Home » Actress Shruthi: ನಟ ದರ್ಶನ್ ಕುರಿತು ಅಚ್ಚರಿ ಸೀಕ್ರೇಟ್ ಬಹಿರಂಗಪಡಿಸಿದ ನಟಿ ಶೃತಿ !!

Actress Shruthi: ನಟ ದರ್ಶನ್ ಕುರಿತು ಅಚ್ಚರಿ ಸೀಕ್ರೇಟ್ ಬಹಿರಂಗಪಡಿಸಿದ ನಟಿ ಶೃತಿ !!

0 comments

Acterss Shruthi: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ(Katera) ಚಿತ್ರ ಡಿಸೆಂಬರ್ ಕೊನೆಯ ವಾರದಲ್ಲಿ ತೆರೆ ಕಾಣಲಿದೆ. ಅಭಿಮಾನಿಗಳಂತೂ ರಿಲೀಸ್ ಅನ್ನು ಸಂಭ್ರಮಿಸಲು ಭಾರಿ ಕಾತರಾಗಿದ್ದಾರೆ. ಈ ನಡುವೆಯೇ ಚಿತ್ರದ ಪ್ರಮೋಷನ್ಗಾಗಿ ಅನೇಕ ಪ್ರೆಸ್ ಮೀಟ್ ಕೂಡ ನಡೆಯುತ್ತಿವೆ. ಅಂದಹಾಗೆ ಒಂದು ಪ್ರೆಸ್ ಮೀಟ್ ನಲ್ಲಿ ಖ್ಯಾತ ನಟಿ ಶೃತಿ ಅವರು ದರ್ಶನ್ ಬಗ್ಗೆ ಯಾರು ತಿಳಿಯದ ಸೀಕ್ರೆಟ್ ಒಂದನ್ನು ರಿವಿಲ್ ಮಾಡಿದ್ದಾರೆ.

