Amala paul: ಕಾಲಿವುಡ್ ಹಾಗೂ ಮಾಲಿವುಡ್ ಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರೋ ನಟಿ ಅಮಲಾ ಪೌಲ್(Amala poul) ಅವರು ಸದ್ಯ ಭಾರತೀಯ ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯಿಂದ ನೆಲೆಯುತ್ತಿರುವಂತಹ ಖ್ಯಾತ ನಟಿ ನಟಿ ಎನಿಸಿದ್ದಾರೆ. ನಟನೆಯಿಂದಲೇ ಸುದ್ಧಿಯಾಗೋ ಈ ನಟಿ ಆಗಾಗ ತಮ್ಮ ಹೇಳಿಕೆಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಅಲ್ಲದೆ ಇತ್ತೀಚಿಗಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಮಗಳ ವಿಚಾರಕ್ಕಾಗಿ ಈಕೆಯ ಮನೆಗೆ ಭೇಟಿ ನೀಡಿ ಧಮ್ಕಿ ಹಾಕಿದ್ದರು ಎಂಬ ವಿಚಾರ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಂತೆಯೇ ಸದ್ಯ ನಟಿ ಅಮಲಾ ಪೌಲ್ ನೀಡಿರೋ ಹೇಳಿಕೆಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
ಹೌದು, ಕೇರಳ ಮೂಲದ ಅಮಲಾ, ನೀಲತಾಮರನ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್ನ ಮೈನಾ ಚಿತ್ರದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ, ಧನುಷ್ ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ. ಅಲ್ಲದೆ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ನಟಿ ಅಮಲಾ ಪೌಲ್ ಎಲ್ಲರಿಗೂ ಚಿರಪರಿಚಿತಳೇ. ಬೆರಳೆಣಿಕೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದರೂ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ನಮ್ಮ ದೇಶದಲ್ಲಿ ಸಿನಿಮಾದಲ್ಲಿ ಬೆತ್ತಲೆಯಾಗಿ ನಟಿಸಿದ ಕೆಲವೇ ಕೆಲವು ನಟಿಯರ ಪೈಕಿ ಅಮಲಾ ಪೌಲ್ ಕೂಡ ಒಬ್ಬರಾಗಿದ್ದಾರೆ. ಸದ್ಯ ಇದೇ ವಿಚಾರವಾಗಿ ನಟಿ ಮತ್ತೆ ಸುದ್ದಿಯಾಗಿದ್ದಾರೆ.
ಮೊದಲೇ ಹೇಳಿದಂತೆ ಬೆತ್ತಲೆಯಾಗಿ ನಟಿಸಿದ ಕೆಲವೇ ಕೆಲವು ನಟಿಯರಲ್ಲಿ ಅಮಲಾ ಕೂಡ ಒಬ್ಬರು. ಆದೈ ಸಿನಿಮಾದಲ್ಲಿ ಅಮಲಾ ಮೈಚಳಿ ಬಿಟ್ಟ ನಟಿಸಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಆದೈ ಸಿನಿಮಾದದ ಬಗ್ಗೆ ಮೆಲಕು ಹಾಕಿದ ಅಮಲಾ ಪೌಲ್, ಆದೈ ಸಿನಿಮಾದಲ್ಲಿ ಬಟ್ಟೆ ಇಲ್ಲದೆ ನಟಿಸುವುದು ಸವಾಲಾಗಿತ್ತು. ಶೂಟಿಂಗ್ ಸಮಯದಲ್ಲಿ ನನ್ನೊಂದಿಗೆ 15 ಮಂದಿ ಇದ್ದರು. ಒಬ್ಬ ಮಹಿಳೆಯೂ ಕೂಡ ಇರಲಿಲ್ಲ. ಕ್ಯಾಮೆರಾಮನ್, ಲೈಟ್ ಮ್ಯಾನ್, ಡೈರೆಕ್ಟರ್ ಹೀಗೆ ಒಟ್ಟು 15 ಜನ ಕೆಲಸ ಮಾಡುತ್ತಿದ್ದರು ಎಂದಿದ್ದಾರೆ.
ಅಲ್ಲದೆ ಆದೈ ಸಿನಿಮಾದ ಚಿತ್ರೀಕರಣದ ವೇಳೆ ಜನರ ಮುಂದೆ ಬಟ್ಟೆ ಇಲ್ಲದೆ ಹೇಗೆ ಪ್ರದರ್ಶನ ನೀಡುವುದು ಎಂಬ ಚಿಂತೆಯಲ್ಲಿದ್ದೆ. ಈ ಮನಃಸ್ಥಿತಿಯಲ್ಲಿದ್ದರೆ ದೃಶ್ಯಗಳು ಖಂಡಿತಾ ಸರಿಯಾಗಿ ಬರುವುದಿಲ್ಲ ಎಂದರಿತು, ನನಗೆ ಈ ಕ್ಷಣಕ್ಕೆ 15 ಗಂಡಂದಿರಿದ್ದಾರೆ ಎಂದು ಭಾವಿಸಿಕೊಂಡು ನಟಿಸಲು ಪ್ರಾರಂಭಿಸಿದೆ ಎಂದು ಮೆಲುಕು ಹಾಕಿದ್ದಾರೆ. ಇದು ನೋಡುಗರಿಗೆ ಕೇಳುಗರಿಗೆ ನಿಜಕ್ಕೂ ಶಾಕ್ ಆಗಿದೆ. ಆದರೆ ನಟಿ ಓಪನ್ ಆಗಿ ಈ ಸ್ಟೇಟ್ ಮೆಂಟ್ ನೀಡಿದ್ದಾರೆ.
ಅಂದಹಾಗೆ ಕೆಲ ತಿಂಗಳ ಹಿಂದಷ್ಟೇ ಆಡಿಜೀವಿಥಂ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಇದರಲ್ಲಿ ಪೃಥ್ವಿರಾಜ್ ಮತ್ತು ಅಮಲಾ ನಡುವೆ ಲಿಪ್ಲಾಕ್ ದೃಶ್ಯವಿದೆ. ನಿಜವಾಗಿಯೂ ಲಿಪ್ಲಾಕ್ ಮಾಡಿರುವಂತೆ ನೈಜವಾಗಿ ಅಭಿನಯಿಸಿದ್ದಾರೆ. ಅಲ್ಲದೆ, ಈ ಲಿಪ್ಲಾಕ್ ದೃಶ್ಯದ ಬಗ್ಗೆ ಅಮಲಾ ಬೋಲ್ಡ್ ಆಗಿಯೇ ಹೇಳಿಕೆ ನೀಡಿದ್ದರು. ಇನ್ನು ನಿರ್ದೇಶಕ ವಿಜಯ್ ಜತೆಗಿನ ಮದುವೆ ಹಾಗೂ ಡಿವೋರ್ಸ್ ಬಹಳ ಚರ್ಚೆಯಾಗಿತ್ತು. ಅಲ್ಲದೆ, ಮಾಜಿ ಬಾಯ್ಫ್ರೆಂಡ್ ಜತೆಗಿನ ಲಿಪ್ಲಾಕ್ ಫೋಟೋಗಳು ವೈರಲ್ ಆಗಿದ್ದವು.
