Bindu Rani: ರಾಜ್ಯದ ಅಥ್ಲೀಟ್ ಬಿಂದು ರಾಣಿ ಮೇಲೆ ಕಂಠೀರವ ಕ್ರೀಡಾಂಗಣದಲ್ಲಿ ಕೋಚ್ ಯತೀಶ್ ಅವರ ಪತ್ನಿ ಶ್ವೇತಾ ಹಲ್ಲೆಗೆ ಯತ್ನಿಸಿರುವ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಕೋಚ್ ಶ್ವೇತಾ ಬಿಂದು ರಾಣಿಯವರನ್ನು ಮನಸೋಯಿಚ್ಛೆ ನಿಂದಿಸಿದ್ದಾರೆ. ಅಷ್ಟು ಮಾತ್ರವಲ್ಲ ಕಳ್ಳತನದ ಆರೋಪ ಕೂಡಾ ಮಾಡಿದ್ದಾರೆ. ಸೀನಿಯರ್ ಕೋಚ್ ಯತೀಶ್ ಅವರ ಪತ್ನಿ ಶ್ವೇತಾ ಅವರು ಬಿಂದು (Bindu Rani) ರಾಣಿ ಅವರಿಗೆ ಚಪ್ಪಲಿ ತೋರಿಸುವ ಮೂಲಕ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಸೋಸಿಯೇಷನ್‌ಗೆ ದೂರು ನೀಡಲು ಬಿಂದು ರಾಣಿ ಮುಂದಾಗಿದ್ದಾರೆ.
ಈ ಘಟನೆ ಟಿಇಡಿ ಕಾರ್ಯಕ್ರಮಕ್ಕೆ ಹೋಗಿದ್ದ ವಿಚಾರವಾಗಿ ನಡೆದಿದೆ ಎನ್ನಲಾಗಿದೆ.
ಏಯ್…ಹೇಳೇ..? ನನಗೆ ಬೆದರಿಸ್ತೀಯಾ? ದೊಡ್ಡವರ ಕೈಲಿ ಫೋನ್ ಮಾಡಿಸ್ತೀಯಾ? ಎಂದೆಲ್ಲ ಶ್ವೇತಾ ಅವಾಜ್ ಹಾಕಿದ್ದಾರೆ.
ವಾಟ್ಸಪ್ ಗ್ರೂಪ್‌ನಲ್ಲಿ ಖಾಸಗಿ ಕಾರ್ಯಕ್ರಮವೊಂದರ ವೀಡಿಯೋವೊಂದನ್ನು ಶೇರ್ ಮಾಡಿದ್ದೆ, ಇದಕ್ಕೆ ಕೋಚ್ ಯತೋಶ್ ತಪ್ಪು ಎಂದಿದ್ದಾರೆ. ನಾನು ಡೈರೆಕ್ಟ್ ಆಗಿ ಯತೀಶ್ ಅವರಿಗೆ ಕರೆ ಮಾಡಿದೆ. ಆದರೆ ಕಾಲ್ ಕಟ್ ಆಯಿತು. ಅನಂತರ ಇಂದು ಬೆಳಗ್ಗೆ ಸ್ಟೇಡಿಯಂನಲ್ಲಿ ಶ್ವೇತಾ ಅವರು ಬಂದು ಈ ರೀತಿ ಮಾತಾಡಿದ್ದಾರೆ ಎಂದು ಬಿಂದು ರಾಣಿ ಹೇಳಿದ್ದಾರೆ.
ಇದನ್ನು ಓದಿ: Marriage: ಬತ್ತಿ ಬಾಯಿಗೆ ಇಟ್ಟು ಧಮ್ ಎಳೆದು ಡಿಜೆ ಹಾಡಿಗೆ ಹೆಜ್ಜೆ ಹಾಕಿದ ಅತ್ತೆ, ಮದುವೆ ಕ್ಯಾನ್ಸಲ್ ಮಾಡಿಕೊಂಡ ವರ !
