Home » Actress Taapsee Pannu: ಮದ್ವೆ ಆಗಲು ನಾನೇನು ಗರ್ಭಿಣಿ ಆಗಿದ್ದೀನಾ ? – ನಾಯಕಿ ನಟಿಯ ಹೇಳಿಕೆಗೆ ಫಿಲ್ಮ್ ಇಂಡಸ್ಟ್ರಿ ಶಾಕ್ !

Actress Taapsee Pannu: ಮದ್ವೆ ಆಗಲು ನಾನೇನು ಗರ್ಭಿಣಿ ಆಗಿದ್ದೀನಾ ? – ನಾಯಕಿ ನಟಿಯ ಹೇಳಿಕೆಗೆ ಫಿಲ್ಮ್ ಇಂಡಸ್ಟ್ರಿ ಶಾಕ್ !

by Mallika
0 comments
Actress Taapsee Pannu

Actress Taapsee Pannu: ಬಿಟೌನ್ ಖ್ಯಾತ ನಟಿ ತಾಪ್ಸಿ ಪನ್ನು ಸಣ್ಣ ಚಿತ್ರಗಳಿಂದ ಬಾಲಿವುಡ್​ನಲ್ಲಿ ಪಯಣ ಆರಂಭಿಸಿದ ಇವರು ಇದೀಗ ಬಹುಬೇಡಿಕೆಯ ನಟಿಯಾಗಿದ್ದಾರೆ. ತಮ್ಮದೇ ಆದ ಪ್ರೇಕ್ಷಕ ವರ್ಗವನ್ನೂ ನಟಿ ಸೃಷ್ಟಿಸಿಕೊಂಡಿದ್ದಾರೆ. ಇನ್ನು ನಟಿ ತಾಪ್ಸಿ ಪನ್ನು (Actress Taapsee Pannu) ತನ್ನ ಚಿತ್ರಗಳಿಗಿಂತಲೂ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ತನ್ನ ನೇರ ನುಡಿಗಳಿಂದಲೇ ಗುರುತಿಸಿಕೊಂಡಿರುವ ಬಾಲಿವುಡ್‌ ನಟಿ ತಾಪ್ಸಿ ಪನ್ನು ಮದುವೆ ಬಗ್ಗೆ ಹೇಳಿರುವ ಮಾತು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸೋಮವಾರ ಇನ್ಸ್ಟಾಗ್ರಾಮ್‌(Instagram) ಖಾತೆಯಲ್ಲಿ “ಆಸ್ಕ್ ಮಿ ಎನಿಥಿಂಗ್” ಸೆಷನ್ ಅನ್ನು ನಡೆಸಿದರು ಮತ್ತು ಅವರು ಅಭಿಮಾನಿಗಳು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು. ತಾಪ್ಸಿ ಅವರು ತನ್ನ ಮುಂದಿನ ಹಾಲಿಡೇ ಪ್ಲ್ಯಾನ್‌, ಮುಂದಿನ ಸಿನಿಮಾ ಪ್ರಾಜೆಕ್ಟ್‌ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಈ ವೇಳೆ ನೆಟ್ಟಿಗರೊಬ್ಬರು ಯಾವಾಗ ಮದುವೆಯಾಗುತ್ತೀರಾ? ಎಂದು ಪ್ರಶ್ನೆಸಿದ್ದಾರೆ. ಇದಕ್ಕೆ ಉತ್ತರಿಸಿದ ತಾಪ್ಸಿ, ಯಾಕೆ ಮದುವೆಯಾಗಬೇಕು, ನಾನು ಮದುವೆಯಾಗಲು ಗರ್ಭಿಣಿಯಲ್ಲ. ನಾನು ಇಷ್ಟು ಬೇಗ ಮದುವೆಯಾಗುವುದಿಲ್ಲ. ಮದುವೆ ಬಗ್ಗೆ ನಾನು ನಿಮಗೆಲ್ಲರಿಗೂ ತಿಳಿಸುತ್ತೇನೆಂದು ತಾಪ್ಸಿ ನಗುತ್ತಾ ವ್ಯಂಗ್ಯವಾಗಿ ಈ ಉತ್ತರವನ್ನು ಹೇಳಿದರು.ತಾಪ್ಸಿ ಮದುವೆಯ (Marriage) ಬಗ್ಗೆ ಹೇಳಿದ ಈ ಕಾಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ. ಮತ್ತೊಮ್ಮೆ ನೆಟಿಜನ್‌ಗಳು ತಾಪ್ಸಿಯನ್ನು ಟೀಕಿಸುತ್ತಿದ್ದಾರೆ.

ತಾಪ್ಸಿ ಪನ್ನು(Tapsee Pannu) ತನ್ನ ಡೇಟಿಂಗ್ ಜೀವನದ ಬಗ್ಗೆ ಎಲ್ಲೂ ಕೂಡ ಹೇಳಿಕೊಂಡಿಲ್ಲ. ಈ ಹಿಂದೆ ಅವರು ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿತ್ತು. ಅವರೊಂದಿಗಿನ ಕೆಲ ಫೋಟೋಗಳನ್ನು ಕೂಡ ತಾಪ್ಸಿ ಹಂಚಿಕೊಂಡಿದ್ದರು.

ತಾಪ್ಸಿ ಪನ್ನು ರಾಘವೇಂದ್ರ ರಾವ್ ಅವರ ಜುಮ್ಮಂಡಿ ನಾದಂ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ(Telugu industry) ಎಂಟ್ರಿ ಕೊಟ್ಟರು. ನಂತರ ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾ ಮಾಡಿದರು. ಕೆಲವು ಸಮಯಗಳ ನಂತರ ಬಾಲಿವುಡ್ ನಲ್ಲಿ ನಟಿಸಲು ಅವಕಾಶ ದೊರೆಯಿತು. ಇದೀಗ ತಾಪ್ಸಿ ಸದ್ಯಕ್ಕೆ ಬಾಲಿವುಡ್‌ನಲ್ಲಿ ಸತತವಾಗಿ ಸಿನಿಮಾ ಮಾಡುತ್ತಿದ್ದಾರೆ. ‘ಡಂಕಿ’ ಮತ್ತು ಏಲಿಯನ್ ಚಿತ್ರಗಳಲ್ಲಿ ನಟಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ. ‘ಡಂಕಿ’ ಸಿನಿಮಾವು ಈ ವರ್ಷದಲ್ಲಿ ತೆರೆ ಕಾಣಲಿದೆ. ಸದ್ಯ ತಾಪ್ಸಿ ‘ಏಲಿಯನ್’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

 

ಇದನ್ನು ಓದಿ: High Court: ಪತ್ನಿಯ ಉಡುಗೊರೆಗಳ ಮೇಲೆ ಪತಿ ಹಾಕಂಗಿಲ್ಲ ಕಣ್ಣು, ಹೈಕೋರ್ಟ್ ಆಶ್ಚರ್ಯದ ತೀರ್ಪು !

You may also like

Leave a Comment