Home » Actor Asin: ‘ಗಜನಿ’ ನಟಿ ಆಸಿನ್ ದಾಂಪತ್ಯದಲ್ಲಿ ಬಿರುಕು ?!

Actor Asin: ‘ಗಜನಿ’ ನಟಿ ಆಸಿನ್ ದಾಂಪತ್ಯದಲ್ಲಿ ಬಿರುಕು ?!

0 comments
Actor Asin

Actor Asin: ದಶಕದ ಹಿಂದೆ ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಆಸಿನ್ (Actor Asin) ಕೂಡ ಒಬ್ಬರು. ಮಲಯಾಳಿ ಮೂಲದ ಈ ನಟಿ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದರು. ನಟನೆಯ ಜೊತೆಗೆ, ಅವರು ಡ್ಯಾನ್ಸರ್ ಕೂಡಾ ಹೌದು. ಆಸಿನ್ ಜನವರಿ 2016 ರಲ್ಲಿ ಮೈಕ್ರೋಮ್ಯಾಕ್ಸ್ ಸಹ-ಸಂಸ್ಥಾಪಕ ರಾಹುಲ್ ಶರ್ಮಾ (Rahul Sharma) ಅವರನ್ನು ವಿವಾಹವಾದರು. 2017 ರಲ್ಲಿ, ಆಸಿನ್ ತನ್ನ ಮೊದಲ ಮಗಳು ಅರಿನ್‌ಗೆ ಜನ್ಮ ನೀಡಿದರು‌. ಇದೀಗ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ನಟಿ ಆಸಿನ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.

ಇವರ ದಾಂಪತ್ಯ ಜೀವನ ಅಂತ್ಯಗೊಳ್ಳಲು ಕಾರಣ ರಾಹುಲ್ ಶರ್ಮಾ ಅವರ ಅಫೇರ್ ಎನ್ನಲಾಗಿದೆ. ರಾಹುಲ್ ಶರ್ಮಾ ಮತ್ತೋರ್ವ ಯುವತಿ ಜೊತೆ ಸಂಬಂಧ ಹೊಂದಿದ್ದಾರೆ. ಈ ವಿಚಾರ ಅಸಿನ್‌ಗೆ ತಿಳಿದು ಎಚ್ಚರಿಕೆ ಕೂಡ ನೀಡಿದ್ದರು. ಆದರೂ ರಾಹುಲ್ ಬೇರೊಬ್ಬಳ ಜೊತೆಗೆ ಆಪ್ತರಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ನಟಿ ಮಗಳ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಿದ್ದರು. ಆದರೀಗ ಸೋಶಿಯಲ್ ಮೀಡಿಯಾದಿಂದನೂ ದೂರ ಸರಿದಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಆಸಿನ್ ಇನ್‌ಸ್ಟಾಗ್ರಾಮ್‌ನಲ್ಲಿ (instagram) ಯಾವುದೇ ಪೋಸ್ಟ್ ಶೇರ್ ಮಾಡಿಲ್ಲ. ಪತಿಯ ಜೊತೆಗಿರುವ ಯಾವುದೇ ಫೋಟೋಗಳು ಸಹ ಕಾಣಿಸುತ್ತಿಲ್ಲ. ಹಾಗಾಗಿ ನೆಟ್ಟಿಗರು ನಟಿಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಅಂದಾಜಿಸಿದ್ದಾರೆ. ಸದ್ಯ ಈ ಬಗ್ಗೆ ನಟಿಯ ಪ್ರತಿಕ್ರಿಯೆಗೆ ಕಾಯಬೇಕಿದೆ.

ಅಂದಹಾಗೆ ಆಸಿನ್ 2001 ರಲ್ಲಿ ತನ್ನ 15 ನೇ ವಯಸ್ಸಿನಲ್ಲಿ ಸತ್ಯನ್ ಅಂತಿಕ್ಕಾಡ್ ಅವರ ಮಲಯಾಳಂ ಚಲನಚಿತ್ರ ನರೇಂದ್ರನ್ ಮಕನ್ ಜಯಕಾಂತನ್ ವಕಾ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಬಳಿಕ ಆಸಿನ್ ತಮಿಳಿನಲ್ಲಿ ಎಂ. ಕುಮಾರನ್ ಅವರ ಸನ್ ಆಫ್ ಮಹಾಲಕ್ಷ್ಮಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. 2004 ರಲ್ಲಿ ಬಂದ ಈ ಚಿತ್ರವೂ ಅದ್ಭುತ ಯಶಸ್ಸನ್ನು ಗಳಿಸಿತು.

ಶಿವಕಾಶಿ (2005), ವರಲಾರು (2006), ಪೊಕ್ಕಿರಿ (2007), ವೆಲ್ (2008) ಮತ್ತು ದಶಾವತಾರಂ (2008) ಆಕ್ಷನ್ ಚಿತ್ರಗಳಿಗೆ ಆಸಿನ್ ಹೆಸರುವಾಸಿಯಾಗಿದ್ದಾರೆ. ದಕ್ಷಿಣದಲ್ಲಿ ನಟನೆಯ ನಂತರ, ಆಸಿನ್ 2005 ರಲ್ಲಿ ಅಮೀರ್ ಖಾನ್ (amirkhan) ಜೊತೆ ‘ಗಜಿನಿ’ (gajini) ಸಿನಿಮಾದಲ್ಲಿ ನಟಿಸಿದರು. ಇದು ಹಿಂದಿ ಬ್ಲಾಕ್ಬಸ್ಟರ್ ಚಿತ್ರವಾಗಿತ್ತು. ಆಸಿನ್ ಎನ್ನುವುದಕ್ಕಿಂತ ಗಜನಿ ನಟಿ ಎಂದರೆ ಎಲ್ಲರಿಗೂ ಥಟ್ ಅಂತ ನೆನಪಾಗುತ್ತೆ. ಆದರೆ 2015 ರ ನಂತರ ಅವರು ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ವಿವಾಹದ ನಂತರ ನಟಿ ನಟನಾ ಲೋಕಕ್ಕೆ ವಿದಾಯ ಹೇಳಿದರು ಎನ್ನಲಾಗಿದೆ.

You may also like

Leave a Comment