Home » Amruta Subhash: ಯಲಾ ಇವ್ನ…! ಮುಟ್ಟಿನ ದಿನ ತಪ್ಪಿಸಿಯೇ ಸೆಕ್ಸ್ ದೃಶ್ಯ ಮಾಡೋಣ ಅಂದ ಡೈರೆಕ್ಟರ್, ಅಷ್ಟಕ್ಕೂ ಆತನ ಉದ್ದೇಶ ಏನಿತ್ತು ?

Amruta Subhash: ಯಲಾ ಇವ್ನ…! ಮುಟ್ಟಿನ ದಿನ ತಪ್ಪಿಸಿಯೇ ಸೆಕ್ಸ್ ದೃಶ್ಯ ಮಾಡೋಣ ಅಂದ ಡೈರೆಕ್ಟರ್, ಅಷ್ಟಕ್ಕೂ ಆತನ ಉದ್ದೇಶ ಏನಿತ್ತು ?

0 comments
Amruta Subhash

Amruta Subhash: ಸಿನಿಮಾ ಅಂದಾಗ ಸೆಕ್ಸ್ ಬಗೆಗಿನ ಇಂಟಿಮೇಟ್ ಸೀನ್ಗಳು ಇದ್ದೇ ಇರುತ್ತದೆ. ಅಂತೆಯೇ ‘ಲಸ್ಟ್ ಸ್ಟೋರಿಸ್ 2’ (Lust Stories 2) ಚಿತ್ರದಲ್ಲಿ ಬರುವ ‘ದಿ ಮಿರರ್’ ಎಪಿಸೋಡ್​ನಲ್ಲಿ ಕಾಣುವ ನಟಿ ಅಮೃತಾ ಸುಭಾಶ್ (Amruta Subhash) ಅವರು ಮಾಲೀಕನ ಮನೆಯಲ್ಲೇ ಪತಿ ಜೊತೆ ಸೆಕ್ಸ್ ಮಾಡುವ ಕೆಲಸದಾಕೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಈ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಈ ಸಿನಿಮಾದಿಂದ ಅವರ ಜನಪ್ರಿಯತೆ ಕೂಡ ಹೆಚ್ಚಿತ್ತು.

ಅಲ್ಲದೇ ‘ಸೇಕ್ರೆಡ್ ಗೇಮ್ಸ್​ 2’ ವೆಬ್ ಸೀರಿಸ್​ನಲ್ಲಿ ಅವರು ನಟಿಸಿದ್ದರು. ಇದರಲ್ಲಿ ಸೆಕ್ಸ್ ದೃಶ್ಯ ಬರುತ್ತದೆ. ಅದನ್ನು ಶೂಟ್ ಮಾಡುವ ದಿನ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

‘ಸೇಕ್ರೆಡ್ ಗೇಮ್ಸ್ 2’ ಸರಣಿಯಲ್ಲಿ ರಾ ಏಜೆಂಟ್ ಆಗಿ ಅಮೃತಾ ನಟಿಸಿದ್ದು, ನವಾಜುದ್ದೀನ್ ಸಿದ್ಧಿಕಿ ಗಣೇಶ್ ಗಾಯ್ತೊಂಡೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಗಣೇಶ್ ಗಾಯ್ತೊಂಡೆ ವಿರುದ್ಧ ಸ್ಪೈ ನಡೆಸಲು ಆತನ ಜೊತೆಯೇ ಈ ರಾ ಏಜೆಂಟ್ ಸೇರಿಕೊಳ್ಳುತ್ತಾಳೆ. ಈ ರೀತಿಯಲ್ಲಿ ಅಮೃತಾ ಪಾತ್ರ ಮಾಡಿದ್ದರು. ಸಖತ್ ಇಂಟಿಮೇಟ್ ಆಗಿ ಅವರು ಕಾಣಿಸಿಕೊಂಡಿದ್ದರು.

ಆದರೆ ಇಂಟಿಮೇಟ್ ದೃಶ್ಯಗಳನ್ನು ಶೂಟ್ ಮಾಡುವಾಗ ನಿರ್ದೇಶಕರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಆ ಸಂದರ್ಭವನ್ನು ಅನುರಾಗ್ ಕಶ್ಯಪ್ ಉತ್ತಮವಾಗಿ ನಿರ್ವಹಿಸುತ್ತಾರೆ ಎಂಬುದು ಅಮೃತಾ ಸುಭಾಶ್ ಅವರ ಅಭಿಪ್ರಾಯ ಆಗಿದೆ.

ಹೌದು, ‘ಸೇಕ್ರೇಡ್ ಗೇಮ್ಸ್ 2’ ಸರಣಿಯನ್ನು ಅನುರಾಗ್ ಕಶ್ಯಪ್ ನಿರ್ದೇಶನ ಮಾಡಿದ ಇಂಟಿಮೇಟ್ ದೃಶ್ಯದ ಶೂಟ್ ಬಗ್ಗೆ ಅವರು ಮಾತನಾಡಿದ್ದು, ‘ನಾನು ಮೊದಲ ಬಾರಿಗೆ ಇಂಟಿಮೇಟ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ಅನುರಾಗ್ ಕಶ್ಯಪ್ ಅವರ ‘ಸೇಕ್ರೆಡ್ ಗೇಮ್ಸ್ 2’ ಸರಣಿಯಲ್ಲಿ. ನಿರ್ದೇಶನ ಮಾಡುತ್ತಿರುವುದು ಪುರುಷನೋ ಮಹಿಳೆಯೋ ಎಂಬ ಪ್ರಶ್ನೆಯೇ ಬರಲಿಲ್ಲ. ಅವರು ತುಂಬಾನೇ ಸೆನ್ಸಿಟಿವ್ ಆಗಿದ್ದರು. ಅವರು ನನ್ನ ಮುಟ್ಟಿನ ದಿನದ ಬಗ್ಗೆ ಕೇಳಿದರು. ಆ ಸಂದರ್ಭದಲ್ಲಿ ಇಂಟಿಮೇಟ್​ ದೃಶ್ಯಗಳ ಶೂಟ್ ಮಾಡುವುದಿಲ್ಲ ಎಂದರು’ ಎಂಬುದಾಗಿ ಅನುರಾಗ್ ಬಗ್ಗೆ ಅಮೃತಾ ಮೆಚ್ಚುಗೆ ಸೂಚಿಸಿದ್ದಾರೆ.

 

ಇದನ್ನು ಓದಿ: Highway act: ಹೈವೆ ಬದಿಯಲ್ಲಿ ಮನೆ, ಕಟ್ಟಡ ನಿರ್ಮಿಸಿದ್ದೀರಾ? ಸರ್ಕಾರದಿಂದ ಬಂತು ಹೊಸ ರೂಲ್ಸ್, ಖಡಕ್ ಆದೇಶ!! 

You may also like

Leave a Comment