Home » Tamil Producers Council: ನಟ ಧನುಷ್‌ ಸೇರಿ ಕಾಲಿವುಡ್‌ ಸ್ಟಾರ್‌ ನಟರು ಬ್ಯಾನ್‌! ಕಾರಣ ಇಲ್ಲಿದೆ!!

Tamil Producers Council: ನಟ ಧನುಷ್‌ ಸೇರಿ ಕಾಲಿವುಡ್‌ ಸ್ಟಾರ್‌ ನಟರು ಬ್ಯಾನ್‌! ಕಾರಣ ಇಲ್ಲಿದೆ!!

by Mallika
0 comments
Tamil Producers Council

Tamil Producers Council:ತಮಿಳು ಚಿತ್ರರಂಗದಲ್ಲಿ ಬ್ರೇಕಿಂಗ್‌ ನ್ಯೂಸೊಂದು ಹೊರಬಿದ್ದಿದೆ. ಅದೇನೆಂದರೆ ಘಟಾನುಘಟಿ ನಟರಿಗೆ ನಿರ್ಮಾಪಕರ ಮಂಡಳಿ ರೆಡ್‌ ಕಾರ್ಡ್‌ ನೀಡಿದೆ. ರೆಡ್‌ಕಾರ್ಡ್‌ ನಟರಿಗೆ ಕಠಿಣ ಶಿಕ್ಷೆಯಾಗಿದ್ದು, ಮುಂದಿನ ಸೂಚನೆಯವರೆಗೆ ತಮಿಳು ಚಿತ್ರರಂಗದಲ್ಲಿ ಯಾವುದೇ ನಿರ್ಮಾಪಕರೊಂದಿಗೆ ಕೆಲಸ ಮಾಡಬಾರದು ಎಂಬ ತಾಕೀತು ಆಗಿದೆ.

ವಿಶಾಲ್ (actor Vishal), ಧನುಷ್ (Actor Dhanush), ಅಥರ್ವ್ (Actor Atharv) ಮತ್ತು ಸಿಂಬುಗೆ (Actor Simbu) ರೆಡ್ ಕಾರ್ಡ್ ನೀಡಲಾಗಿದೆ.

ಮುಂಗಡ ಹಣ ಪಡೆದು, ಸೂಕ್ತ ಡೇಟ್ಸ್‌ ನೀಡದೇ, ಹಣವನ್ನು ಕೂಡಾ ಮರಳಿ ನೀಡದೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಾಲಿವುಡ್‌ ನಟ ಧನುಷ್‌ ಚಿತ್ರೀಕರಣಕ್ಕೆ ಹಾಜರಾಗದ ಕಾರಣ ನಿರ್ಮಾಪಕರ ಸಂಘ( Tamil Producers Council) ನಟ ಧನುಷ್‌ ಅವರ ವಿರುದ್ಧ ಅಸಮಾಧಾನವನ್ನು ಈ ಹಿಂದೇ ವ್ಯಕ್ತಪಡಿಸಿ, ನೋಟಿಸ್‌ ಜಾರಿ ಮಾಡಿತ್ತು.

ಈ ರೆಡ್‌ಕಾರ್ಡ್‌ ತಮಿಳು ಚಿತ್ರದಲ್ಲಿ ಅವರಿಗೆ ನಟಿಸಲು ಅನಮತಿ ನೀಡುವುದಿಲ್ಲ. ನಟರ ವೃತ್ತಿಜೀವನಕ್ಕೆ ಇದು ತುಂಬಾ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ. ತಮ್ಮ ಬಾಕಿ ನೀಡುವವರೆಗೆ ಅಥವಾ ನಿರ್ಮಾಪಕರೊಂದಿಗಿನ ವಿವಾದ ಇತ್ಯರ್ಥಗೊಳಿಸುವವರಿಗೆ ಅವರಿಗೆ ತಮಿಳು ಸಿನಿಮಾದಲ್ಲಿ ಕೆಲಸ ಮಾಡಲು ಅನುಮತಿ ನೀಡಲಾಗುವುದಿಲ್ಲ.

ನಟ ಧನುಷ್‌ ಅವರ ಸಿನಿಮಾವೊಂದನ್ನು ತೇನಾಂಡಾಲ್‌ ಫಿಲ್ಮ್‌ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಇದರ ಚಿತ್ರೀಕರಣ ಒಂದು ತಿಂಗಳು ನಡೆದಿದೆ. ಆದರೆ ಕೆಲವೊಂದು ಕಾರಣದಿಂದ ಚಿತ್ರೀಕರಣ ನಿಂತಿದೆ. ಇದೀಗ ಮತ್ತೆ ಮತ್ತೆ ಶೂಟಿಂಗ್‌ ಮಾಡಲು ನಟ ಧನುಷ್‌ ಗೆ ಮನವಿ ಮಾಡಲಾಗಿದೆ. ಆದರೆ ಅವರು ಸ್ಪಂದಿಸುತ್ತಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಅಂದ ಹಾಗೆ ಈ ಸಿನಿಮಾಗೆ ಧನುಷ್‌ ಅವರಿಗೆ 20ಕೋಟಿಯನ್ನು ಸಂಸ್ಥೆ ನೀಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪುತ್ತೂರು: ಕಲಾವಿದನೋರ್ವನ ಬಂಧನ- ಚೆಕ್‌ಬೌನ್ಸ್‌ ಕೇಸ್‌

You may also like

Leave a Comment