Film Theatre: ಓಟಿಟಿ ಯುಗದಲ್ಲಿ ಮನೋರಂಜನೆ ಅನ್ನೋದು ಓಟಿಟಿ ಗೆ ಮಾತ್ರ ಸೀಮಿತ ಆಗಿದೆ. ಯಾಕೆಂದರೆ
ಕುಟುಂಬವೊಂದು ಚಿತ್ರಮಂದಿರಕ್ಕೆ
ತೆರಳಿ ಸಿನಿಮಾ ವೀಕ್ಷಿಸಿದರೆ ಸಾವಿರಾರು ರೂಪಾಯಿ ಖಾಲಿಯಾಗುವದಂತೂ ಪಕ್ಕಾ. ಇನ್ನು ಅಲ್ಲಿ ಫುಡ್ ಸ್ನಾಕ್ಸ್ ಬೆಲೆಯಂತೂ ಟಿಕೆಟ್‌ಗಿಂತ ದುಬಾರಿ.
ಇದೇ ಕಾರಣಕ್ಕೆ ಚಿತ್ರಮಂದಿರಗಳಿಗೆ (Film Theatre) ಬರುತ್ತಿದ್ದ ಹಲವಾರು ಸಿನಿ ಕಲಾವಿದರು ಚಿತ್ರಮಂದಿರಕ್ಕೆ ಬರುವುದನ್ನು ನಿಲ್ಲಿಸಲು ಕಾರಣವಾಗಿದೆ.
ಹೌದು, ಕುಟುಂಬವೊಂದರ ಸಿನಿಮಾ ಟಿಕೆಟ್ ಅಪ್ಲಿಕೇಶನ್, ಅಲ್ಲಿನ ತಿನಿಸುಗಳ ದರವನ್ನೆಲ್ಲಾ ಸೇರಿಸಿದರೆ ಒಟಿಟಿ ಒಂದರ ವಾರ್ಷಿಕ ಚಂದಾದಾರರತ್ವದ ಮೊತ್ತಕ್ಕಿಂತ ದುಪ್ಪಟ್ಟಾಗಲಿದೆ. ಹೀಗೆ ದಿನವೊಂದಕ್ಕೆ ಸಾವಿರಕ್ಕಿಂತ ಹೆಚ್ಚು ಹಣವನ್ನು ಒಂದು ಸಿ-ನಿಮಾಗಾಗಿ ಖರ್ಚು ಮಾಡುವಂತಹ ಒಟಿಟಿ (OTT) ಚಂದಾದಾರರಾದರೆ ವರ್ಷವಿಡೀ ಸಿನಿಮಾ ನೋಡಬಹುದು ಎಂಬ ನಿರ್ಧಾರಕ್ಕೆ ಹಲವಾರು ಮಂದಿ ಬಂದರು. ಹೀಗಾಗಿಯೇ ಚಿತ್ರಮಂದಿರಗಳ ಕಡೆ ಸಿನಿ ರಸಿಕರ ಆಗಮನ ಕಡಿಮೆಯಾಗಿದೆ.
ಇಷ್ಟು ಚರ್ಚೆಗಳಿಗೆ ಒಳಗಾಗಿರುವ ಪಾಪ್‌ಕಾರ್ನ್ ಹಾಗೂ ತಿಂಡಿಗಳದರಗಳ ಬಗ್ಗೆ ಜಿಎಸ್‌ಟಿ (GST) ಕೌನ್ಸಿಲ್ ಆಫ್ ಇಂಡಿಯಾ ಸಿಹಿ ಸುದ್ದಿ ನೀಡಿದೆ. ಹೌದು, ಚಿತ್ರಮಂದಿರಗಳಲ್ಲಿ ಮಾರಾಟ ಮಾಡುವ ಪಾಪ್‌ಕಾರ್ನ್, ತಂಪು ಪಾನೀಯ ಮತ್ತು ಇತರ ತಿನಿಸುಗಳ ಮೇಲಿನ ಜಿಎಸ್‌ಟಿ ದರವನ್ನು 18% ರಿಂದ 5% ಗೆ ಇಳಿಸುತ್ತದೆ ಎಂದು ಜಿಎಸ್‌ಟಿ ಕೌನ್ಸಿಲ್ ಆಫ್ ಇಂಡಿಯಾ ತಿಳಿಸಿದೆ.
ಈ ಮೂಲಕ ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸುವ ಸಿನಿ ರಸಿಕರಿಗೆ ಜಿಎಸ್‌ಟಿ ಕೌನ್ಸಿಲ್ ಸಿಹಿ ಸುದ್ದಿ ನೀಡಿದೆ. ಈ ಹೊಸ ನಿಯಮ ಇದೇ ಮಂಗಳವಾರ ಜುಲೈ 11 ಜಾರಿಗೆ ಬರಲಿದೆ ಎಂಬ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಆದಿಪುರುಷ್ ಆಯಿತು ಇನ್ನು ಶ್ರೀ ಮಹಾ ವಿಷ್ಣುವಿನ ಪಾತ್ರದಲ್ಲಿ ನಟ ಪ್ರಭಾಸ್!!!