ಹೌದು, ನಿನ್ನೆ ದಿನ (ಡಿ.15) ‘ಕಾಟೇರ’ ಚಿತ್ರದ ಎರಡನೇ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಚಿತ್ರದ ಕಲಾವಿದರು, ಹಲವು ಸಂಗತಿಗಳನ್ನು ಹಂಚಿಕೊಂಡರು. ಇದೇ ವೇಳೆ ನಟಿ ಶ್ರುತಿ(Actor Shruthi) ಕೂಡ ಚಿತ್ರದ ಬಗ್ಗೆ ಮಾತನಾಡಿದ್ದು ಕಾಟೇರ ಟೈಟಲ್​ ಕೇಳುತ್ತಿದ್ದಂತೆ ನಮಗೆಲ್ಲಾ ಒಂದು ಕುತೂಹಲ ಮೂಡಿತ್ತು. ಇಷ್ಟು ದಿನಗಳ ಕಾಲ ಹಳ್ಳಿ ಚಿತ್ರಗಳನ್ನು ಮಾಡಿದ್ದೇನೆ. ನಾನು ನಟಿಸಿರುವ ನೂರಾರು ಸಿನಿಮಾಗಳು ಹಳ್ಳಿ ಸೊಗಡಿನ, ನಮ್ಮ ನಾಡಿನ, ಮಣ್ಣಿನ ಚಿತ್ರಗಳೇ, ಆದ್ರೂ ಕೂಡ ಎಲ್ಲಿಯೂ ನಾವು ಈ ಹೆಸರು, ಪದ ಕೇಳಲೇ ಇಲ್ವಾ? ನಮ್ಮ ಕಿವಿಗೆ ಬೀಳಲಿಲ್ವಾ? ಎಂದ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಇಂತಹ ಒಂದು ತಂಡದಿಂದ ಒಂದು ಚಿತ್ರ ಬಂದಿದೆ ಅಂದ್ರೆ, ಬಹುಶಃ ಸಿನಿಮಾವನ್ನು ಜನರು ಎಷ್ಟು ಪ್ರೀತಿಸಬಹುದು ಎಂಬ ನಿರೀಕ್ಷೆ ನನ್ನಲ್ಲೂ ಮೂಡಿದೆ” ಎಂದು ಶ್ರುತಿ ಹೇಳಿದರು. ಇನ್ನು ಅವರು ನಟ ದರ್ಶನ್ ಕುರಿತು ಕೆಲವು ವಿವರಗಳನ್ನು ಬಹಿರಂಗಪಡಿಸಿದ್ದಾರೆ. ದರ್ಶನ ಅನ್ನೋರು ಉದ್ಭವ ಮೂರ್ತಿ ಅಲ್ಲ ಶ್ರಮ ಜೀವಿ. ತುಂಬಾ ಶ್ರಮ ಪಟ್ಟು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ ಅಂದ್ರೆ ಅವರ ಪರಿಶ್ರಮ ಮತ್ತು ಸಣ್ಣ ಪುಟ್ಟ ಕೆಲಸಗಳನ್ನು ಈ ಚಿತ್ರರಂಗದಲ್ಲಿ ಮಾಡಿಕೊಂಡು ಈ ಮಟ್ಟಕ್ಕೆ ಬಂದಿದ್ದಾರೆ ಅಂದ್ರೆ ಶ್ರಮ ಮತ್ತು ಅವರ ಅಭಿಮಾನಿಗಳು ಸಪೋರ್ಟ್ ಕಾರಣ. ಸುತ್ತ ಮುತ್ತ ಇರುವ ಫೈಟರ್‌ಗಳ ಬಗ್ಗೆ ದರ್ಶನ್ ಸದಾ ಚಿಂತಿಸುತ್ತಾರೆ, ಕಲಾವಿದರಿಗೆ ಏನಾದರೂ ಆದರೆ ಸದಾ ಚಿಂತಿಸುತ್ತಾರೆ. ಕಷ್ಟ ನೋಡಿಕೊಂಡು ಬಂದಿರುವ ವ್ಯಕ್ತಿ ದರ್ಶನ್. ನಮ್ಮ ಸಿನಿಮಾದಲ್ಲೂ ದರ್ಶನ್ ಅವರ ಊಟದ ಬಗ್ಗೆ ಚಿಂತಿಸಿಲ್ಲ ನಮ್ಮ ಊಟದ ಬಗ್ಗೆ ಚಿಂತಿಸುತ್ತಿದ್ದರು. ನನ್ನ ಅಮ್ಮನೂ ಕೇಳುತ್ತಿರಲಿಲ್ಲ ಏನು ಊಟ ಬೇಕು ಅಂತ…ದರ್ಶನ್ ಕೇಳುತ್ತಿದ್ದರು ಇವತ್ತು ಏನು ತಿನ್ನುತ್ತೀರಾ ಎಂದು’ ಎಂದು ಶ್ರುತಿ ಹೇಳಿದ್ದಾರೆ.

ಅಲ್ಲದೆ ಕಾಟೇರ ಸಿನಿಮಾ ಒಪ್ಪಿಕೊಳ್ಳುವ ಮುನ್ನ ಸಿನಿಮಾ ತಂಡ ಸೇರುವ ಮುನ್ನ ದರ್ಶನ್ ನನಗೆ ಸೂಪರ್ ಸ್ಟಾರ್ ಆಗಿ ಕಾಣಿಸುತ್ತಿದ್ದರು, ಸೆಟ್ ಒಳಗೆ ಬಂದ್ಮೇಲೆ ಸಹುದ್ಯೋಗಿಯಾಗಿ ಕೋ-ಸ್ಟಾರ್ ಆಗಿ ಕಾಣುತ್ತಿದ್ದರು, ಸಿನಿಮಾ ಮುಗಿಸಿ ಹೊರ ಬಂದ್ಮೇಲೆ ನನ್ನ ಜೀವನಕ್ಕೆ ಒಳ್ಳೆ ಸಹೋದರ ಸಿಕ್ಕಿದ್ದಾರೆ ಅನಿಸುತ್ತದೆ. ಒಂದು ಸಿನಿಮಾ ಎಷ್ಟು ಭಾಂದವ್ಯ ಕ್ರಿಯೇಟ್ ಮಾಡಿಕೊಡುತ್ತದೆ ಎಂದು ಪದಗಳಲ್ಲಿ ಹೇಳಲು ಆಗಲ್ಲ’ ಎಂದು ಶ್ರುತಿ ಮಾತನಾಡಿದ್ದಾರೆ.

https://www.youtube.com/watch?v=GHabqKeIN6k

You may also like

Leave a Comment