Actresses Childhood photo viral: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಟ, ನಟಿಯರ ಬಾಲ್ಯದ ಫೋಟೋಗಳು ವೈರಲ್ ಆಗುತ್ತಿದೆ. ಈ ಹಿಂದೆ ಕರಾವಳಿಯ ಚೆಲುವೆ ನಟಿ ಪೂಜಾ ಹೆಗ್ಡೆ (Pooja Hegde), ಸ್ಟಾರ್ ನಟಿ ಸಮಂತಾ (Actress samanta Ruth Prabhu) ಬಾಲ್ಯದ ಫೋಟೋ ವೈರಲ್ ಆಗಿತ್ತು. ಅಲ್ಲದೆ ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್(Rajanikanth) ಅವರೊಂದಿಗೆ ನಟಿ ಮೀನಾ(Actress Meena) ರವರ ಬಾಲ್ಯದ ಫೋಟೋ ವೈರಲ್ ಆಗಿತ್ತು. ಇದೀಗ ಖ್ಯಾತ ಸ್ಟಾರ್ ನಟಿಯರಿಬ್ಬರ ಬಾಲ್ಯದ ಫೋಟೋ (Actresses Childhood photo) ವೈರಲ್ ಆಗಿದೆ. ಕ್ಯೂಟ್ ಕ್ಯೂಟ್ ಕಾಣಿಸೋ ಈ ನಟಿಯರು ಯಾರು ಗೊತ್ತಾ? ಗೆಸ್ ಮಾಡಿ ನೋಡೋಣ!!.
ಮೇಲಿನ ಫೋಟೋದಲ್ಲಿರುವ ಇಬ್ಬರೂ ಈಗ ಸೌತ್ ಇಂಡಿಯಾದ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಓರ್ವ ಹೀರೋಯಿನ್ ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಮತ್ತೋರ್ವ ಹೀರೋಯಿನ್ ಇತ್ತೀಚೆಗೆ ತೆರೆಗೆ ಬಂದ ‘ಹೃದಯಂ’ ಸಿನಿಮಾ (Hridayam Movie) ಮೂಲಕ ಜನರ ಮನ ಗೆದ್ದಿದ್ದಾರೆ.
ಈ ಇಬ್ಬರು ನಟಿಯರು ಚೈಲ್ಡ್ ಹುಡ್ ಸ್ನೇಹಿತರು. ಈಗಲೂ ಪಾರ್ಟಿಗಳಲ್ಲಿ ಭೇಟಿಯಾಗುತ್ತಲಿರುತ್ತಾರೆ. ಈ ಖ್ಯಾತ ನಟಿಯರು ಯಾರೆಂದು ಗೊತ್ತಾಯ್ತಾ? ಇವರು ಬೇರಾರೂ ಅಲ್ಲ ನಟಿ ಕಲ್ಯಾಣಿ ಪ್ರಿಯದರ್ಶನ್ (Kalyani Priyadarshini) ಮತ್ತು ಕೀರ್ತಿ ಸುರೇಶ್ (Keerthy Suresh). ಬಾಲ್ಯದಲ್ಲಿ ತೆಗೆಸಿಕೊಂಡ ಈ ಸ್ಟಾರ್ ನಟಿಯರ ಫೋಟೋ ಇದೀಗ ವೈರಲ್ ಆಗುತ್ತಿದೆ.

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಕೀರ್ತಿ ಸುರೇಶ್ ʼಗೀತಾಂಜಲಿʼ (Geetanjali) ಎಂಬ ಚಿತ್ರದ ಮೂಲಕ ನಾಯಕಿಯಾಗಿ ಗ್ರಾಂಡ್ ಎಂಟ್ರಿ ಕೊಟ್ಟು ಮತ್ತೆ ಹಿಟ್ ಲಿಸ್ಟ್ ಸಿನಿಮಾ ಗಳಲ್ಲಿ ನಟಿಸಿ ಟಾಲಿವುಡ್‌ನಲ್ಲಿ ʼನೇನು ಶೈಲಜಾʼ ಸಿನಿಮಾದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಗೋಲ್ಡನ್ ಗರ್ಲ್ ಆಗಿ ಟ್ರೆಂಡ್ ಸೃಷ್ಟಿಸಿದ ಬೆಡಗಿ ಕೀರ್ತಿ ಸುರೇಶ್(Keerthi Suresh) . ಮಲಯಾಳಂ ಬೆಡಗಿ ಕೀರ್ತಿ ಸುರೇಶ್ ತೆಲುಗು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಪಾಲಿನ ಎವರ್ ಗ್ರೀನ್ ಕ್ಯೂಟ್ ಆಂಡ್ ನ್ಯಾಚುರಲ್ ಲುಕ್ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ.
‘ಮಹಾನಟಿ’ ಚಿತ್ರದ ನಟನೆಗಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಒಲಿದಿದೆ. ಇತ್ತೀಚೆಗೆ ರಿಲೀಸ್ ಆದ ಉದಯನಿಧಿ ಸ್ಟಾಲಿನ್ ಅಭಿನಯದ ‘ಮಾಮನ್ನನ್’ ಸಿನಿಮಾ ಮೂಲಕ ಕೀರ್ತಿ ಸುರೇಶ್ ಮೆಚ್ಚುಗೆ ಪಡೆದರು. ಪ್ಯಾನ್ ಇಂಡಿಯಾ ಸಿನಿಮಾ ʼದಸರಾದಲ್ಲಿ ನಾನಿ ಜೊತೆಗೆ ತೆರೆ ಮೇಲೆ ಮಿಂಚಿದ್ದಾರೆ. ಸದ್ಯ ತೆಲುಗಿನ ‘ಭೋಲಾ ಶಂಕರ್’ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

image source: The Hans India
ಇನ್ನು ಕಲ್ಯಾಣಿ ಪ್ರಿಯದರ್ಶನ್ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕಲ್ಯಾಣಿ ಪ್ರಿಯದರ್ಶನ್ ‘ಹೆಲೋ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. 2022ರಲ್ಲಿ ರಿಲೀಸ್ ಆದ ಭರ್ಜರಿ ಸೂಪರ್ ಹಿಟ್ ‘ಹೃದಯಂ’ (Hridayam) ಚಿತ್ರದ ಮೂಲಕ ಸಖತ್ ನೇಮು, ಫೇಮು ಪಡೆದಿರುವ ನಟಿ ಕಲ್ಯಾಣಿ ಅವರು ಸದ್ಯ ಮಲಯಾಳಂ ಚಿತ್ರರಂಗದಲ್ಲಿ(Malayalam film industry) ಬ್ಯುಸಿ ಆಗಿದ್ದಾರೆ. ನಟಿ ಸ್ವತಂತ್ರವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ತಮ್ಮದೇ ಅಭಿಮಾನಿ ಬಳಗ ಸಂಪಾದಿಸಿದ್ದಾರೆ.
