Home » Anchor Anushree: ಡಾಗ್ ಫುಡ್ ಅನ್ನು ಪೂರ್ತಿ ಚಪ್ಪರಿಸಿ ತಿಂದ ನಿರೂಪಕಿ ಅನುಶ್ರೀ – ಶೀ ಶೀ ಏನಿದು ಅನುಶ್ರೀ……..?

Anchor Anushree: ಡಾಗ್ ಫುಡ್ ಅನ್ನು ಪೂರ್ತಿ ಚಪ್ಪರಿಸಿ ತಿಂದ ನಿರೂಪಕಿ ಅನುಶ್ರೀ – ಶೀ ಶೀ ಏನಿದು ಅನುಶ್ರೀ……..?

0 comments
Anchor Anushree

Anchor Anushree: ಸ್ಯಾಂಡಲ್ ವುಡ್ (sandalwood) ಖ್ಯಾತ ನಿರೂಪಕಿ, ನಟಿ, ಮಾತಿನ ಮಲ್ಲಿ ಅನುಶ್ರೀ (anchor Anushree) ತಮ್ಮ ನಿರೂಪಣೆಯಿಂದಲೇ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಹರಳು ಹುರಿದಂತೆ ಮಾತನಾಡುವ ಮಾತಿನ ಮಲ್ಲಿ ಅಂದರೆ ಎಲ್ಲರಿಗೂ ಇಷ್ಟಾನೇ ಬಿಡಿ. ಅನುಶ್ರೀ ನಿರೂಪಣೆ ಮಾಡೋಕೆ ಶುರು ಮಾಡಿದರೆ ಸಾಕು, ಜನರು ಶಿಳ್ಳೆ ಹೊಡೆಯುತ್ತಾ ಕಣ್ಣು ಬಾಯಿ ಬಿಟ್ಟು ಆಕೆಯ ನಿರೂಪಣೆಯನ್ನು ಎಂಜಾಯ್ ಮಾಡುತ್ತಾರೆ. ಚಂದನವನದ ಬ್ಯೂಟಿ, ನಾಟಿ ಅನುಶ್ರೀ ಅವರು ಸದ್ಯ ಕಿರುತೆರೆ ರಿಯಾಲಿಟಿ ಶೋನ ನಿರೂಪಣೆಯ ಮೂಲಕ ಅಭಿಮಾನಿಗಳನ್ನ ಹೆಚ್ಚೆಚ್ಚು ಗಮನ ಸೆಳೆಯುತ್ತಿದ್ದಾರೆ. ಅನೇಕ ಸಿನಿಮಾ ಕಾರ್ಯಕ್ರಮಗಳನ್ನೂ, ಮಾತ್ರವಲ್ಲದೇ ಕಿರುತೆರೆಯ ಹಲವಾರು ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಎತ್ತಿದ ಕೈ ಎಂದೇ ಹೇಳಬಹುದು.

ಆದರೆ, ಖ್ಯಾತ ನಿರೂಪಕಿ ಅನುಶ್ರೀ ಡಾಗ್ ಫುಡ್ ಅನ್ನು ಪೂರ್ತಿ ಚಪ್ಪರಿಸಿ ತಿಂದಿದ್ದಾರಂತೆ. ಹೌದು, ಈ ಬಗ್ಗೆ ಅನುಶ್ರೀಯೇ ಹೇಳಿದ್ದಾರೆ. ನಟಿ ಶುಭಾ ಪೂಂಜಾ ಅವರ ಮನೆಯಲ್ಲಿ ನಡೆದಂತಹ ಈ ಘಟನೆಯನ್ನು ನಟಿ ಹಾಗೂ ಸ್ಟಾರ್​ ಆ್ಯಂಕರ್​ ಅನುಶ್ರೀ ಅವರು ಕ್ಯಾಮೆರಾ ಮುಂದೆ ಬಿಚ್ಚಿಟ್ಟಿದ್ದಾರೆ.

ಪ್ರೇಮಿಗಳ ದಿನದಂದು ಅನುಶ್ರೀ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ನಡೆಸಿದ ಸಂದರ್ಶನದಲ್ಲಿ ನಟಿ ಶುಭ ಪೂಂಜಾ ಮತ್ತು ಅವರ ಪತಿ ಸಮಂತ್​ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶುಭಾ ಅವರ ಸಂದರ್ಶನದ ನಡುವೆ ಅನುಶ್ರೀ ಅವರು ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಆದರೆ, ಅನುಶ್ರೀ ಅವರ ಪ್ರಕಾರ ಅದು ನೋವಿನ ಸಂಗತಿಯಂತೆ. ಏನಪ್ಪಾ ಅಂತೀರಾ ಅದುವೇ ನಿರೂಪಕಿ ಡಾಗ್ ಫುಡ್ ತಿಂದಿದ್ದು.

ಶುಭಾ ಅವರ ಮನೆಯಲ್ಲಿ ನಾಯಿಗಾಗಿ ಮಾಡಿದ್ದ ಆಹಾರವನ್ನು ಅನುಶ್ರೀ ಸೇವಿಸಿದ್ದರಂತೆ. ಅನುಶ್ರೀ ಮತ್ತು ಶುಭಾ ಇಬ್ಬರು ಮಂಗಳೂರು ಮೂಲದವರು. ಒಂದು ಬಾರಿ ಅನು ಶುಭಾ ಮನೆಗೆ ಹೋದಾಗ ಅನುಶ್ರೀಗೆ ಸಿಕ್ಕಿಪಟ್ಟೆ ಹಸಿವಾಗಿತ್ತಂತೆ. ಹಾಗಾಗಿ ಡೈನಿಂಗ್​ ಟೇಬಲ್ ನಲ್ಲಿ ಇದ್ದ ಅನ್ನ ಮತ್ತು ಚಿಕನ್​ ಸಾಂಬರ್ ಬಡಿಸಿಕೊಂಡು ತಿಂದು ತೇಗಿದ್ದಾರೆ.

ಆದರೆ, ಊಟದಲ್ಲಿ ರುಚಿ ಕಡಿಮೆ ಇತ್ತು ಹಾಗಾಗಿ ಅನುಶ್ರೀ, ಉಪ್ಪು ಕೊಡು ಅಂತಾ ಶುಭಾರನ್ನು ಕೇಳಿದ್ದಾರೆ. ಈ ವೇಳೆ ಶುಭಾ ಅವರು ಅದು ನಾಯಿಗಾಗಿ ತಯಾರಿಸಿದ ಚಿಕನ್​ ಊಟ ಎಂದು ಹೇಳಿದ್ದಾರೆ.
ಏನು ಮಾಡೋದು ನಾಯಿ ಊಟ ಅನುಶ್ರೀ ತಿಂದಾಯ್ತು. ಆದರೆ, ನೆನಪು ಹಾಗೇ ಇದೆ. ಈ ಘಟನೆಯನ್ನು ಕಾರ್ಯಕ್ರಮದಲ್ಲಿ ನೆನೆಸಿಕೊಂಡ ಅನುಶ್ರೀ, ನನ್ನ ಜೀವನದಲ್ಲಿ ಇದು ಅತ್ಯಂತ ನೋವಿನ ಅನುಭವ ಅಂತಾ ತುಂಬಾ ತಮಾಷೆಯಾಗಿ ಹೇಳಿಕೊಂಡರು. ಈ ವೇಳೆ ಶುಭಾ ಮತ್ತು ಅನುಶ್ರೀ ಹೊಟ್ಟೆ ಹುಣ್ಣಾಗುವಂತೆ ನಕ್ಕರು.

 

 

You may also like

Leave a Comment