Home » Kollam Sudhi Death: ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಮಲಯಾಲಂ ಹಾಸ್ಯ ನಟ ಕೊಲ್ಲಂ ಸುಧಿ ಸಾವು!

Kollam Sudhi Death: ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಮಲಯಾಲಂ ಹಾಸ್ಯ ನಟ ಕೊಲ್ಲಂ ಸುಧಿ ಸಾವು!

0 comments
Kollam Sudhi Death

Kollam Sudhi Death: ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಮಲಯಾಲಂ ಹಾಸ್ಯ ನಟ ಕೊಲ್ಲಂ ಸುಧಿ (39 ವ.) (Kollam Sudhi) ಇಂದು ಸಾವನ್ನಪ್ಪಿದ್ದಾರೆ.

ಕಾರು ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿ ಆಗಿದ್ದು, ಘಟನೆ ಪರಿಣಾಮ ನಟನ ಕಾರು ನುಜ್ಜುಗುಜ್ಜಾಗಿದ್ದು, ತೀವ್ರವಾಗಿ ಗಾಯಗೊಂಡ ಕೊಲ್ಲಂ ಅವರನ್ನು ಹಾಗೂ ಉಳಿದ ಮೂವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ನಟ ಕೊಲ್ಲಂ ಸುಧಿ ಮೃತಪಟ್ಟಿದ್ದಾರೆ (Kollam Sudhi Death). ಉಳಿದ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ನಟ ಸುಧಿ 2015 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸುಧಿ ಅವರು ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಹಾಸ್ಯ ಪಾತ್ರಗಳ ಮೂಲಕ ಖ್ಯಾತಿ ಗಳಿಸಿದರು. ‘ಕಟ್ಟಪ್ಪಣ್ಣ’, ‘ಆ್ಯನ್ ಇಂಟರ್​ನ್ಯಾಷನಲ್​ ಲೋಕಲ್ ಸ್ಟೋರಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ: Gufi paintal death: ‘ಮಹಾಭಾರತ’ದ ‘ಶಕುನಿ ಮಾಮಾ’ ಖ್ಯಾತಿಯ ಹಿರಿಯ ನಟ ಗೂಫಿ ಪೈಂಟಾಲ್ ನಿಧನ!

You may also like

Leave a Comment