Shruti Shanumga Priya: ಕೊರೊನಾ ಬಂದಾದನಂತರ ಹೆಚ್ಚಾಗಿ ಕೇಳುತ್ತಿರುವ ಆಘಾತದ ವಿಷಯವೆಂದರೆ ಹೃದಯಾಘಾತದಿಂದ ಸಾವು. ಇದಕ್ಕೂ ಕೊರೊನಾ ಖಾಯಿಲೆಗೂ ಏನಾದರೂ ಸಂಬಂಧವಿದೆಯೇ ಎಂಬ ಚರ್ಚೆ ಈಗಲೂ ಆಗುತ್ತಿದೆ. ಈಗ ಹೃದಯಾಘಾತದಿಂದ ಸಾವಿಗೀಡಾಗಿರುವ ಸಂಖ್ಯೆ ಹೆಚ್ಚಿದೆ. ಜಿಮ್, ಫಿಟ್‌ನೆಸ್ ಎಂದು ಮೊರೆಹೋಗುವವರೇ ಹೆಚ್ಚಾಗಿ ಈ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ತಮಿಳು ಕಿರುತೆರೆ ನಟಿ ಶ್ರುತಿ ಷಣ್ಮುಗ ಪ್ರಿಯಾ ( Shruti Shanumga Priya) ಅವರ ಪತಿ ಅರವಿಂದ್ ಶೇಖರ್ ಅವರು ಹೃದಯಾಘಾತಕ್ಕೊಳಗಾಗಿ ಸಾವಿಗೀಡಾಗಿದ್ದಾರೆ. ಕೇವಲ 30 ವರ್ಷಕ್ಕೆ ಸಾವು ಕಂಡ ಇವರು ಅನೇಕರಿಗೆ ದುಃಖ ತಂದಿದೆ.

ಹಲವು ವರ್ಷಗಳ ಕಾಲ ಪ್ರೀತಿಸಿ, ಕಳೆದ ವರ್ಷ ಮೇ ತಿಂಗಳಿನಲ್ಲಿ ಇಬ್ಬರೂ ಮದುವೆ ಆಗಿದ್ದರು. ಶ್ರುತಿ ಷಣ್ಮುಗ ಅವರ ಪತಿ ಅರವಿಂದ್ ಅವರು ಬಾಡಿ ಬಿಲ್ಡರ್ ಆಗಿದ್ದರು. ದೇಹದ ತೂಕ ಇಳಿಸಿಕೊಳ್ಳಲು ಅವರು ಟ್ರೇನಿಂಗ್ ನೀಡುತ್ತಿದ್ದು, 2022 ರ ʼಮಿಸ್ಟರ್ ತಮಿಳುನಾಡುʼ ಕೂಡಾ ಆಗಿದ್ದರು. ಆಗಸ್ಟ್ 2 ರಂದು ಈ ಘಟನೆ ನಡೆದಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋದರೂ ಏನೂ ಪ್ರಯೋಜನ ಆಗಿಲ್ಲವೆಂದು ವರದಿಯಾಗಿದೆ.
ಶ್ರುತಿ ಅವರು ರಂಗಭೂಮಿ ಹಿನ್ನೆಲೆಯವರು. ಹಲವಾರು ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
