Home » ಮೌನ ಮುರಿದ Kichha Sudeep | ರಾಜಕೀಯ ಸೇರೋ ಮಾತುಕತೆ ಆಗಿದ್ದು ನಿಜ, ಎರಡೂ ಕಡೆ ಆಪ್ತರೇ ಇರುವಾಗ ನಿರ್ಧಾರ ಕಷ್ಟ !

ಮೌನ ಮುರಿದ Kichha Sudeep | ರಾಜಕೀಯ ಸೇರೋ ಮಾತುಕತೆ ಆಗಿದ್ದು ನಿಜ, ಎರಡೂ ಕಡೆ ಆಪ್ತರೇ ಇರುವಾಗ ನಿರ್ಧಾರ ಕಷ್ಟ !

0 comments

ನಟ sudeep ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಲಿದ್ದಾರೆ, ಸುದೀಪ್ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದ ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ ಎಂಬ ಮಾತುಗಳು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿವೆ. ಅದಕ್ಕೆ ಪೂರಕವೆಂಬಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಭೇಟಿ ಮಾಡಿದ್ದು ಇದಕ್ಕೆ ಪುಷ್ಠಿ ನೀಡುವಂತಿತ್ತು.

ತಮ್ಮ ಕಾಂಗ್ರೇಸ್ ಜತೆಗೆ ರಾಜಕೀಯ ಪ್ರವೇಶದ ಬಗ್ಗೆ ನಟ ಕಿಚ್ಚ ಸುದೀಪ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.  ರಾಜಕೀಯ ನಾಯಕರು ಮಾತುಕತೆಗೆ ಬಂದಿದ್ದು ನಿಜ ಎಂದು ಅವರು ಹೇಳಿದ್ದಾರೆ. ಆದರೆ ರಾಜಕೀಯಕ್ಕೆ  ಎಂಟ್ರಿ ಕೊಡಬೇಕೋ ಬೇಡವೋ ಎಂಬ ಬಗ್ಗೆ ತಾವಿನ್ನೂ ಸ್ಪಷ್ಟ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸುದೀಪ್​ ಹೇಳಿದ್ದಾರೆ.

ಮೊದನೆಯದಾಗಿ ನಾನೊಬ್ಬ ಕಲಾವಿದ. ಹಂಡ್ರೆಡ್​ ಪರ್ಸೆಂಟ್ ಸತ್ಯ, ಅವರು ಮಾತುಕತೆಗೆ ಬಂದಿದ್ದರು. ‘ ಇಲ್ಲ ಹೋಗಿ ‘ ಅಂತ ಹೇಳೋಕೆ ಹೋಗಲ್ಲ. ಇತ್ತೀಚೆಗೆ ಪೊಲಿಟಿಕಲ್ ನಾಯಕರಿಗೆ ನಂಬಿಕೆ ಬಂದಿದೆ. ಡಿಕೆ ಶಿವಕುಮಾರ್​, ಸುಧಾಕರ್, ಬಸವರಾಜ ಬೊಮ್ಮಾಯಿ, ರಮ್ಯಾ ಅವರು ನನ್ನ ಸ್ನೇಹಿತರು. ನಾನು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಂಗೆ ಎರಡೂ ಕಡೆ ಆಪ್ತರು ಇರುವಾಗ ನಿರ್ಧಾರ ತೆಗೆದುಕೊಳ್ಳುವುದು ತುಂಬಾನೇ ಕಷ್ಟ ಆಗುತ್ತದೆ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

‘ಎಮೋಶನ್ಸ್ ಇದೆ. ಅದರ ಜೊತೆ ನಮ್ಮ ನಿರ್ಧಾರವನ್ನು ಸೇರಿಸೋಕೆ ಹೋಗಲ್ಲ. ಸುದೀಪ್​ ಅವರು ರಾಜಕೀಯಕ್ಕೆ ಬರೋದು ಬೇಡ ಅಂತ ನಮ್ಮ ಜನರ ತಲೆಯಲ್ಲಿ ಇರಬಹುದು. ಒಳ್ಳೆಯದನ್ನು ಮಾಡೋಕೆ ಪವರ್​ ಬೇಕಂತಲೇ ಇಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಗಣ್ಯರಿಗೆ ಏರ್ಪಡಿಸಿದ್ದ ಭೋಜನ ಕೂಟಕ್ಕೆ ನನಗೂ ಆಹ್ವಾನ ಬಂದಿತ್ತು. ಆದರೆ ನನ್ನ ಅನಾರೋಗ್ಯದ ಕಾರಣ ಹೋಗಲು ಆಗಲಿಲ್ಲ, ಅಷ್ಟು ದೊಡ್ಡ ಮನುಷ್ಯರ ಜೊತೆಗೆ ಸೇರುವ ಅವಕಾಶ ವಂಚಿತವಾಗಿದ್ದಕ್ಕೆ ಬೇಸರವಿದೆ ಎಂದು ಸುದೀಪ್ ಹೇಳಿದ್ದಾರೆ.

You may also like

Leave a Comment