Home » Bigg Boss : ಬಿಗ್ ಬಾಸ್ ಮನೆಯೊಳಗೆ ಕೊರಗಜ್ಜನ ಪವಾಡ – ಚೈತ್ರ ಕುಂದಾಪುರದ ಪ್ರಾರ್ಥನೆಗೆ ಒಲಿದ ದೈವ

Bigg Boss : ಬಿಗ್ ಬಾಸ್ ಮನೆಯೊಳಗೆ ಕೊರಗಜ್ಜನ ಪವಾಡ – ಚೈತ್ರ ಕುಂದಾಪುರದ ಪ್ರಾರ್ಥನೆಗೆ ಒಲಿದ ದೈವ

0 comments

Bigg Boss: ಕೊರಗಜ್ಜ ದೈವದ ಬಗ್ಗೆ ಜನರಿಗೆ ಅಪಾರ ನಂಬಿಕೆ ಇದೆ. ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಈ ದೈವ ಇಂದು ನಾಡಿನದ್ಯಂತ ಭಕ್ತರನ್ನು ಹರಸುತ್ತಿದ್ದಾರೆ. ಅಂತೆಯೇ ಈಗ ಬಿಗ್ ಬಾಸ್(Bigg Boss) ಮನೆಯಲ್ಲಿ ಕೂಡ ಕೊರಗಜ್ಜನ ಪವಾಡ ನಡೆದಿದೆ.

ಯಸ್, ಬುಧವಾರದ (ನ.13) ಸಂಚಿಕೆಯಲ್ಲಿ ಒಂದು ಟಾಸ್ಕ್ ನೀಡಲಾಗಿತ್ತು. ಹಸಿ ಮಣ್ಣಿನ ರಾಶಿಯಲ್ಲಿ ಆಟ ಆಡಬೇಕಿತ್ತು. ಈ ವೇಳೆ ಚೈತ್ರಾ ಕುಂದಾಪುರಅವರ ಚಿನ್ನದ ಉಂಗುರ ಕಳೆದುಹೋಯಿತು. ಉಂಗುರ ಮಿಸ್ ಆಗಿದೆ ಎಂಬುದು ಗೊತ್ತಾದ ತಕ್ಷಣ ಅವರು ಸಿಕ್ಕಾಪಟ್ಟೆ ಚಡಪಡಿಸಿದರು. ಆಗ ಅವರು ಮನಸ್ಸಿನಲ್ಲಿ ಕೊರಗಜ್ಜನ ಪ್ರಾರ್ಥನೆ ಮಾಡಿದರು.

ಅಲ್ಲದೆ ಚೈತ್ರಾ ಕ್ಯಾಮಾರ ಮುಂದೆ ಬಂದು ತುಂಬಾ ಇಂಪಾರ್ಟೆಂಟ್ ಉಂಗುರ, ದಯವಿಟ್ಟು ಹುಡುಕಿಸಿಕೊಡಿ ಎಂದು ಮನವಿ ಮಾಡಿಕೊಂಡರು. ಟಾಸ್ಕ್‌ ಬಳಿಕ ಬಿಗ್‌ಬಾಸ್‌ ಉಂಗುರವನ್ನು ಹುಡುಕಿ ಕೊಟ್ಟರು. ಆಗ ಚೈತ್ರಾ ಸ್ವಾಮಿ ಕೊರಗಜ್ಜ ಎಂದು ಕೈಮುಗಿದರು. ಬಿಗ್‌ಬಾಸ್‌ ಗೂ ಧನ್ಯವಾದ ಹೇಳಿದರು. ತುಳುನಾಡಿನಲ್ಲಿ ಕೊರಗಜ್ಜ ದೈವ ಒಂದು ಕಾರ್ಣಿಕ ಶಕ್ತಿ. ಕಷ್ಟದ ಕಾಲದಲ್ಲಿ ಕೈ ಹಿಡಿದು ನಡೆಸುತ್ತಾನೆ ಎಂಬ ನಂಬಿಕೆ ದೈವಾರಾಧಕರದ್ದು, ಉಂಗುರ ಮಿಸ್ ಆಗಿದೆ ಎಂಬುದು ಗೊತ್ತಾದ ತಕ್ಷಣ ಸಿಕ್ಕಾಪಟ್ಟೆ ಚಡಪಡಿಸಿದರು. ಕೊರಗಜ್ಜನ ಪ್ರಾರ್ಥನೆ ಮಾಡಿದರು. ಬಳಿಕ ಉಂಗುರ ಸಿಕ್ಕ ಖುಷಿಯಲ್ಲಿ ಚೈತ್ರಾ ಅವರು ಕುಣಿದಾಡಿದರು.

ಮಣ್ಣಿನ ರಾಶಿಯಲ್ಲಿ ಚೈತ್ರಾ ಕಳೆದುಕೊಂಡಿದ್ದ ಚಿನ್ನದ ಉಂಗುರ ಪತ್ತೆ ಆಗಿದೆ. ಉಂಗುರ ಸಿಕ್ಕ ಕೂಡಲೇ ಚೈತ್ರಾ ಅವರು ಕೊರಗಜ್ಜ ದೈವಕ್ಕೆ ಕೈ ಮುಗಿದಿದ್ದಾರೆ. ಬಿಗ್ ಬಾಸ್ ಮನೆ ಒಳಗೆ ಕೂಡ ಕೊರಗಜ್ಜನಿಗೆ ಸಲ್ಲಿಸಿದ ಪ್ರಾರ್ಥನೆ ಈಡೇರಿದೆ.

You may also like

Leave a Comment