Urfi Javed: ಸ್ವಲ್ಪ ದಿನ ನಾವು ಕೂಡಾ ಉರ್ಫಿ ಸಹವಾಸಕ್ಕೆ ಹೋಗಿರಲಿಲ್ಲ. ಇದರ ಮಧ್ಯೆ ಆಕೆ ಹಲವು ವೇಷ ಭೂಷಣ ಇತ್ಯಾದಿ ಮಾಡಿಕೊಂಡು ಬಂದು ಪ್ರಚಾರ ಪಡೆದುಕೊಳ್ಳುತ್ತಲೆ ಇದ್ದಳು. ಹಿಂದಿಯ ಬಿಗ್ ಬಾಸ್ ಒಟಿಟಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಉರ್ಪೀ ಜಾವೇದ್ ಅಲ್ಲಿಂದ ಹೊರ ಬರುತ್ತಿದ್ದಂತೆ ವಿಚಿತ್ರವಾಗಿ ಆಡಲು ಪ್ರಾರಂಭಿಸಿದ್ದಾಳೆ ಆನಂತರ ಆಕೆ ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೊಂದು ಬಾರಿ ತೊಟ್ಟುಕೊಂಡಿಲ್ಲವಂತೆ. ಅಲ್ಲಿಂದ ಬಂದ ನಂತರ ಆಕೆ ಚಿತ್ರ ವಿಚಿತ್ರ ವಿಭಿನ್ನ ವಿಶೇಷ ಮತ್ತು ವಿಕ್ಷಿಪ್ತಕಾರಿ ರೂಪಗಳಲ್ಲಿ ಕಾಣಿಸಿಕೊಂಡು ಕೆಲವರಿಗೆ ಖುಷಿಯನ್ನು ಮತ್ತೆ ಕೊಲರಿಗೆ ಬೇಸರವನ್ನು ಹಲವರಿಗೆ ಅಸಹ್ಯವನ್ನು ಏಕಕಾಲದಲ್ಲಿ ತಂದಿಟ್ಟು ತಾನು ಮಾತ್ರ ಪ್ರತಿಬಾರಿಯೂ ಮುಗುಳು ನಗುತ್ತಾ ಬಂದು ಹೋಗುತ್ತಿದ್ದಾಳೆ.
ಪ್ರತಿದಿನ ಒಂದಲ್ಲಾ ಒಂದು ವಿಚಿತ್ರ ಅವತಾರದೊಂದಿಗೆ ಉರ್ಫಿ(Urfi Javed) ನೋಡುಗರ ಗಮನ ಸೆಳೆಯುತ್ತಿರುವ ಈಕೆಗೆ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಅವಕಾಶಗಳಿಲ್ಲ ಎನ್ನಲಾಗಿದೆ. ಇಷ್ಟಾದರೂ ಉರ್ಫಿ ಜಾವೇದ್ ತಮ್ಮ ಕಾಸ್ಟ್ಯೂಮ್‌ಗಳಿಗಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಕೂಡ ಆಕೆಯನ್ನು ಈ ಕಷ್ಟಕಾಲದಲ್ಲಿ ಸಲಹುತ್ತ ಬಂದಿದೆ. ಆಕೆಯ ವೇಷಭೂಷಣಗಳಿಗೆ ಬಯ್ಯುವ ಮಂದಿ ಕೂಡ ಒಂದು ಬಾರಿ ಆಕೆಯ ಹೊಸ ಮಾಡಲಿಂಗ್ ಕಾನ್ಸೆಪ್ಟ್ ಕಡೆಗೆ ಕಣ್ಣಾಡಿಸುತ್ತಾರೆ. ಉರ್ಫಿ ಪ್ರತಿ ಬಾರಿ ಹೊಸ ಹೊಸ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡು ಟ್ರೋಲರ್‌ಗಳಿಗೆ ಆಹಾರವಾಗುತ್ತಿದ್ದಾರೆ. 2 ದಿನಗಳ ಹಿಂದೆ ಉರ್ಫಿ ಮತ್ತೆ ನಯಾ ವೇಷದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಆಕೆಯ ವೇಷ ನೋಡಿ ಇನ್ನಷ್ಟು ಟ್ರೋಲ್ ಆಗಿದ್ದಾರೆ.

ಉರ್ಫಿ ಈ ಬಾರಿ ಬ್ರೆಸ್ಟ್ ಮೌಲ್ಡ್ ಡ್ರೆಸ್ ಧರಿಸಿ ಬಂದಿದ್ದಾಳೆ. ಚಿನ್ನದ ಬಣ್ಣದ ಟಾಪ್ ಮೌಲ್ಡ್ ಧರಿಸಿರುವ ಉರ್ಫಿ ಅದರ ಜೊತೆಗೆ ಹಸಿರು ಬಣ್ಣದ ರೆಡಿಮೇಡ್ ಸೀರೆ ಉಟ್ಟು ಎಂದಿನಂತೆ ಬೋಲ್ಡ್ ಆಗಿ ಮುಂದೆ ನಿಂತು ಕ್ಯಾಮರಾ ಕಣ್ಣಿಗೆ ಕಣ್ಣುಬೆರೆಸಿ ನಕ್ಕಿದ್ದಾಳೆ. ಹಿಂದೊಮ್ಮೆ ಎದೆಯ ಹೂವಿಗೆ ಹಾವು ಸುತ್ತಿಕೊಂಡ ಹಾಗೆ ಕಾಣುವ ಡ್ರೆಸ್ ಕಾನ್ಸೆಪ್ಟ್ ನಲ್ಲಿ ಬಂದು ನಿಜವೇನೋ ಅನ್ನುವಷ್ಟು ರಿಯಲ್ಲಾಗಿ ಕಾಣಿಸಿದ್ದಳು.
ಇದನ್ನೂ ಓದಿ: ಎಕ್ಸಾಂ ಉತ್ತರ ಪತ್ರಿಕೆಯಲ್ಲಿ ‘ ಐ ಲವ್ ಪೂಜಾ ‘ ಬರಹ, 300 ರೂಪಾಯಿ ನೋಟು ಬೇರೆ – ಎಲ್ಲಿ ಆಗಿದ್ದೇನು ?
