Rachita ram: ಕನ್ನಡದ ಬುಲ್ ಬುಲ್, ಡಿಂಪಲ್ ಕ್ವೀನ್ ನಟಿ ರಚಿತರಾಮ್(Rachita ram) ಅಂದ್ರೆ ಕನ್ನಡಿಗರಿಗೆಲ್ಲರಿಗೂ ಬಹಳ ಅಚ್ಚು ಮೆಚ್ಚು. ಈ ನಮ್ ರಚ್ಚು ಇಂದು ಸಿನಿಮಾಗಳಲ್ಲಿ ಮಾತ್ರ ನಟಿಸದೆ ಕಿರುತರೆಯ ರಿಯಾಲಿಟಿ ಶೋಗಳಲ್ಲೂ ಮಿಂಚುತ್ತಿದ್ದಾರೆ. ಒಟ್ಟಿನಲ್ಲಿ ಡಿಂಪಲ್ ಕ್ವೀನ್ ಕನ್ನಡಿಗರಿಗೆ ಮನೆಮಾತಾಗಿದ್ದಾರೆ. ಆದ್ರೆ ಈಗ ಈ ಡಿಂಪಲ್ ಕ್ವೀನ್ ನ ಹಾಟ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಹೌದು, ರಚಿತಾ ರಾಮ್ ಹಾಟ್ ಸೀರೆ ಲುಕ್ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಇದನ್ನು ನೋಡಿದಂತ ಫ್ಯಾನ್ಸ್ ಅಂತೂ ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ನೋಡ್ಬಾರ್ದನ್ನಾ ನಾ ನೋಡಿದೆ ಎನ್ನುತ್ತಾ, ರಚ್ಚು ಸಿನಿಮಾ ಈಗ ಹಿಟ್ ಎನ್ನುತ್ತಿದ್ದಾರೆ.
ಹೆಚ್ಚಿನ ಸಿನಿಮಾಗಳಲ್ಲಿ ರಚಿತಾ ಟ್ರೆಡೀಷನಲ್ ಲುಕ್ ಆಯ್ಕೆಮಾಡಿಕೊಳ್ಳುತ್ತಾರೆ. ಆದರೆ ಕೆಲವು ವರ್ಷಗಳ ಹಿಂದೆ ಉಪೇಂದ್ರ ಜೊತೆ ಐ ಲವ್ ಯು ಸಿನಿಮಾದಲ್ಲಿ ರಚಿತಾ ಅವರು ಸಖತ್ ಹಾಟ್ ಆಗಿ ಕಾಣಿಸಿದ್ರು. ಬೆಡ್ ರೂಮ್ ಸೀನ್ ಸೇರಿದಂತೆ ಬಾತ್ ರೂಮ್ ಸೀನ್ ಗಳಲ್ಲಿ ರಚಿತಾನಾ ನೋಡಿ ಫ್ಯಾನ್ ಕಕ್ಕಾಬಿಕ್ಕಿಯಾಗಿದ್ರು. ಅಲ್ಲದೆ ಕುಟುಂಬದವರಿಂದಲೂ ವಿರೋಧ ವ್ಯಕ್ಕವಾಗಿತ್ತು. ಹೀಗಾಗಿ ಓಪನ್ ಆಗಿ ಕಣ್ಣೀರು ಹಾಕಿದ್ದ ರಚಿತ ಇನ್ಯಾವತ್ತು ಹೀಗೆ ನಟಿಸಲ್ಲ ಎಂದಿದ್ರು.
ಅದ್ರೆ ಇತ್ತೀಚೆಗೆ ರಿಲೀಸ್ ಆದ ಡಾಲಿ ಧನಂಜಯ್ ಜೊತೆ ಮಾನ್ಸೂನ್ ರಾಗ ಸಿನಿಮಾದಲ್ಲಿ ಮತ್ತೆ ರಚಿತಾ ಅವರು ಸೂಪರ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಮಾನ್ಸೂನ್ ರಾಗ ಸಿನಿಮಾದಲ್ಲಿ ವೇಶ್ಯೆ ಆಗಿ ಪಾತ್ರ ಮಾಡಿದ್ದಾರೆ. ಬೋಲ್ಡ್ ಪಾತ್ರಕ್ಕೆ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಅದ್ಯಾಕೆ ಗೊತ್ತಿಲ್ಲ ಈಗ ಆ ಸೀನ್ ವಿಡಿಯೋಗಳು ಮತ್ತು ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಹಾಟ್ ಲುಕ್ ಎಂದು ಲೀಕ್ ಆಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಹಲ್ ಚಲ್ ಸೃಷ್ಟಿಸಿವೆ.
