Bollywood Actor: ಈ ಸೂಪರ್‌ಸ್ಟಾರ್ ಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದಾರಂತೆ. ಯಾರಪ್ಪಾ ಈ ಸ್ಟಾರ್ ನಟ ಅಂತ ಅಂದುಕೊಂಡಿದ್ದೀರಾ ?! ಅವರೇ ಒಂದು ಕಾಲದಲ್ಲಿ ಬಾಲಿವುಡ್‌ನ (Bollywood Actor) ಅಗ್ರ ನಟರಲ್ಲಿ ಒಬ್ಬರಾಗಿದ್ದ ನಟ ಗೋವಿಂದ (Actor Govinda).

image source: Times of india
1986 ರಲ್ಲಿ ‘ಲವ್ 86’ ಚಿತ್ರದ ಮೂಲಕ ನಟ ಗೋವಿಂದ ಅವರು ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿತ್ತು. ಅವರ ಚೊಚ್ಚಲ ಚಿತ್ರದ ಯಶಸ್ಸಿನ ನಂತರ, ಗೋವಿಂದ ಕೆಲವೇ ವಾರಗಳ ಅವಧಿಯಲ್ಲಿ 70 ಕ್ಕೂ ಹೆಚ್ಚು ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಗೋವಿಂದ ಅವರು 1987ರಲ್ಲಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ನಾನು 70 ಚಿತ್ರಗಳಿಗೆ ಸಹಿ ಹಾಕಿದ್ದೆ. ಅದರಲ್ಲಿ 8 ರಿಂದ 10 ಚಿತ್ರಗಳು ನಿಂತುಹೋಯಿತು. ಡೇಟ್ ಹಾಗೂ ಶೆಡ್ಯೂಲ್ ನ
ಸಮಸ್ಯೆಯಿಂದಾಗಿ ನಾನು 4 ರಿಂದ 5 ಚಿತ್ರಗಳನ್ನು ತಿರಸ್ಕರಿಸಿದೆ ಎಂದರು.
ನಟ ಗೋವಿಂದ ಅವರು ಕೆಲವೊಮ್ಮೆ ದಿನಕ್ಕೆ ಎರಡು ಸಿನಿಮಾಗಳ ಶೂಟಿಂಗ್ ಪಾಲ್ಗೊಂಡರೆ, ಕೆಲವೊಮ್ಮೆ ದಿನಕ್ಕೆ ನಾಲ್ಕರಿಂದ ಐದು ಚಿತ್ರಗಳನ್ನು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದೂ ಇದೆ. ಗೋವಿಂದ ಅವರು ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದರು. ಇವರು ಕೊನೆಯದಾಗಿ 2019 ರಲ್ಲಿ ಬಿಡುಗಡೆಯಾದ ರಂಗೀಲಾ ರಾಜ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
