬಂದಾಗ ಶೋಭಾ ಶೆಟ್ಟಿ ನನ್ನ ಕೈಲಿ ಇಲ್ಲಿರಲು ಆಗುವುತ್ತಿಲ್ಲ, ಹೊರಗಡೆ ಕಳುಹಿಸಿ ಸರ್ ಎಂದು ಹೇಳಿದ್ದಾರೆ. ಆಗ ಸುದೀಪ್ ಶೋಭಾ ಅವರಿಗೆ ಧೈರ್ಯ ತುಂಬಿ ಅಲ್ಲೇ ಉಳಿಸುವ ಕೆಲಸವನ್ನು ಮಾಡುತ್ತಾರೆ. ಆಗ ಶೋಭಾ ನನಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದಕ್ಕೆ ಧನ್ಯವಾದಗಳು, ಇಲ್ಲೇ ಇದ್ದು ಆಡುತ್ತೇನೆ ಸರ್ ಎಂದು ಹೇಳುತ್ತಾರೆ. ಬಳಿಕ ಶಿಶಿರ್, ಐಶ್ವರ್ಯ ಅವರ ಪೈಕಿ ಒಬ್ಬರನ್ನು ಸೇವೆ ಮಾಡುವ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಈ ವೇಳೆ ಅಲ್ಲಿದ್ದ ಬಹುತೇಕ ಸ್ಪರ್ಧಿಗಳು ಐಶ್ವರ್ಯ ಅವರು ಮನೆಯಿಂದ ಹೊರಗಡೆ ಹೋಗಬೇಕು, ಶಿಶಿರ್ ಉಳಿಯಬೇಕು ಎಂದು ಹೇಳುತ್ತಾರೆ. ಈ ವೇಳೆ ಶೋಭಾ ಅವರ ಬಳಿ ಈ ಬಗ್ಗೆ ಒಪಿನಿಯನ್ ಕೇಳುವಾಗ ಪ್ಲೇಟ್ ಬದಲಾಯಿಸಿ ಮತ್ತೆ ನಾನು ಹೊರಗಡೆ ಹೋಬೇಕು ಸರ್, ದಯವಿಟ್ಟು ಕ್ಷಮಿಸಿ ಎಂದು ಸುದೀಪ್ ಬಳಿ ಬೇಡಿಕೊಳ್ಳುತ್ತಾರೆ. ಆಗ ಕೋಪಗೊಂಡ ಸುದೀಪ್ ಮೊದಲಿಗೆ ನಾನು ಇಲ್ಲೇ ಇರುತ್ತೇನೆ, ಕಾನ್ಫಿಡೆನ್ಸ್ ಬಂದಿದೆ ಆಡುತ್ತೇನೆ ಅಂತಾ ಹೇಳಿದ್ದಿರಲ್ಲ, ಇದೀಗ ದಿಢೀರ್ ನಿರ್ಧಾರ ಏಕೆ ಬದಲಾಯಿತು ಎಂದು ಪ್ರಶ್ನಿಸುತ್ತಾರೆ.
ಆಗ ಶೋಭಾ ಶೆಟ್ಟಿ ಅವರು ನಾನು ಯೋಚನೆ ಮಾಡುತ್ತಿದ್ದೆ ಸರ್, ಇಲ್ಲಿ ಇರುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಮತ್ತಷ್ಟು ಕೋಪಗೊಂಡ ಸುದೀಪ್, ನನ್ನ ಪ್ರೇಕ್ಷಕರಿಗೆ ಹಾಗೂ ನಿಮನೆ ವೋಟ್ ಮಾಡಿದವರಿಗೆ ನೀವು ಮೋಸ ಮಾಡುತ್ತಿದ್ದೀರಿ. ನಿಮ್ಮ ಪರವಾಗಿ ಕನ್ನಡಿಗರಲ್ಲಿ ನಾನು ಕ್ಷಮೆ ಕೇಳುತ್ತೇನೆ. ನೀವು ಮಾತನಾಡದೇ ಹೋಗಿ, ಗೆಟ್ ಔಟ್ ಎಂದು ಹೇಳುತ್ತಾರೆ. ಈ ಮೂಲಕ ಐಶ್ವರ್ಯ ಹಾಗೂ ಶಿಶಿರ್ ಅವರಿಗೆ ನೀವು ಆಟ ಮುಂದುವರೆಸಿ ಎಂದು ಹೇಳುತ್ತಾರೆ.
ವೋಟ್ ಮಾಡಿದ ಜನಗಳಿಗೆ ಏನು ಮರ್ಯಾದೆ ಕೊಡುತ್ತೀದ್ದಿರಿ ನೀವು? ಅವರೇನು ಮೂರ್ಖರಾ? ಮೊದಲು ನೀವು ಮಾತನಾಡಿದ್ದು ಡ್ರಾಮಾನಾ? ಇದನ್ನು ಸಹಿಸಲು ಸಾಧ್ಯವಿಲ್ಲ. ಈ ರೀತಿ ಕಳೆದ ಯಾವ ಸೀಸನ್‌ನಲ್ಲೂ ಯಾವತ್ತೂ ನಡದಿಲ್ಲ. ಜನರ ವೋಟ್ ನೀವು ಬೆಲೆ ಕೊಡಲಿಲ್ಲ. ನನ್ನನ್ನ ಮೂರ್ಖ ಅಂದುಕೊಂಡಿದ್ದೀರಾ?. ನಾನು ನಿಮ್ಮನ್ನು ಮನೆಗೆ ಕಳಿಹಿಸುತ್ತೇನೆ. ವೋಟ್ ಹಾಕಿದವರಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಸುದೀಪ್ ಅವರು ಅಂತಿಮ ತೀರ್ಮಾನ ನೀಡಿದರು.
